'ಕೋಣ' ಏರಿ ಪ್ಯಾನ್ ಇಂಡಿಯಾ ಸ್ಟಾರ್ ಆಗ್ತಾರಾ ಕೋಮಲ್? ಇದು ಆ ಸಿನಿಮಾ ರೀಮೆಕಾ?

ಸೆನ್ಸೇಷನಲ್ ಸ್ಟಾರ್ ಕೋಮಲ್ ಕಮಾಲ್ ಯಾಕೋ ಇತ್ತೀಚೆಗೆ ನಡೀತಿಲ್ಲ. ಬಹಳ ದಿನಗಳ ನಂತರ ಬಂದ 'ಉಂಡೆನಾಮ', 'ನಮೋ ಭೂತಾತ್ಮ'-2 ಸಿನಿಮಾಗಳು ಕೂಡ ಕೈ ಹಿಡಿಯಲಿಲ್ಲ. ಹಾಗಂತ ಅವರು ಸುಮ್ಮನಾಗಿಲ್ಲ. ತಮ್ಮ ಪ್ರಯತ್ನ ಮುಂದುವರೆಸುತ್ತಲೇ ಇದ್ದಾರೆ. ಈ ಬಾರಿ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗುತ್ತಿದ್ದಾರೆ.

ಹರಿಕೃಷ್ಣ .ಎಸ್ ನಿರ್ದೇಶನದ 'ಕೋಣ' ಚಿತ್ರದಲ್ಲಿ ಕೋಮಲ್ ಹೀರೊ ಆಗಿ ನಟಿಸುತ್ತಿದ್ದಾರೆ. ಸದ್ಯ ಚಿತ್ರ ಫಸ್ಟ್ ಲುಕ್ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿದೆ. ತೇಜ್‌ವಿನ್ ಪ್ರೊಡಕ್ಷನ್ಸ್ ಹಾಗೂ ರೀಲ್ ಸ್ಟುಡಿಯೋಸ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿವೆ. ಎ2 ಮ್ಯೂಸಿಕ್ ಸಂಸ್ಥೆ ಕೂಡ ಕೈ ಜೋಡಿಸಿದೆ.

Sensational Star Komal Kumars Kona movie first look Poster released

ಬಿ. ವಿನೋದ್ ಕುಮಾರ್ ಹಾಗೂ ಸೆಲ್ವಾ 'ಕೋಣ' ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಕೋಣವೊಂದು ಓಡುತ್ತಿದ್ದು ಅದರ ಹಿಂದೆ ಊರಿನ ಜನ ಪಂಚು, ಕತ್ತಿ, ಭರ್ಜಿ ಹಿಡಿದು ಹಿಂದೆ ಓಡುತ್ತಿರುವಂತೆ ಫಸ್ಟ್ ಲುಕ್ ಪೋಸ್ಟರ್ ಡಿಸೈನ್ ಮಾಡಿದ್ದಾರೆ. ಮೊದಲ ನೋಟದಲ್ಲೇ ಪೋಸ್ಟರ್ ಗಮನ ಸೆಳೆಯುತ್ತಿದೆ. ಇನ್ನು ಪೋಸ್ಟರ್ ನೋಡಿದವರು 'ಕೋಣ' ಮಲಯಾಳಂನ 'ಜಲ್ಲಿಕಟ್ಟು' ಸಿನಿಮಾ ರೀಮೇಕಾ? ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಯಾಕಂದರೆ ಆ ಸಿನಿಮಾ ಕತೆ ಕೂಡ ಒಂದು ಕೋಣದ ಸುತ್ತಾ ಸುತ್ತುತ್ತದೆ. ಎರಡೂ ಪೋಸ್ಟರ್‌ನಲ್ಲೂ ಸಾಮ್ಯತೆ ಕಾಣುತ್ತಿದೆ.

ಶಶಾಂಕ್ ಶೇಷಗಿರಿ ಸಂಗೀತ, ವಿನೋದ್ ಕುಮಾರ್ ಛಾಯಾಗ್ರಹಣ 'ಕೋಣ' ಚಿತ್ರಕ್ಕಿದೆ. ಸದ್ಯ 'ಕೋಣ' ಚಿತ್ರದ ಪೋಸ್ಟರ್ ವೈರಲ್ ಆಗುತ್ತಿದೆ. ಕನ್ನಡ ಚಿತ್ರರಂಗದಲ್ಲೂ ಈಗ ಪ್ಯಾನ್ ಇಂಡಿಯಾ ಟ್ರೆಂಡ್ ನಡೀತಿದೆ. ಕೋಮಲ್ ಕೂಡ ಈಗ 5 ಭಾಷೆಗಳ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗುತ್ತಿದ್ದಾರೆ. 'ಜಲ್ಲಿಕಟ್ಟು' ಚಿತ್ರದ ರೀಮೆಕ್ ಹೌದೋ ಅಲ್ಲವೋ ಎನ್ನುವ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್ಲ.

