For Quick Alerts
  ALLOW NOTIFICATIONS  
  For Daily Alerts

  ಈ ವಾರ ಬಿಡುಗಡೆಯಾಗಲಿರುವ ಚಿತ್ರಗಳ ರನ್ ಟೈಮ್ ಮತ್ತು ಸೆನ್ಸಾರ್ ಸರ್ಟಿಫಿಕೇಟ್ ವಿವರ

  |

  ನವರಾತ್ರಿ ಬಂತೆಂದರೆ ಸಾಕು ಹಬ್ಬದ ಪ್ರಯುಕ್ತ ಚಿತ್ರಮಂದಿರಕ್ಕೆ ದೊಡ್ಡ ದೊಡ್ಡ ಚಿತ್ರಗಳು ಲಗ್ಗೆ ಇಡುತ್ತವೆ. ಪ್ರತಿವರ್ಷದಂತೆ ಈ ವರ್ಷವೂ ಸಹ ನವರಾತ್ರಿಯ ವಾರದಲ್ಲಿ ಹಾಗೂ ಅದರ ಹಿಂದಿನ ವಾರದಲ್ಲಿ ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಅಪ್ಪಳಿಸಲು ಸಿದ್ಧವಾಗಿವೆ.

  ಅಕ್ಟೋಬರ್ 5ಕ್ಕೆ ವಿಜಯದಶಮಿ ಪ್ರಯುಕ್ತ ತೆಲುಗಿನ ಇಬ್ಬರು ಸ್ಟಾರ್ ನಟರುಗಳಾದ ಚಿರಂಜೀವಿ ಅಭಿನಯದ ಗಾಡ್ ಫಾದರ್ ಹಾಗೂ ನಾಗಾರ್ಜುನ ಅಭಿನಯದ ಘೋಸ್ಟ್ ಚಿತ್ರಗಳು ತೆರೆಗೆ ಅಪ್ಪಳಿಸಲಿವೆ. ಇದಕ್ಕೂ ಹಿಂದಿನ ವಾರ ಅಂದರೆ ಸೆಪ್ಟೆಂಬರ್ 29ರ ಗುರುವಾರ ಹಾಗೂ ಸೆಪ್ಟೆಂಬರ್ 30ರ ಶುಕ್ರವಾರ ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಯ ಪ್ರಮುಖ ಚಿತ್ರಗಳು ಬಿಡುಗಡೆಯಾಗಲಿವೆ.

  ಕನ್ನಡ ಚಲನಚಿತ್ರರಂಗದಿಂದ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಸೆಪ್ಟೆಂಬರ್ 30ಕ್ಕೆ ಬಿಡುಗಡೆಗೊಳ್ಳಲಿದ್ದರೆ, ಇದೇ ದಿನದಂದು ಹಿಂದಿಯ ವಿಕ್ರಂ ವೇದ ಹಾಗೂ ತಮಿಳಿನ ಪೊನ್ನಿಯಿನ್ ಸೆಲ್ವನ್ 1 ಸಿನಿಮಾಗಳು ತೆರೆಗೆ ಬರಲಿವೆ. ಹಾಗೂ ಸೆಪ್ಟೆಂಬರ್ 29ರ ಗುರುವಾರದಂದು ಧನುಷ್ ಅಭಿನಯದ ನಾನೇ ವರುವೆನ್ ಚಿತ್ರ ತೆರೆಕಾಣಲಿದೆ. ಈ ಮೂಲಕ ದಸರಾ ಹಬ್ಬಕ್ಕೂ ಮುನ್ನ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಕಾಳಗವೇ ನಡೆಯಲಿದ್ದು, ಈ ಮುಖಾಮುಖಿಯಲ್ಲಿ ಯಾವ ಚಿತ್ರ ಗೆಲ್ಲಲಿದೆ ಎಂಬ ಕುತೂಹಲ ಉಂಟಾಗಿದೆ.

