ದರ್ಶನ್, ದುನಿಯಾ ವಿಜಿ ದಾಂಪತ್ಯ ಕಲಹ ಬಯಲು ಮಾಡಿದ ರವಿ ಬೆಳಗೆರೆ
Recommended Video
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಪತ್ನಿ ವಿಜಯಲಕ್ಷ್ಮಿಗೆ ಹೊಡೆದಿದ್ದಾರೆ ಎನ್ನುವ ಸುದ್ದಿ ಕೆಲವು ದಿನಗಳ ಹಿಂದೆ ಸದ್ದು ಮಾಡಿತ್ತು. ಈಗ ಈ ಘಟನೆಯ ಬಗ್ಗೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ಮಾತನಾಡಿದ್ದಾರೆ. ದರ್ಶನ್ ಬಗ್ಗೆ ಮಾತ್ರವಲ್ಲದೆ ನಟ ದುನಿಯ ವಿಜಯ್ ಮತ್ತು ನಿರ್ದೇಶಕ ಓಂ ಪ್ರಕಾಶ್ ಅವರ ಖಾಸಗಿ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಪ್ರತಿ ದಿನ 'ಬೆಳ್ ಬೆಳ್ಳಗೆ' ತಮ್ಮ ಯೂ ಟ್ಯೂಬ್ ಚಾನಲ್ ನಲ್ಲಿ ಪ್ರತ್ಯಕ್ಷ ಆಗುವ ರವಿ ಬೆಳಗೆರೆ, ದಿನಕ್ಕೊಂದು ವಿಷಯವನ್ನು ಹೊತ್ತು ತರುತ್ತಾರೆ. ಅದೇ ರೀತಿ ಈ ಬಾರಿ ಚಾಲೆಂಜಿಗ್ ಸ್ಟಾರ್ ಸಂಸಾರದ ಕಲಹದ ಸುದ್ದಿಯನ್ನು ಬಹಿರಂಗ ಪಡಿಸಿದ್ದಾರೆ.

ದರ್ಶನ್ ಗೆ ಹೆಂಡತಿಗೆ ಹೊಡೆಯುವ ಚಟ ಯಾಕೆ?
"ದರ್ಶನ್ ಒಳ್ಳೆಯ ಹುಡುಗ. ಆದರೆ ನೋಡಲಿಕ್ಕು ಸುಂದರವಾಗಿದ್ದಾರೆ. ಉತ್ತಮ ನಟ. ಪ್ರೀತಿಯ ರಾಮು ಚಿತ್ರವನ್ನು ವೀಕ್ಷಿಸಿದ್ದೇನೆ. ಕಮಿಟ್ ಆದ ಅಂದ್ರೆ ಅದನ್ನು ಮಾಡುವ ವರೆಗೂ ಬಿಡಲ್ಲ. ಆದ್ರೆ ಈ ಹುಡುಗನಿಗೆ ಯಾಕೆ ಹೆಂಡತಿಗೆ ಹೊಡೆಯವ ಚಟ ಎಂದು ಪ್ರಶ್ನಿಸಿದ್ದಾರೆ. ಒಂದು ಸಾರಿ ಅಂತೂ ಗಲಾಟೆ ಮಾಡಿಕೊಂಡು, ಪತ್ನಿಯ ಕೈಯನ್ನು ಬಾಗಿಲಿಗೆ ಇಟ್ಟು ರಪಾ ರಪಾ ಅಂತ ಹೊಡೆದು ಕೈ ಮುರಿದ್ದರು. ನಂತರ ಜೈಲಿಗೆ ಹೋಗಿದ್ದಾರೆ. ಬರಬಾರದ ಕಾಲದಲ್ಲಿ, ಬರಬಾರದ ರೀತಿಯಲ್ಲಿ ಬರಬಾರದ ದುಡ್ಡು ಬಂದ್ರೆ ಹೀಗಾಗುತ್ತೆ" ಎಂದಿದ್ದಾರೆ.

ಅಣ್ಣಾವ್ರ ನೋಡಿ ಕಲಿಯಬೇಕು
ಅಣ್ಣಾವ್ರ ನೋಡಿ ಕಲಿಯಬೇಕು. ಎಷ್ಟು ವರ್ಷ ಚಿತ್ರರಂಗದಲ್ಲಿ ಇದ್ರು. ಒಬ್ಬರಿಗಾದ್ರು ಕಪಾಳಕ್ಕೆ ಹೊಡೆದ್ರಾ ಇಲ್ಲ. ರಾಜ್ ಕುಮಾರ್ ಸಿನಿಮಾಗಳನ್ನು ನೋಡಿದ್ರೆ ಅವರಂತೆ ಆಗಬೇಕೆಂದು ಬಯಸುತ್ತಿದ್ದೆವು. ಅಪ್ಪ ಅಮ್ಮನ್ನು, ಪತ್ನಿನ ಚೆನ್ನಾಗಿ ನೋಡಿಕೊಳ್ಳಬೇಕು ಎನಿಸುತ್ತಿತ್ತು. ಅವರ್ಯಾರು ಕೂಡ ಹೆಂಡತಿಯನ್ನು ಹೊಡೆಯುತ್ತಿರಲಿಲ್ಲ.

ಯಾರ ಜೊತೆಗಾದ್ರು ಚೆನ್ನಾಗಿ ಇರು
"ಪವಿತ್ರ ಗೌಡ ಅಂತೆ, ದರ್ಶನ್ ಆ ಅಮ್ಮನ ಜೊತೆ ಇರ್ತಾನಂತೆ. ನಮ್ಮ ಪರ್ಸನಲ್ ಲೈಫ್ ಕೂಡ ಚೆನ್ನಾಗಿ ಇಟ್ಟುಕೊಳ್ಳಬೇಕು. ಮೊನ್ನೆ ಕುಡಿದು ಮತ್ತೆ ವಿಜಯ್ ಲಕ್ಷ್ಮಿಯನ್ನು ಹಿಡಿದು ಹೊಡೆದಿದ್ದಾನೆ. ಇದನ್ನ ವಿಜಯಲಕ್ಷ್ಮಿ ಒಬ್ಬರ ಹತ್ರ ಹೇಳಿಕೊಂಡಿದ್ದಾರೆ. ಗಂಡ ಹೆಂಡತಿ ಜಗಳ ಇದ್ದಿದ್ದೆ ಎಂದು ಹೇಳಿದ್ದಾರಂತೆ. ಆದ್ರೆ ಗಂಡ ಹೆಂಡತಿ ಜಗಳ ಯಾಕೆ ಬೀದಿಗೆ ಬರಬೇಕು. ಬಿಡಿಸಲಿಕ್ಕೆ ಬಂದ ರವಿಶಂಕರ್ ಗೂ ಹಿಡಿದು ಹೊಡೆದಿದ್ದಾರಂತೆ. ಇದನ್ನೆಲ್ಲ ಬಿಡಪ್ಪ ದರ್ಶನ್. ಪವಿತ್ರಗೌಡನೊ ಇನ್ನೊಬ್ಬರೊ ಯಾರ ಜೊತೆಗಾದ್ರು ಇರು" ಎಂದು ಬುದ್ದಿ ಹೇಳಿದ್ದಾರೆ.

