Don't Miss!
- Sports
Ranji Trophy: ಕರ್ನಾಟಕ ಮಾರಕ ದಾಳಿಗೆ ತತ್ತರಿಸಿದ ಉತ್ತರಾಖಂಡ: 116 ರನ್ಗಳಿಗೆ ಆಲೌಟ್
- News
Breaking; ಸಹೋದರನ ವಿರುದ್ಧ ಅಭ್ಯರ್ಥಿ ಘೋಷಿಸಿದ ರೆಡ್ಡಿ!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತಲೇಲಿ ಕೂದಲಿಲ್ಲ, ಬುದ್ಧಿಯೂ ಇಲ್ಲ..ಸುಖಾಸುಮ್ಮನೆ ಆರೋಪ ಮಾಡ್ತಾರೆ: ರವಿ ಬೆಳಗೆರೆ
ಸ್ಯಾಂಡಲ್ ವುಡ್ ಗೆ ಡ್ರಗ್ ಮಾಫಿಯಾದ ನಂಟಿದೆ ಎನ್ನುವ ಆರೋಪದ ಬಗ್ಗೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. 'ಸ್ಯಾಂಡಲ್ ವುಡ್ ನಲ್ಲಿ ಪ್ರಮುಖ ನಟರು ಯಾರೂ ಡ್ರಗ್ ತೆಗೆದುಕೊಳ್ಳುವುದಿಲ್ಲ' ಎಂದರು ಬೆಳಗೆರೆ.
Recommended Video
ಹಿರಿಯ ನಟರಾದ ಅಂಬರೀಶ್, ವಿಷ್ಣುವರ್ಧನ್ ನನಗೆ ಉತ್ತಮ ಸ್ನೇಹಿತರಾಗಿದ್ದರು. ರಾಕ್ ಲೈನ್ ವೆಂಕಟೇಶ್ ಸಹ ನನಗೆ ಉತ್ತಮ ಗೆಳೆಯ. ಆದರೆ ಯಾವತ್ತೂ ಅವರು ಡ್ರಗ್ ಬಗ್ಗೆ ಮಾತನಾಡಿಲ್ಲ ಎಂದರು. ಚಿತ್ರರಂಗದಲ್ಲಿ ಉಪೇಂದ್ರ, ಜಗ್ಗೇಶ್, ದುನಿಯಾ ವಿಜಯ್ ಇವರ್ಯಾರು ಡ್ರಗ್ ತಗೊಳ್ಳಲ್ಲ, ಆದರೆ ಕೆಲವರು ಡ್ರಗ್ ತೆಗೆದುಕೊಂಡ ಹಾಗೆ ಮಾತನಾಡುತ್ತಾರೆ ಅಷ್ಟೆ ಎಂದಿದ್ದಾರೆ.
ಪೊಲೀಸರು ಒಂದು ಹುಳ ಬಿಟ್ಟು ನೋಡಿದ್ದಾರೆ. ಇದಕ್ಕೆ ತೆಲೇಲಿ ಕೂದಲು ಇಲ್ಲದ, ಬುದ್ಧಿಯೂ ಇಲ್ಲದವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ರವಿ ಬೆಳಗೆರೆ ಪರೋಕ್ಷವಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್‌ಗೆ ಟಾಂಗ್ ನೀಡಿದರು. ಡ್ರಗ್ ಮಾಫಿಯಾ ಕೇವಲ ಸಿನಿಮಾರಂಗ ಮಾತ್ರವಲ್ಲ, ಇದನ್ನು ದಾಟಿ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಹರಡಿದೆ. ಮಾದಕ ವ್ಯಸನದಿಂದ ಸಮಾಜವನ್ನು ರಕ್ಷಿಸಿ ಎಂದು ರವಿ ಬೆಳಗೆರೆ ಮನವಿ ಮಾಡಿದರು.
ಇದೆ ಸಮಯದಲ್ಲಿ ರೇವ್ ಪಾರ್ಟಿ ಬಗ್ಗೆ ಮಾತನಾಡಿದ ರವಿ ಬೆಳಗೆರೆ, ರೇವ್ ಪಾರ್ಟಿ ನಡೆಯುವುದು ಎಲ್ಲೊ ಕಾಡಿನಲ್ಲಿ ಅಲ್ಲ, ಬೆಂಗಳೂರು ಸರಹದ್ದಿನಲ್ಲಿಯೇ ನಡೆಯುತ್ತೆ. ಸ್ಥಳಿಯ ಇನ್ಸ್ ಪೆಕ್ಟರ್ ಅಥವಾ ಸಬ್ ಇನ್ಸ್ ಪೆಕ್ಟರ್ ಗೆ ಈ ವಿಚಾರ ಗೊತ್ತಿರುತ್ತೆ. ರೇವ್ ಪಾರ್ಟಿಯಲ್ಲಿ ಏನೇನು ಪೂರೈಕೆ ಆಗುತ್ತೆ ಎನ್ನುವ ಮಾಹಿತಿ ಇರುತ್ತೆ. ಆದರೂ ಅವರು ಸುಮ್ಮನಿರುತ್ತಾರೆ ಎಂದರು.
ರೇವ್ ಪಾರ್ಟಿಯಲ್ಲಿ ಗಾಂಜಾ, ಚರಾಸ್, ಕೊಕೇನ್ ಪೂರೈಕೆ ಆಗಬಹುದು. ಆದರೆ ಸಿನಿಮಾರಂಗಕ್ಕೆ ಡ್ರಗ್ ಲಿಂಕ್ ಇದೆ ಎಂದು ಸುಮ್ಮನೆ ಆರೋಪ ಮಾಡಲಾಗದು ಎಂದರು. ಬಾಲಿವುಡ್ ನಲ್ಲಿ ಡ್ರಗ್ ಮಾಫಿಯಾ ಇದೆ. ಈಗಾಗಲೆ ಕೆಲವರು ಪೊಲೀಸರ ಬಳಿ ಸಿಕ್ಕಿಹಾಕಿಕೊಂಡಿದ್ದಾರೆ. ಆದರೆ ಸ್ಯಾಂಡಲ್ ವುಡ್ ನಲ್ಲಿ ಇದೂವರೆಗೂ ಹೀಗೆ ಆಗಿಲ್ಲ ಎಂದರು ರವಿ ಬೆಳಗೆರೆ.