ಅಂಬರೀಶ್-ರಜನೀಕಾಂತ್‌ ಸಿನಿಮಾ ಮಾಡಿದ್ದ ನಿರ್ದೇಶಕ ಇಂದು ದಯನೀಯ ಸ್ಥಿತಿಯಲ್ಲಿ

ಅಂಬರೀಶ್ ಒಬ್ಬರಿಗೇ ಬರೋಬ್ಬರಿ 27 ಸಿನಿಮಾಗಳನ್ನು ನಿರ್ದೇಶಿಸಿದ್ದ ಹೆಸರಾಂತ ನಿರ್ದೇಶಕ ಎಟಿ ರಘು ಇಂದು ದಯನೀಯ ಸ್ಥಿತಿಯಲ್ಲಿದ್ದಾರೆ.

ಅಂಬರೀಶ್‌ಗೆ ದೊಡ್ಡ ಸ್ಟಾರ್ ಪಟ್ಟ ತಂದುಕೊಟ್ಟ 'ಮಂಡ್ಯದ ಗಂಡು' ಸಿನಿಮಾ ಸೇರಿದಂತೆ, ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ಕೊಟ್ಟಿರುವ ನಿರ್ದೇಶಕ ಎ.ಟಿ.ರಘು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜೊತೆಗೆ ಆರ್ಥಿಕ ಸಂಕಷ್ಟಕ್ಕೂ ಸಿಲುಕಿದ್ದಾರೆ.

ನಟ ರಜನೀಕಾಂತ್ ನಟಿಸಿದ ಹಿಂದಿ ಸಿನಿಮಾ 'ತೇರಿ ಅದಾಲತ್' ಅನ್ನು ಸಹ ನಿರ್ದೇಶಿಸಿದ್ದ ಎ.ಟಿ.ರಘು ಈಗ ಬಹು ಅಂಗ ವೈಫಲ್ಯಕ್ಕೆ ಒಳಗಾಗಿ ವೀಲ್‌ ಚೇರ್ ಮೇಲೆ ದಿನ ಕಳೆಯುತ್ತಿದ್ದಾರೆ.

Senior Movie Director AT Raghu Is In Trouble Looking For Help

ಎರಡು ಕಾಲು, ಕಣ್ಣು, ಕಿಡ್ನಿ, ಹೃದಯ ಶಸ್ತಚಿಕಿತ್ಸೆಗೆ ಒಳಗಾಗಿರುವ ರಘು, ವಾರಕ್ಕೆರಡು ಬಾರಿ ಡಯಾಲಿಸಿಸ್ ಸಹ ಮಾಡಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಯ ಸತತ ಅಲೆದಾಟದಿಂದ ಆರ್ಥಿಕವಾಗಿ ಸಹ ಸಂಕಷ್ಟಕ್ಕೆ ಸಿಲುಕಿರುವ ಎ.ಟಿ.ರಘು ಈಗ ನೆರವಿನ ಹಸ್ತ ಚಾಚಿದ್ದಾರೆ.

ಸರ್ಕಾರದಿಂದ ತುಸು ನೆರವು ಸಿಕ್ಕಿದೆಯಾದರೂ ರಘು ಅವರ ಆರೋಗ್ಯ ಚಿಕಿತ್ಸೆ ವೆಚ್ಚ ಭರಿಸಲು ಅದು ಏನೂ ಸಾಲದು ಎಂಬ ಸ್ಥಿತಿ. ಚಿತ್ರರಂಗದ ಗಣ್ಯರು, ಸಂಘ-ಸಂಸ್ಥೆಗಳು ರಘು ಅವರಿಗೆ ಸಹಾಯ ಮಾಡಿದರೆ ಒಳಿತು ಎನ್ನುತ್ತಾರೆ ರಘು ಆಪ್ತರು ಮತ್ತು ಕುಟುಂಬ ವರ್ಗ.

ನೆರವು ನೀಡುವ ಆಸಕ್ತಿ ಇರುವವರಿಗಾಗಿ: ಎಟಿ ರಘು, ಖಾತೆ ಸಂಖ್ಯೆ: 144010031268, ಐಎಫ್‌ಎಸ್‌ಸಿ ಕೋಡ್‌: ಕೆಕೆಬಿಕೆ0008272, ಕೋಟಕ್‌ ಮಹೀಂದ್ರಾ ಬ್ಯಾಂಕ್.

Recommended Video

ನಟನೆ ಜೊತೆಗೆ ಮತ್ತೊಂದು ಕೆಲಸಕ್ಕೆ ಕೈ ಹಾಕಿದ ಲೂಸ್ ಮಾದ ಯೋಗಿ | Filmibeat Kannada

More from Filmibeat

English summary
Movie director AT Raghu is in health and financial trouble. He is looking for help.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X