ಪತ್ನಿ ಹೆಸರಲ್ಲಿದೆ ಕೋಟಿಗಟ್ಟಲೆ ಆಸ್ತಿ
"ವಿಜಯ್ ಲಕ್ಷ್ಮಿ ಹೆಸರಿನಲ್ಲಿ ಕೋಟಿಗಟ್ಟಲೆ ಆಸ್ತಿ ಮಾಡಿಟ್ಟಿದ್ದಾರೆ. ಇಬ್ಬರ ನಡುವೆ ಲವ್ವಿ ಡವ್ವಿ ಚೆನ್ನಾಗಿ ಇದ್ದಾಗ ಆಸ್ತಿ ಮಾಡಿ ಇಟ್ಟಿದ್ದಾರೆ. ಅದನ್ನ ವಾಪಸ್ ಕೊಡು ಅಂತ ದರ್ಶನ್ ಕೇಳುತ್ತಿದ್ರೆ, ಅದನ್ನ ಕೊಡಲ್ಲ ಎಂದು ವಿಜಯ್ ಲಕ್ಷ್ಮಿ ಹೇಳುತ್ತಿದ್ದಾರೆ. ನಮಗೇನು ಇದೆ ಕೆಲಸನಾ ಇದನ್ನೆಲ್ಲ ತೋರಸಲಿಕ್ಕೆ" ಎಂದು ಕಿಡಿಕಾರಿದ್ದಾರೆ.

'ಕರಿ ಗೊಬ್ರ' ವಿಜಯ್
"ದುನಿಯಾ ವಿಜಯ್ ಬಗ್ಗೆ ಅಂತೂ ಹೇಳಬೇಕಾಗಿಲ್ಲ. ಅವನದ್ದು ಇನ್ನೊಂದು ರೀತಿಯ ಅವಾಂತರ. ಎಷ್ಟು ಜನರನ್ನು ಮದುವೆ ಆಗುತ್ತಾನೆ. ಆ ಹೆಂಡತಿನ ಬಿಟ್ಟು ಇನ್ನೊಂದು, ಅವಳನ್ನು ಬಿಟ್ಟು ಮತ್ತೊಂದು ಮದುವೆ ಆಗುತ್ತಾನೆ. ಅದಷ್ಟು ಜನರನ್ನು ಮದುವೆ ಆಗ್ತಾನೆ ಅವನು, ಅವನು ಕೂಡ ಜೈಲ್ ಗಿರಾಕಿ. ಏನಾಗಿದೆ ಅವನಿಗೆ" ಎಂದು ವಿಜಯ್ ಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.

ಓಂ ಪ್ರಕಾಶ್ ಗೂ ಕ್ಲಾಸ್
ನಿರ್ದೇಶಕ ಓಂ ಪ್ರಕಾಶ್ ವಿರುದ್ಧವು ಟೀಕಾ ಪ್ರಹಾರ ನಡೆಸಿದ್ದಾರೆ. ಆತ ಕೂಡ ಐದಾರು ಮದುವೆ ಆಗಿದ್ದಾರೆ. ಓಂ ಪ್ರಾಕಾಶ್ ಕೇಳಿದ್ದೆ ಯಾಕೋ ಐದು ಮದುವೆ ಆದೆ ಅಂತ? ಅಮೇಲೆ ತಲೆ ಪರಪರ ಅಂತ ಕೆರೆದುಕೊಂಡ. ಆತ ನೋಡೋಕೆ ವಿಚಿತ್ರವಾಗಿದ್ದಾನೆ. ಜೇಬಲ್ಲಿ ಕಾಫಿ ಇಟ್ಟುಕೊಂಡಿರ್ತಾನೆ. ಮತ್ತೊಂದು ಜೇಬಲ್ಲಿ ಚಪಾತಿ ಇಟ್ಟುಕೊಂಡಿರ್ತಾನೆ. ಹೀರೋಯಿನ್ ನ ಬೈಯುತ್ತಿರುತ್ತಾನೆ. ಇವರಿಗೆಲ್ಲ ಬುದ್ಧಿ ಇದೆ ಜೊತೆಗೆ ವಕ್ರ ಬುದ್ದಿಯು ಇದೆ. ಕರುಣೆ ಬಂದ್ರೆ ಅವರನ್ನ ಮದುವೆ ಆಗುತ್ತಾನಂತೆ. ಕರುಣೆ ಇದ್ರೆ ಮದುವೆ ಆಗ್ತಾರಾ? ಎಂದು ಓಂ ಪ್ರಕಾಶ್ ಬಗ್ಗೆಯು ಮಾತನಾಡಿದ್ದಾರೆ.


Click it and Unblock the Notifications











