For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಪಾಸಿಟಿವ್ ಬಂದ ಕನ್ನಡದ ನಟಿ ನವ್ಯಾ ಸ್ವಾಮಿ ಹೇಳುವುದೇನು? ಇಲ್ಲಿದೆ ನವ್ಯಾ ಮಾತು

  By ಫಿಲ್ಮ್ ಡೆಸ್ಕ್
  |

  ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಲಾಕ್ ಡೌನ್ ಸಡಲಿಕೆಯಾಗಿದ್ದು, ಜನರು ತಮ್ಮತಮ್ಮ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಕಿರುತೆರೆ ಮತ್ತು ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದ್ದು, ಸಾಕಷ್ಟು ಧಾರಾವಾಹಿಗಳು ಮತ್ತು ಸಿನಿಮಾ ಚಿತ್ರೀಕರಣ ನಡೆಯುತ್ತಿವೆ.

  Navya Swamy, Corona Positive:ಕಿರುತೆರೆ ನಟಿ ನವ್ಯಾ ಸ್ವಾಮಿಗೆ ಕೊರೊನಾ ವೈರಸ್ ಪಾಸಿಟಿವ್ | Filmibeat Kannada

  ಮುನ್ನೆಚ್ಚರಿಕೆಯ ಕ್ರಮಗಳ ಜೊತೆಗೆ ಚಿತ್ರೀಕರಣ ಪ್ರಾರಂಭಿಸಲಾಗಿದೆ. ತೆಲಂಗಾಣ ಸರ್ಕಾರ ಜೂನ್ 15ರಿಂದ ಧಾರಾವಾಹಿಗಳ ಚಿತ್ರೀಕರಣ ಆರಂಭಿಸಲು ಅನುಮತಿ ನೀಡಿದೆ. ಧಾರಾವಾಹಿ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಕನ್ನಡ ಮೂಲದ ತೆಲುಗು ನಟಿ ನವ್ಯಾ ಸ್ವಾಮಿಗೆ ಕೊರೊನಾ ವೈರಸ್ ಪಾಸಿಟೀವ್ ಬಂದಿರುವುದು ಸಾಕಷ್ಟು ಆತಂಕ ಮೂಡಿಸಿದೆ.

  ಕಿರುತೆರೆ ನಟಿ ನವ್ಯಾ ಸ್ವಾಮಿಗೆ ಕೊರೊನಾ ವೈರಸ್ ಪಾಸಿಟಿವ್ಕಿರುತೆರೆ ನಟಿ ನವ್ಯಾ ಸ್ವಾಮಿಗೆ ಕೊರೊನಾ ವೈರಸ್ ಪಾಸಿಟಿವ್

  ಈ ಬಗ್ಗೆ ಸ್ವತಹ ನಟಿ ನವ್ಯಾ ಮಾತನಾಡಿದ್ದಾರೆ. ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಯಾರು ಭಯಪಡಬೇಡಿ, ನಾನು ಆರಾಮಾಗಿ ಇದ್ದೀನಿ, ದಯವಿಟ್ಟು ಗಾಳಿಸುದ್ದಿಗಳನ್ನು ಹಬ್ಬಿಸಬೇಡಿ, ಪ್ರೀತಿ, ಕಾಳಜಿ ತೋರಿದ ನಿಮ್ಮೆಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.

  ನವ್ಯಾ ಹೇಳುವುದೇನು?

  ನವ್ಯಾ ಹೇಳುವುದೇನು?

  "ನನಗೆ ಕೋವಿಡ್ 19 ಪಾಸಿಟಿವ್ ಬಂದಿದೆ. ಗೊತ್ತಾದ ತಕ್ಷಣ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದೇನೆ. ನಂತರ ಡಾಕ್ಟರ್ ಸಲಹೆ ಮೇರೆಗೆ ಸರಿಯಾದ ಮೆಡಿಸಿನ್ ತೆಗೆದುಕೊಳ್ಳುತ್ತಿದ್ದೇನೆ. ಇಮ್ಯೂನಿಟಿ ಹೆಚ್ಚಾಗಲು ಆರೋಗ್ಯಕರವಾದ ಮತ್ತು ನ್ಯೂಟ್ರಿಷಿಯಸ್ ಫುಡ್ ತೆಗೆದೊಕೊಳ್ಳುತ್ತಿದ್ದೇನೆ. ನನ್ನ ಜೊತೆ ಸಂಪರ್ಕದಲ್ಲಿ ಇದ್ದರು ದಯವಿಟ್ಟು ಕ್ವರಂಟೈನ್ ಆಗಿ. ಲಕ್ಷಣಗಳ ಕಂಡು ಬಂದರೆ ಕೋವಿಡ್ ಪರೀಕ್ಷೆಗೆ ಒಳಗಾಗಿ" ಎಂದು ಹೇಳಿದ್ದಾರೆ.