  ಹೀಗೆ ಈ ವಾರ ತೆರೆಗೆ ಬರಲಿರುವ ಈ 4 ಚಿತ್ರಗಳ ರನ್ ಟೈಮ್ ಎಷ್ಟು ಹಾಗೂ ಈ ಚಿತ್ರಗಳು ಪಡೆದುಕೊಂಡಿರುವ ಸೆನ್ಸಾರ್ ಸರ್ಟಿಫಿಕೇಟ್ ಯಾವುದು ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ.

  • ನಾನೇ ವರುವೆನ್: ಧನುಷ್ ಹಾಗೂ ಇಂದುಜಾ ರವಿಚಂದ್ರನ್ ಅಭಿನಯದ ನಾನೇ ವರುವೆನ್ ಚಿತ್ರ ಸೆಪ್ಟೆಂಬರ್ 29ಕ್ಕೆ ತೆರೆಗೆ ಬರಲಿದ್ದು, ಚಿತ್ರದ ಕಾಲಾವಧಿ 2 ಗಂಟೆ 2 ನಿಮಿಷಗಳಷ್ಟಿದ್ದು, ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಈ ಚಿತ್ರ ತಮಿಳು ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

  • ಕಾಂತಾರ: ರಿಷಬ್ ಶೆಟ್ಟಿ ನಿರ್ದೇಶಿಸಿ ನಾಯಕನಾಗಿಯೂ ಅಭಿನಯಿಸಿರುವ ಕಾಂತಾರ ಚಿತ್ರ ಇದೇ ಸೆಪ್ಟೆಂಬರ್ 30ಕ್ಕೆ ತೆರೆಕಾಣಲಿದ್ದು ಈ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಯು/ಎ ಸರ್ಟಿಫಿಕೇಟ್ ಕೊಟ್ಟಿದೆ. ಚಿತ್ರವು 2 ಗಂಟೆ 29 ನಿಮಿಷ 29 ಸೆಕೆಂಡುಗಳ ರನ್ ಟೈಮ್ ಹೊಂದಿದೆ.

  • ಪೊನ್ನಿಯಿನ್ ಸೆಲ್ವನ್ 1: ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ 1 ಚಿತ್ರ ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸೆಪ್ಟೆಂಬರ್ 30ರಂದು ಬಿಡುಗಡೆಗೊಳ್ಳಲಿದೆ. ಈ ಪ್ಯಾನ್ ಇಂಡಿಯಾ ಸಿನಿಮಾ ಕೂಡ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದ್ದು, 2 ಗಂಟೆ 47 ನಿಮಿಷ 6 ಸೆಕೆಂಡುಗಳ ರನ್ ಟೈಮ್ ಹೊಂದಿದೆ.

  • ವಿಕ್ರಂ ವೇದ: ತಮಿಳಿನ ಬ್ಲಾಕ್ ಬಸ್ಟರ್ ವಿಕ್ರಂ ವೇದ ಚಿತ್ರದ ರೀಮೇಕ್ ಆದ ಬಾಲಿವುಡ್‌ನ ವಿಕ್ರಂ ವೇದ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಸೈಫ್ ಅಲಿ ಖಾನ್ ಅಭಿನಯಿಸಿದ್ದಾರೆ. ಈ ಚಿತ್ರಕ್ಕೂ ಕೂಡ ಯು/ಎ ಸರ್ಟಿಫಿಕೇಟ್ ದೊರೆತಿದ್ದು, ಸೆಪ್ಟೆಂಬರ್ 30ರಂದು ತೆರೆ ಕಾಣಲಿದೆ. ಈ ಚಿತ್ರದ ರನ್ ಟೈಮ್ 2 ಗಂಟೆ 40 ನಿಮಿಷಗಳು.

  English summary
  September 2022 last week releasing Indian films run time and censor certificate details. Know more
  Monday, September 26, 2022, 18:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X