ವೈರಲ್ ಆಯ್ತು 'ನಾಗಿಣಿ 2' ಖ್ಯಾತಿಯ ನಿನಾದ್ ಮದುವೆ ಪೋಟೋಶೂಟ್
ಕನ್ನಡ ಕಿರುತೆರೆಯಲ್ಲಿ ನಂಬರ್ ಒನ್ ಧಾರಾವಾಹಿಗಳ ಪಟ್ಟಿಯಲ್ಲಿ 'ನಾಗಿಣಿ 2' ಧಾರಾವಾಹಿ ಕೂಡ ಒಂದಾಗಿದೆ. ಈ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರದಲ್ಲಿ ತ್ರಿಶೂಲ್ ಅಲಿಯಾಸ್ ನಿನಾದ್ ಹರಿತ್ಸ ನಟಿಸಿದ್ದಾರೆ. ಈ ಹಿಂದೆ 'ಅರಮನೆ' ಸೀರಿಯಲ್‌ನಲ್ಲೂ ನಟ ನಿನಾದ್ ಬಣ್ಣ ಹಚ್ಚಿದ್ದರು. ಆದರೆ, ಅವರಿಗೆ 'ನಾಗಿಣಿ 2' ಸೀರಿಯಲ್‌ನಿಂದ ಹೆಚ್ಚು ಖ್ಯಾತಿ ಸಿಕ್ಕಿತು. ಅಲ್ಲದೆ ಈ ಸೀರಿಯಲ್ ಮೂಲಕವೇ ಅವರು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿದ್ದಾರೆ.
ಸೀರಿಯಲ್‌ನಲ್ಲಿ ನಮೃತಾ ಗೌಡ ಹಾಗೂ ನಿನಾದ್ ಕಾಂಬಿನೇಶನ್ ಪ್ರೇಕ್ಷಕರಿಗೆ ಸಖತ್ ಇಷ್ಟ ಆಗಿತ್ತು. ಈಗ ನಿನಾದ್ ತಮ್ಮ ನಿಜ ಜೀವನದ ಸಂಗಾತಿಯನ್ನು ತಮ್ಮ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಕಾಮನ್ ಫ್ರೆಂಡ್ ಆಗಿ ಪರಿಚಯಿಸುವ ಮೂಲಕ ಸ್ನೇಹಿತರಾ ಈ ಜೋಡಿ ಸರಳವಾಗಿ ಮದುವೆಯಾಗಿ ಬಾಳಸಂಗಾತಿಗಳಾಗಿದ್ದಾರೆ.
ಸದ್ಯ ನಿನಾದ್ ಹರಿತ್ಸ ಇತ್ತೀಚಿಗೆ ತಮ್ಮ ಬಹುಕಾಲದ ಗೆಳತಿ ರಮ್ಯಾ ಅವರ ಜೊತೆ ಸಪ್ತಪದಿ ತುಳಿದ್ದಿದ್ದಾರೆ. ಸೈಲೆಂಟ್ ಆಗಿ ಮದುವೆ ಕಾರ್ಯಗಳನ್ನೆಲ್ಲಾ ಮಾಡಿಕೊಂಡ ಈ ಜೋಡಿ ಈಗ ಹೊಸ ಪೋಟೋಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ.
Recommended Video


ಬಹುಕಾಲದ ಗೆಳತಿಯನ್ನು ವರಿಸಿದ ನಟ ನಿನಾದ್
ಕಾಮನ್ ಫ್ರೆಂಡ್ಸ್ ಆಗಿ ಪರಿಚಯವಾಗಿದ್ದ ನಟ ನಿನಾದ್ ಹಾಗೂ ರಮ್ಯಾ ನಂತರ ಇವರಿಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಸ್ನೇಹಿತರಾಗಿದ್ದವರು ಈಗ ಒಟ್ಟಾಗಿ ಸತಿ ಪತಿಗಳಾಗಿದ್ದಾರೆ. ನಿನಾದ್ ಮತ್ತು ರಮ್ಯಾ ಇದೇ ವರ್ಷದ ಫೆಬ್ರವರಿಯಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಶಾಸ್ತ್ರದ ಪ್ರಕಾರ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇನ್ನು ನಿಶ್ಚಿತಾರ್ಥದ ಪೋಟೋವನ್ನು ನಟ ನಿನಾದ್ ಕೂಟ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಇದಾದ ಬಳಿಕ ಮೇ 20 ರಂದು ಈ ಜೋಡಿ ಕುಟುಂಬಸ್ಥರು ಬಂಧು-ಬಾಂಧವರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಯಾವುದೇ ಆಡಂಬರವಿಲ್ಲದೆ ಸರಳವಾಗಿಯೇ ವಿವಾಹವಾಗಿದ್ದಾರೆ.

ನಿನಾದ್ ಮದುವೆಯ ಪೋಟೋಶೂಟ್ ವೈರಲ್
ಮೇ 20 ರಂದು ಸರಳವಾಗಿ ವಿವಾಹವಾಗಿದ್ದ ಈ ನವ ಜೋಡಿ ಕಲರ್ ಫುಲ್ ವೆಡ್ಡಿಂಗ್ ಪೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಪತ್ನಿ ರಮ್ಯಾ ಜೊತೆ ನಟ ನಿನಾದ್ ಚೆಂದದ ಪೋಟೋಗಳನ್ನು ತೆಗೆಸಿಕೊಂಡಿದ್ದು, ಈ ಪೋಟೋಗಳನ್ನು ಆನ್‌ಲೈನ್‌ನಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ಪೋಟೋಗಳು ಸಖತ್ ವೈರಲ್ ಆಗುತ್ತಿದ್ದು,ಅಭಿಮಾನಿಗಳು ನವ ಜೋಡಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಪೋಟೋಶೂಟ್‌ಗಳಲ್ಲಿ ರಮ್ಯಾ ಸ್ಕೈ ಬ್ಲೂ ಸ್ಯಾರಿಯಲ್ಲಿ ಮಿಂಚಿದ್ರೆ, ನಟ ನಿನಾದ್ ವೈಟ್ ಕಲರ್ ಶೆರ್ವಾನಿಯಲ್ಲಿ ಜಗಮಗಿಸಿದ್ದಾರೆ. ಸದ್ಯ ಈ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಡಿಂಗ್‌ನಲ್ಲಿವೆ.

ನಿನಾದ್, ನಮೃತಾ ಅರತಕ್ಷತೆ ಪೋಟೋ ವೈರಲ್ ಆಗಿತ್ತು
'ನಾಗಿಣಿ 2' ಸೀರಿಯಲ್‌ನಲ್ಲಿ ನಟಿಸಿದ್ದ ನಮೃತಾಗೌಡ ಹಾಗೂ ನಿನಾದ್ ಜೋಡಿ ಪ್ರೇಕ್ಷಕರಿಗೆ ಸಖತ್ ಇಷ್ಟ ಆಗಿತ್ತು. ಈ ಜೋಡಿ ನಿಜ ಜೀವನದಲ್ಲೂ ಮದುವೆಯಾಗಬೇಕು ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರಂತೆ ಸೀರಿಯಲ್‌ಗೋಸ್ಕರ ಈ ತಂಡ ನಮೃತಾ ಹಾಗೂ ನಿನಾದ್ ಅರತಕ್ಷತೆಯನ್ನ ಛತ್ರದಲ್ಲಿ ಮಾಡಿತ್ತು. ಇದು ನಿಜವಾದ ಮದುವೆ ಎಂದು ಭಾವಿಸಿದ ಹಲವರು ಸೋಶಿಯಲ್ ಮೀಡಿಯಾದಲ್ಲಿ ಅರತಕ್ಷತೆಯ ಪೋಟೋಗಳನ್ನು ವೈರಲ್ ಮಾಡಿದ್ದರು. ನಂತರ ಸೀರಿಯಲ್ ತಂಡ ಇದು ಚಿತ್ರೀಕರಣಕ್ಕಾಗಿ ಮಾಡಿದ್ದು, ನಿಜವಾದ ಮದುವೆಯಲ್ಲಾ ಎಂದು ಸ್ಪಷ್ಟೀಕರಣ ನೀಡಿತ್ತು. ಆ ಮಟ್ಟಿಗಿನ ಕ್ರೇಜ್ ಈ ಸೀರಿಯಲ್‌ಗೆ ಇತ್ತು.

ಕಿರುತೆರೆಯಿಂದ ಬೆಳ್ಳಿತೆರೆಗೆ ನಿನಾದ್ ಪಯಣ
'ನಾಗಿಣಿ 2' ಸೀರಿಯಲ್ ಮೂಲಕ್ ಕನ್ನಡಿಗರ ಮನಗೆದ್ದ ನಿನಾದ್ ಈಗ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ನಟ ನಿನಾದ್‌ಗೂ ಕೂಡ ಸಿನಿಮಾ ಹಾಗೂ ವೆಬ್ ಸರಣಿಯ ಆಫರ್‌ಗಳು ಬರುತ್ತಿವೆ. ಆದರೆ, 'ನಾಗಿಣಿ 2' ಸೀರಿಯಲ್‌ನಲ್ಲಿ ಕೊಂಚ ಬ್ಯುಸಿಯಾಗಿರುವ ಕಾರಣ ಮುಂದೂಡುತ್ತಿದ್ದಾರೆ. ಧಾರಾವಾಹಿ ಮುಗಿದ ಬಳಿಕ ಹೊಸ ಪ್ರಾಜೆಕ್ಟ್ ಶುರುಮಾಡಲಿದ್ದಾರೆ. ಆ ಮೂಲಕ ಸಿನಿಮಾಗಳಲ್ಲೂ ನಟಿಸುವ ಯೋಜನೆಯಲ್ಲಿದ್ದಾರೆ. ಸದ್ಯಕ್ಕೆ ಮದುವೆಯಾಗಿರುವ ಸಂಭ್ರಮದಲ್ಲಿರುವ ನಿನಾದ್ ಪತ್ನಿ ರಮ್ಯಾ ಜೊತೆ ಹ್ಯಾಪಿಯಾಗಿದ್ದಾರೆ.


Click it and Unblock the Notifications











