twitter
    For Quick Alerts
    ALLOW NOTIFICATIONS  
    For Daily Alerts

    ತಲೇಲಿ ಕೂದಲಿಲ್ಲ, ಬುದ್ಧಿಯೂ ಇಲ್ಲ..ಸುಖಾಸುಮ್ಮನೆ ಆರೋಪ ಮಾಡ್ತಾರೆ: ರವಿ ಬೆಳಗೆರೆ

    |

    ಸ್ಯಾಂಡಲ್ ವುಡ್ ಗೆ ಡ್ರಗ್ ಮಾಫಿಯಾದ ನಂಟಿದೆ ಎನ್ನುವ ಆರೋಪದ ಬಗ್ಗೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. 'ಸ್ಯಾಂಡಲ್ ವುಡ್ ನಲ್ಲಿ ಪ್ರಮುಖ ನಟರು ಯಾರೂ ಡ್ರಗ್ ತೆಗೆದುಕೊಳ್ಳುವುದಿಲ್ಲ' ಎಂದರು ಬೆಳಗೆರೆ.

    Recommended Video

    ಹಳ್ಳಿ ಹುಡುಗಿ ಲುಕ್ಕಲ್ಲಿ ರಚಿತಾ ಫುಲ್ ಮಿಂಚಿಂಗ್ | Rachita Ram Grand entry | Filmibeat Kannada

    ಹಿರಿಯ ನಟರಾದ ಅಂಬರೀಶ್, ವಿಷ್ಣುವರ್ಧನ್ ನನಗೆ ಉತ್ತಮ ಸ್ನೇಹಿತರಾಗಿದ್ದರು. ರಾಕ್ ಲೈನ್ ವೆಂಕಟೇಶ್ ಸಹ ನನಗೆ ಉತ್ತಮ ಗೆಳೆಯ. ಆದರೆ ಯಾವತ್ತೂ ಅವರು ಡ್ರಗ್ ಬಗ್ಗೆ ಮಾತನಾಡಿಲ್ಲ ಎಂದರು. ಚಿತ್ರರಂಗದಲ್ಲಿ ಉಪೇಂದ್ರ, ಜಗ್ಗೇಶ್, ದುನಿಯಾ ವಿಜಯ್ ಇವರ್ಯಾರು ಡ್ರಗ್ ತಗೊಳ್ಳಲ್ಲ, ಆದರೆ ಕೆಲವರು ಡ್ರಗ್ ತೆಗೆದುಕೊಂಡ ಹಾಗೆ ಮಾತನಾಡುತ್ತಾರೆ ಅಷ್ಟೆ ಎಂದಿದ್ದಾರೆ.

    ಪೊಲೀಸರು ಒಂದು ಹುಳ ಬಿಟ್ಟು ನೋಡಿದ್ದಾರೆ. ಇದಕ್ಕೆ ತೆಲೇಲಿ ಕೂದಲು ಇಲ್ಲದ, ಬುದ್ಧಿಯೂ ಇಲ್ಲದವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ರವಿ ಬೆಳಗೆರೆ ಪರೋಕ್ಷವಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್‌ಗೆ ಟಾಂಗ್ ನೀಡಿದರು. ಡ್ರಗ್ ಮಾಫಿಯಾ ಕೇವಲ ಸಿನಿಮಾರಂಗ ಮಾತ್ರವಲ್ಲ, ಇದನ್ನು ದಾಟಿ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಹರಡಿದೆ. ಮಾದಕ ವ್ಯಸನದಿಂದ ಸಮಾಜವನ್ನು ರಕ್ಷಿಸಿ ಎಂದು ರವಿ ಬೆಳಗೆರೆ ಮನವಿ ಮಾಡಿದರು.

    Senior Journalist Ravi Belagere Reaction About Drug Mafia In Sandalwood

    ಇದೆ ಸಮಯದಲ್ಲಿ ರೇವ್ ಪಾರ್ಟಿ ಬಗ್ಗೆ ಮಾತನಾಡಿದ ರವಿ ಬೆಳಗೆರೆ, ರೇವ್ ಪಾರ್ಟಿ ನಡೆಯುವುದು ಎಲ್ಲೊ ಕಾಡಿನಲ್ಲಿ ಅಲ್ಲ, ಬೆಂಗಳೂರು ಸರಹದ್ದಿನಲ್ಲಿಯೇ ನಡೆಯುತ್ತೆ. ಸ್ಥಳಿಯ ಇನ್ಸ್ ಪೆಕ್ಟರ್ ಅಥವಾ ಸಬ್ ಇನ್ಸ್ ಪೆಕ್ಟರ್ ಗೆ ಈ ವಿಚಾರ ಗೊತ್ತಿರುತ್ತೆ. ರೇವ್ ಪಾರ್ಟಿಯಲ್ಲಿ ಏನೇನು ಪೂರೈಕೆ ಆಗುತ್ತೆ ಎನ್ನುವ ಮಾಹಿತಿ ಇರುತ್ತೆ. ಆದರೂ ಅವರು ಸುಮ್ಮನಿರುತ್ತಾರೆ ಎಂದರು.

    ರೇವ್ ಪಾರ್ಟಿಯಲ್ಲಿ ಗಾಂಜಾ, ಚರಾಸ್, ಕೊಕೇನ್ ಪೂರೈಕೆ ಆಗಬಹುದು. ಆದರೆ ಸಿನಿಮಾರಂಗಕ್ಕೆ ಡ್ರಗ್ ಲಿಂಕ್ ಇದೆ ಎಂದು ಸುಮ್ಮನೆ ಆರೋಪ ಮಾಡಲಾಗದು ಎಂದರು. ಬಾಲಿವುಡ್ ನಲ್ಲಿ ಡ್ರಗ್ ಮಾಫಿಯಾ ಇದೆ. ಈಗಾಗಲೆ ಕೆಲವರು ಪೊಲೀಸರ ಬಳಿ ಸಿಕ್ಕಿಹಾಕಿಕೊಂಡಿದ್ದಾರೆ. ಆದರೆ ಸ್ಯಾಂಡಲ್ ವುಡ್ ನಲ್ಲಿ ಇದೂವರೆಗೂ ಹೀಗೆ ಆಗಿಲ್ಲ ಎಂದರು ರವಿ ಬೆಳಗೆರೆ.

    English summary
    Senior Journalist Ravi Belagere talked about Drug Mafia in Sandalwood.
    Saturday, August 29, 2020, 20:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X