ಚಿತ್ರವನ್ನು ಮಲಯಾಳಂನಲ್ಲೂ ರಿಲೀಸ್ ಮಾಡಲು ಮುಂದಾಗಿರೋದು ನೋಡಿದರೆ ಇದು ರೀಮೆಕ್ ಅಲ್ಲ ಅನ್ನೋದು ಗೊತ್ತಾಗುತ್ತಿದೆ. ಅಂದಹಾಗೆ ಈ ಹಿಂದೆ ಜಗ್ಗೇಶ್ ನಟಿಸಿದ್ದ 'BMM' ಚಿತ್ರ ಕಟ್ಟಿಕೊಟ್ಟಿದ್ದ ನಿರ್ದೇಶಕ ಹರಿಕೃಷ್ಣ .ಎಸ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಲಿದ್ದಾರೆ.

ಹಾಸ್ಯನಟರಾಗಿದ್ದ ಕೋಮಲ್ ಬಳಿಕ ಹೀರೊ ಆಗಿ ಬಡ್ತಿ ಪಡೆದಿದ್ದರು. 'ಗೋವಿಂದಾಯ ನಮಃ' ಸೇರಿದಂತೆ ಒಂದಷ್ಟು ಸಿನಿಮಾಗಳು ಹಿಟ್ ಆಗಿತ್ತು. ಬಳಿಕ ಯಾಕೋ ಅದೃಷ್ಟ ಕೈ ಕೊಟ್ಟಿತ್ತು. 'ಕೆಂಪೇಗೌಡ- 2' ಚಿತ್ರದ ಮೂಲಕ ಮಾಸ್ ಹೀರೊ ಆಗುವ ಸಾಹಸವನ್ನು ಮಾಡಿದ್ದರು. ಯಾಕೋ ಪ್ರಯೋಜನವಾಗಿರಲಿಲ್ಲ. ಮೂರು ವರ್ಷಗಳ ಹಿಂದೆ ಕೋಮಲ್ ಕೊರೊನಾ ಸೋಂಕಿನಿಂದ ಬಳಲಿದ್ದರು. ಸಾವಿನದ ದವಡೆಯಿಂದ ಪಾರಾಗಿದ್ದರು. ಬಳಿಕ ಮತ್ತೆ ಸಿನಿಮಾಗಳಲ್ಲಿ ತೊಡಗಿಸಿಕೊಂಡರು.

Sensational Star Komal Kumars Kona movie first look Poster released

ಸದ್ಯ 'ಕಾಲಾಯ ನಮಃ' ಎನ್ನುವ ಚಿತ್ರವನ್ನು ಕೋಮಲ್ ನಿರ್ಮಿಸಿ, ನಟಿಸುತ್ತಿದ್ದಾರೆ. 5 ವರ್ಷ ಯಾವುದೇ ಸಿನಿಮಾ ಒಪ್ಪಿಕೊಳ್ಳದ ಅವರು ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಯಲಾ ಕುನ್ನಿ' ಎನ್ನುವ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕೋಮಲ್ ನಟಿಸುತ್ತಿದ್ದಾರೆ. ಈಗ ಆ ಲಿಸ್ಟ್‌ಗೆ 'ಕೋಣ' ಸಿನಿಮಾ ಕೂಡ ಸೇರಿಕೊಂಡಿದೆ. ಟೈಟಲ್‌ ಹಾಗೂ ಫಸ್ಟ್ ಲುಕ್ ಪೋಸ್ಟರ್‌ನಿಂದ ಗಮನ ಸೆಳೆಯುತ್ತಿರುವ ಈ ಚಿತ್ರದ ಮತ್ತಷ್ಟು ಅಪ್‌ಡೇಟ್ ಶೀಘ್ರದಲ್ಲೇ ಸಿಗಲಿದೆ.

More from Filmibeat

English summary
Komal Kumar starrer Kona movie motion Poster out now
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X