For Quick Alerts
  ALLOW NOTIFICATIONS  
  For Daily Alerts

  ಹಿರಿಯ ನಟಿ, ನೃತ್ಯ ಕಲಾವಿದೆ ಸುರೇಖ ನಿಧನ

  |

  ಕನ್ನಡ ಚಿತ್ರರಂಗದ ಹಿರಿಯ ನಟಿ ಹಾಗೂ ಭರತನಾಟ್ಯ, ಕೂಚುಪುಡಿ ನೃತ್ಯ ಕಲಾವಿದೆ ಸಹ ಆಗಿದ್ದ ಸುರೇಖ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.

  ಡಾ.ರಾಜ್‌ಕುಮಾರ್ ಜೊತೆಗೆ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಸುರೇಖ ಸುಮಾರು 160 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.

  ತ್ರಿಮೂರ್ತಿ, ಜಾಕ್‌ಪಾಟ್, ಒಲವು-ಗೆಲುವು, ಗಿರಿ ಕನ್ಯೆ, ಸಾಕ್ಷಾಕ್ತಾರ, ಹುಲಿಯ ಹಾಲ ಮೇವು, ಶಿಕನ್ಯೆ, ಬ್ಯಾಂಕರ್ ಮಾರ್ಗಯ್ಯ, ನಾಗರಹೊಳೆ, ತಾಯಿ ದೇವರು, ಭಕ್ತ ಸಿರಿಯಾಳ, ಕಸ್ತೂರಿ ನಿವಾಸ ಇನ್ನೂ ಹಲವಾರು ಸಿನಿಮಾಗಳಲ್ಲಿ ಸುರೇಖ ನಟಿಸಿದ್ದರು.

  ಮಂಡಿ ನೋವು ಹೊರತುಪಡಿಸಿ ಸುರೇಖಗೆ ಮತ್ಯಾವ ಸಮಸ್ಯೆ ಇರಲಿಲ್ಲ. ಆದರೆ ಶನಿವಾರ ರಾತ್ರಿ ಟಿವಿ ನೋಡುತ್ತಿದ್ದಾಗ ಹೃದಯಾಘಾತವಾಯಿತು. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅಸುನೀಗಿದರು ಎಂದು ಸುರೇಖ ಕುಟುಂಬಸ್ಥರು ತಿಳಿಸಿದ್ದಾರೆ.

  ಸುರೇಖ ಅವರಿಗೆ ಶಾರದಾ ಹಾಗೂ ಪ್ರೇಮ ಎಂಬ ಸಹೋದರಿಯರಿದ್ದಾರೆ. ಸುರೇಖಗೆ ವಿವಾಹವಾಗಿರಲಿಲ್ಲ. ಸುರೇಖ ಅಂತಿಮ ಸಂಸ್ಕಾರವನ್ನು ಇಂದು ಬನಶಂಕರಿ ಚಿತಾಗಾರದಲ್ಲಿ ನಡೆಸಲಾಗಿದೆ.

  ಪ್ಲೀಸ್ ನಿಮ್ಮ ಕಾಲಿಗೆ ಬೀಳ್ತೀನಿ ಬಿಡಿ ಅಂತ Sonu Sood ಬಳಿ ಕಣ್ಣೀರಿಟ್ಟ ಯುವತಿ | Filmibeat Kannada

  ಎರಡು ದಿನದ ಹಿಂದಷ್ಟೆ ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ.ಜಯಾ ನಿಧನ ಹೊಂದಿದ್ದರು. ಇದೀಗ ಸುರೇಖ ನಿಧನರಾಗಿದ್ದಾರೆ. ಇದು ಮಾತ್ರವೇ ಅಲ್ಲದೆ ಕೋವಿಡ್ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಹಲವಾರು ಮಂದಿ ಜೀವ ಕಳೆದುಕೊಂಡಿದ್ದಾರೆ.

  English summary
  Senior movie actress Surekha passed away yesterday. She acted in more than 160 Kannada movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X