twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಕ್ಕೆ ಸ್ಮರಣೀಯ ಸಿನಿಮಾಗಳನ್ನು ನೀಡಿದ ನಿರ್ದೇಶಕ ವಿಜಯ ರೆಡ್ಡಿ ನಿಧನ

    |

    ಮಯೂರ, ಶ್ರೀನಿವಾಸ ಕಲ್ಯಾಣ, ನಾ ನಿನ್ನ ಮರೆಯಲಾರೆ, ಸನಾದಿ ಅಪ್ಪಣ್ಣ, ಗಂಧದ ಗುಡಿ, ಬಡವರ ಬಂಧು, ಹುಲಿಯ ಹಾಲಿನ ಮೇವು, ನೀ ನನ್ನ ಗೆಲ್ಲಲಾರೆ, ಭಕ್ತ ಪ್ರಹಲ್ಲಾದ ಇಂಥಹಾ ಸದಾ ಸ್ಮರಣೀಯ ಕನ್ನಡ ಚಿತ್ರಗಳನ್ನು ನೀಡಿದ ಖ್ಯಾತ ಸಿನಿಮಾ ನಿರ್ದೇಶಕ ವಿಜಯ ರೆಡ್ಡಿ ನಿಧನರಾಗಿದ್ದಾರೆ.

    84 ವರ್ಷ ವಯಸ್ಸಾಗಿದ್ದ ವಿಜಯ್ ರೆಡ್ಡಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಬಹು ಅಂಗಾಂಗ ವೈಫಲ್ಯ ಸಹ ಉಂಟಾಗಿತ್ತು.

    ಕನ್ನಡದಲ್ಲಿ ಸುಮಾರು 40 ಸಿನಿಮಾಗಳನ್ನು ವಿಜಯ ರೆಡ್ಡಿ ನಿರ್ದೇಶಿಸಿದ್ದಾರೆ. ತೆಲುಗು, ತಮಿಳುಗಳಲ್ಲಿ ಸಹ ಅವರು ಸಿನಿಮಾ ನಿರ್ದೇಶಿಸಿದ್ದರು.

    Seniour Director Vijaya Reddy Passed Away On October 09

    1970 ರಲ್ಲಿ ತೆರೆ ಕಂಡಿದ್ದ ರಂಗಮಹಲ್ ರಹಸ್ಯ ವಿಜಯ ರೆಡ್ಡಿ ನಿರ್ದೇಶಿಸಿದ್ದ ಮೊದಲ ಸಿನಿಮಾ, ಆ ನಂತರ ಡಾ.ರಾಜ್‌ಕುಮಾರ್ ಅವರೊಂದಿಗೆ ಹಲವು ಸಿನಿಮಾಗಳಲ್ಲಿ ವಿಜಯ ರೆಡ್ಡಿ ಕೆಲಸ ಮಾಡಿದರು. 70 ರ ದಶಕದ ಸ್ಟಾರ್ ನಿರ್ದೇಶಕ ಎಂಬ ಹೆಸರು ಪಡೆದಿದ್ದರು ವಿಜಯ ರೆಡ್ಡಿ.

    ತಮ್ಮ ಇಳಿಗಾಲದಲ್ಲಿ ಧಾರಾವಾಹಿ ನಿರ್ದೇಶನವನ್ನೂ ಮಾಡಿದ ವಿಜಯ ರೆಡ್ಡಿ, ಶ್ರೀ ವೆಂಕಟೇಶ್ವರ ಮಹಿಮೆ ಎಂಬ ಧಾರಾವಾಹಿಯನ್ನು ತೆಲುಗು ಹಾಗೂ ಕನ್ನಡ ಏಕಕಾಲದಲ್ಲಿ ನಿರ್ದೇಶಿಸಿದ್ದರು.

    Recommended Video

    ಜೈಲಲ್ಲೇ Sanjana ಆಸೆಯನ್ನು ಈಡೇರಿಸ್ತಾರ ಪೊಲೀಸರು | Sanjana 31st Birthday | Filmibeat Kannada

    'ವಿಜಯ ರೆಡ್ಡಿ ಅವರ ವಿದ್ವತ್ತು ಅವರ ವಿನಯ, ಸಜ್ಜನಿಕೆ ಎಲ್ಲಕ್ಕಿಂತ ಹೆಚ್ಚು ಅತಿ ಶಿಸ್ತಿನ ಮನೋಭಾವ! ಬೆಳಗ್ಗೆ ಆರು ಗಂಟೆಗೆ ಸರಿಯಾಗಿ ಶುಭ್ರ ಬಿಳಿಯ ಬಟ್ಟೆಯಲ್ಲಿ ಕರಾರುವಾಕ್ಕಾಗಿ ಬಂದು ಚಿತ್ರೀಕರಣಕ್ಕೆ ಸಿದ್ಧರಾಗಿ ಎಲ್ಲರನ್ನೂ ಹುಮ್ಮಸ್ಸಿನಿಂದ ಪ್ರೇರೇಪಿಸುತ್ತಿದ್ದ ಬಗೆ ನನಗೆ ಕಣ್ಣಿಗೆ ಕಟ್ಟಿದಂತಿದೆ! ವಿಜಯ್ ಸರ್ ನಮ್ಮೆಲ್ಲರಿಗೂ ಪ್ರೀತಿಪಾತ್ರ ನಿರ್ದೇಶಕರಾಗಿದ್ದರು. ಅಷ್ಟು ಹಿರಿಯ ನಿರ್ದೇಶಕರಾಗಿದ್ದರೂ ಅವರು ತಾಳ್ಮೆಯಿಂದ, ನನ್ನೆಲ್ಲ ಕುತೂಹಲದ ಪ್ರಶ್ನೆಗಳಿಗೆ ಪ್ರೀತಿಯಿಂದ ಉತ್ತರಿಸುತ್ತಿದ್ದರು. ಚಿತ್ರೀಕರಣದ ಅವರ ನಡವಳಿಕೆ ನನಗೆ ಒಂದು ತಲೆಮಾರಿನ ಪರಂಪರೆ ಮತ್ತು ಸ೦ಯಮಯವನ್ನೇ ನೋಡುತ್ತಿದ್ದ ಹಾಗಾಗುತ್ತಿತ್ತು' ಎಂದು ನಟ ಮಂಡ್ಯ ರಮೇಶ್ ನೆನಪಿಸಿಕೊಂಡಿದ್ದಾರೆ.

    English summary
    Kannada movie industry senior director Vijaya Reddy passed away on October 09 in Chennai's hospital.
    Saturday, October 10, 2020, 9:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X