»   » ದಿಗಂತ್ ಚಿತ್ರಕ್ಕೆ ಮಲಯಾಳಂ ನಿರ್ದೇಶಕ ಆಕ್ಷನ್ ಕಟ್! ಯಾರದು?

ದಿಗಂತ್ ಚಿತ್ರಕ್ಕೆ ಮಲಯಾಳಂ ನಿರ್ದೇಶಕ ಆಕ್ಷನ್ ಕಟ್! ಯಾರದು?

Posted By:
Subscribe to Filmibeat Kannada

ದೂದ್ ಪೇಡಾ ದಿಗಂತ್ ಈಗ ಯಾವ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಕಾಡುತ್ತಿದೆ. ಬಾಲಿವುಡ್ ಗೆ ಹೋಗಿ ಬಂದ ನಂತರ ಕನ್ನಡದಲ್ಲಿ ದಿಗಂತ್ ಸಿನಿಮಾ ಸಂಖ್ಯೆ ಕಮ್ಮಿಯಾಗಿದೆ ಎಂಬ ಮಾತು ಕೂಡ ಇದೆ. ಹೀಗಿರುವಾಗ, ದಿಗಂತ್ ಅವರ ಹೊಸ ಸಿನಿಮಾದ ಸುದ್ದಿ ಬಂದಿದೆ.

ಹೌದು, ಪುಷ್ಕರ್ ಮಲ್ಲಿಕಾರ್ಜುನ ಮತ್ತು ನಟ ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ ಮೂಡಿ ಬರಲಿರುವ ಚಿತ್ರವೊಂದರಲ್ಲಿ ದಿಗಂತ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ರಕ್ಷಿತ್ ಶೆಟ್ಟಿ 'ಹಂಬಲ್ ಪೊಲಿಟಿಶಿಯನ್ ನೋಗರಾಜ್' ಚಿತ್ರದ ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು. ಇತ್ತೀಚೆಗೆ 'ಭೀಮಸೇನ ನಳಮಹರಾಜ' ಎಂಬ ಚಿತ್ರವನ್ನು ಶುರು ಮಾಡಿದ್ದರು. ಈ ಗ್ಯಾಪ್ ನಲ್ಲಿ ದಿಗಂತ್ ರನ್ನು ನಾಯಕನನ್ನಾಗಿಸಿ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ.

ದಿಗಂತ್ ಜೊತೆಗಿನ ಸಂಬಂಧದ ಬಗ್ಗೆ ಐಂದ್ರಿತಾ ನಿಜ ಹೇಳಿದ್ರೋ.? ಸುಳ್ಳು ಹೇಳಿದ್ರೋ.?

Senna Hegde Direct Next film to Actor Diganth

ವಿಶೇಷ ಅಂದ್ರೆ ಈ ಚಿತ್ರಕ್ಕೆ ಮಲಯಾಳಂ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಮಲಯಾಳಂನಲ್ಲಿ '0-41*' ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಸೆನ್ನಾ ಹೆಗಡೆ, ದಿಗಂತ್ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಯವಾಗ್ತಿದ್ದಾರೆ

ಇದೊಂದು ರೊಮ್ಯಾಂಟಿಕ್-ಕಾಮಿಡಿ ಚಿತ್ರವಾಗಿದ್ದು, ದಿಗಂತ್ ವೃತ್ತಿ ಜೀವನದಲ್ಲಿ ವಿಭಿನ್ನ ಚಿತ್ರವಾಗಲಿದೆಯಂತೆ. ಸದ್ಯಕ್ಕೆ ಚಿತ್ರದ ಕೆಲಸಗಳು ಶುರುವಾಗಿದ್ದು, ನವೆಂಬರ್‌ನಲ್ಲಿ ಚಿತ್ರ ಪ್ರಾರಂಭವಾಗಲಿದೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಕಲಾವಿದರನ್ನ ಆಯ್ಕೆ ಮಾಡಬೇಕಿದೆ.

English summary
After 'Happy New Year', actor Diganth has silently signed a new film with Pushkar Mallikarjun and Rakshith Shetty jointly. The untitled film is being directed by Malayalam Director Senna Hegde.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada