ಹಿರಿಯ ಸಿನಿಮಾ ನಿರ್ದೇಶಕ ಬೂದಾಳ್ ಕೃಷ್ಣಮೂರ್ತಿ ನಿಧನ

ಹಿರಿಯ ಚಲನಚಿತ್ರ ನಿರ್ದೇಶಕ, ನಟ ಬೂದಾಳ್ ಕೃಷ್ಣಮೂರ್ತಿ ಇಂದು (ಡಿಸೆಂಬರ್ 19) ಬೆಳಿಗ್ಗೆ ಕೆಂಗೇರಿಯ ಅಪಾರ್ಟ್‌ಮೆಂಟ್‌ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಚಿತ್ರದುರ್ಗದಲ್ಲಿ 1949ರಲ್ಲಿ ಜನಿಸಿದ ಇವರು 1973ರಲ್ಲಿ ಸಿದ್ಧಲಿಂಗಯ್ಯನವರ ಬೂತಯ್ಯನ ಮಗ ಅಯ್ಯು ಚಲನಚಿತ್ರದ ಸಹಾಯಕ ನಿರ್ದೇಶಕರಾಗುವ ಮೂಲಕ ಚಿತ್ರಂಗ ಪ್ರವೇಶಿಸಿದರು.

ಎರಡು ದಂಡೆಯ ಮೇಲೆ, ಒಲವಿನ ಕಾಣಿಕೆ, ಸೀತಾಂಜನೇಯ, ಶುಭಲಗ್ನ, ಲಂಚ ಸಾಮ್ರಾಜ್ಯ ಮುಂತಾದ ಚಿತ್ರಗಳನ್ನು ಬೂದಾಳ್ ನಿರ್ದೇಶಿಸಿದ್ದರು. ಜೊತೆಗೆ ತಮ್ಮ ಸಿನಿಮಾಗಳಿಗೆ ತಾವೇ ಹಾಡುಗಳನ್ನು ಸಹ ಬರೆಯುದ್ದಿದ್ದರು ಬೂದಾಳ್ ಕೃಷ್ಣಮೂರ್ತಿ.

Senior Kannada Movie Director Boodal Krishnamurthy Passed Away

ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡುತ್ತಿದ್ದ ಬೂದಾಳ್ ಕೃಷ್ಣಮೂರ್ತಿ ಅವರು ಪ್ರೊಫೆಸರ್, ಶ್ರೀಗಂಧ, ಅರಿಶಿನ ಕುಂಕುಮ, ಬಲ್ ನನ್ಮಗ, ಪ್ರಜಾಶಕ್ತಿ, ನಿರ್ಣಯ, ಆರ್ಯಭಟ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದರು.

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಉಪಾಧ್ಯಕ್ಷರಾಗಿಯೂ ಬೂದಾಳ್ ಕೃಷ್ಣಮೂರ್ತಿ ಅವರು ಸೇವೆ ಸಲ್ಲಿಸಿದ್ದರು. ಹಿರಿಯ ಸಿನಿಮಾಕರ್ಮಿಗಳು ಬೂದಾಳ್ ಕೃಷ್ಣಮೂರ್ತಿ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

More from Filmibeat

English summary
Senior Kannada movie director Boodal Krishnamurthy passed away today in his apartment in Kengeri.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X