For Quick Alerts
  ALLOW NOTIFICATIONS  
  For Daily Alerts

  ಹಿರಿಯ ರಂಗಕರ್ಮಿ, ನಟ ಎಚ್.ಜಿ ಸೋಮಶೇಖರ್ ರಾವ್ ನಿಧನ

  |

  ಹಿರಿಯ ರಂಗಭೂಮಿ ಕಲಾವಿದ ಮತ್ತು ನಟ ಎಚ್.ಜಿ ಸೋಮಶೇಖರ್ ರಾವ್ ನಿಧನ ಹೊಂದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 86 ವರ್ಷದ ಸೋಮಶೇಖರ್ ರಾವ್ ಇಂದು ಬೆಳಗ್ಗೆ 12.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

  ಸೋಮಶೇಖರ್ ರಾವ್ ಹಿರಿಯ ನಟ ದತ್ತಣ್ಣ ಅವರ ಸಹೋದರ. ಬ್ಯಾಂಕ್ ಅಧಿಕಾರಿಯಾಗಿದ್ದ ಎಚ್.ಜಿ ಸೋಮಶೇಖರ್ ರಾವ್ ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದರು. ಅನೇಕ ಪಾಶ್ಚಿಮಾತ್ಯ ಮತ್ತು ಭಾರತೀಯ ನಾಟಕ ಕರ್ತೃಗಳ ಕೃತಿಗಳನ್ನು ರಂಗಭೂಮಿಯ ಮೇಲೆ ಜೀವಂತಗೊಳಿಸಿದವರು.

  ಒಡಿಯಾ ಭಾಷೆಯ ಖ್ಯಾತ ಸಿನಿಮಾ ನಿರ್ದೇಶಕ ರಾಜು ಮಿಶ್ರಾ ನಿಧನ

  1981ರಲ್ಲಿ ಟಿ.ಎಸ್ ರಂಗ ನಿರ್ದೇಶನದ 'ಸಾವಿತ್ರಿ' ಸಿನಿಮಾ ಮೂಲಕ ಸೋಮಶೇಖರ್ ರಾವ್ ಚಿತ್ರರಂಗವನ್ನು ಪ್ರವೇಶಿಸಿದ್ದಾರೆ. ನಂತರ ರಾಯರು ಅನೇಕ ಚಿತ್ರಗಳಲ್ಲಿ ಭಾವ ಪ್ರಧಾನ ಮತ್ತು ಹಾಸ್ಯ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರವಿ ನಿರ್ದೇಶನದ 'ಮಿಥಿಲೆಯ ಸೀತೆಯರು' ಇವರ ಅಭಿನಯ ಸಾಮರ್ಥ್ಯವನ್ನು ಸರಿಯಾಗಿ ಗುರುತಿಸುವಂತೆ ಮಾಡಿತು.

  ಈ ತರಹದ ಸಿನ್ಸೆಪ್ಟ್ ಇದುವರೆಗೂ ಬಂದಿಲ್ಲ | Shivakumar | Mukhavaada Illadavanu

  ರವಿ ಅವರೇ ನಿರ್ದೇಶಿಸಿದ ಇನ್ನೊಂದು ಚಿತ್ರ 'ಹರಕೆಯ ಕುರಿ'ಯಲ್ಲಿ ಸೋಮಶೇಖರ್ ರಾವ್ ನೀಡಿದ ಸೊಗಸಾದ ಅಭಿನಯಕ್ಕಾಗಿ 1992 -93ನೇ ಸಾಲಿನ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತ್ತು. ಕನ್ನಡ ರಂಗಭೂಮಿಗೆ ತಮ್ಮ ಸೇವೆಯನ್ನು ಸಲ್ಲಿಸುವುದೇ ಸೋಮಶೇಖರ್ ರಾವ್ ಅವರ ನಿಜವಾದ ಕಾಯಕವಾಯಿತು. ಕಿರುತೆರೆ, ಚಲನಚಿತ್ರಗಳಿಗಿಂತ ಮಿಗಿಲಾಗಿ ರಂಗ ಕೈಂಕರ್ಯವನ್ನು ಪ್ರೀತಿಸಿದ ಸೋಮಶೇಖರ್ ರಾವ್ ಇನ್ನು ನೆನಪು ಮಾತ್ರ.

  English summary
  Senior Theater artist and Actor H G Somashekar Rao passes away.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X