  ದಯವಿಟ್ಟು ಗಾಳಿ ಸುದ್ದಿಗಳನ್ನು ನಂಬಬೇಡಿ

  ದಯವಿಟ್ಟು ಗಾಳಿ ಸುದ್ದಿಗಳನ್ನು ನಂಬಬೇಡಿ

  "ದಯವಿಟ್ಟು ಗಾಳಿ ಸುದ್ದಿಗಳನ್ನು ನಂಬಬೇಡಿ. ನೆಗೆಟಿವಿಟಿಯಿಂದ ತುಂಬಾ ದೂರ ಇರಿ. ಕೊರೊನಾ ಪಾಸಿಟಿವ್ ಬಂದರೆ ಭಯ ಪಡಬೇಡಿ. ಸ್ಟ್ರಾಂಗ್ ಆಗಿರಿ. ಹೆಚ್ಚಾಗಿ ಕ್ವಾರಂಟೈನ್ ಆಗಿ. ವೈರಸ್ ಸಾಯುವವರೆಗೂ ಜನರಿಂದ ದೂರ ಇರಿ. ಅನೇಕರ ಜನ ನನ್ನ ಮೇಲೆ ಪ್ರೀತಿ ಮತ್ತು ಕಾಳಜಿ ತೋರಿದ್ದೀರಿ. ನಾನು ಆರಾಮಾಗಿ ಇದ್ದೀನಿ. ಆದಷ್ಟು ಬೇಗ ವಾಪಸ್ ಆಗುತ್ತೇನೆ" ಎಂದು ವಿಡಿಯೋ ಮೂಲಕ ಮಾತನಾಡಿ ಶೇರ್ ಮಾಡಿದ್ದಾರೆ.

  ಅಮೀರ್ ಖಾನ್ ಸಿಬ್ಬಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್: ತಾಯಿಗೆ ಇಂದು ಪರೀಕ್ಷೆಅಮೀರ್ ಖಾನ್ ಸಿಬ್ಬಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್: ತಾಯಿಗೆ ಇಂದು ಪರೀಕ್ಷೆ

  ಮೈಸೂರು ಮೂಲದ ನಟಿ

  ಮೈಸೂರು ಮೂಲದ ನಟಿ

  ನಟಿ ನವ್ಯಾ ಸ್ವಾಮಿ ಮೈಸೂರು ಮೂಲದವರು. ಕನ್ನಡದ ಲಕುಮಿ, ತಂಗಾಳಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜತೆಗೆ ಕಿರಿತೆರೆಯ ಕಾರ್ಯಕ್ರಮಗಳಲ್ಲಿ ನಿರೂಪಣೆ ಕೂಡ ಮಾಡಿದ್ದಾರೆ. ಬಳಿಕ ಅವಕಾಶಕ್ಕಾಗಿ ತೆಲುಗು ಕಿರುತೆರೆ ಪ್ರವೇಶಿಸಿದ್ದರು. ತಮಿಳಿನ ಧಾರಾವಾಹಿಯಲ್ಲಿ ಕೂಡ ಅಭಿನಯಿಸಿದ್ದಾರೆ. ವಾಣಿ ರಾಣಿ, ಅರಣ್ಮಣೈ ಕಿಲಿ, ರನ್ ಮತ್ತು ಆಮೆ ಕಥಾ ಮುಂದಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ತಮಿಳು ಮತ್ತು ತೆಲುಗು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

  ತಬ್ಬಿಕೊಳ್ಳಲು, ಮುತ್ತಿಕ್ಕಲು ಭಯವಾಗುತ್ತಿದೆ ಎಂದ ಹಾಟ್ ನಟಿತಬ್ಬಿಕೊಳ್ಳಲು, ಮುತ್ತಿಕ್ಕಲು ಭಯವಾಗುತ್ತಿದೆ ಎಂದ ಹಾಟ್ ನಟಿ

  ತಲೆನೋವು ಮಾತ್ರ ಕಾಣಿಸಿಕೊಂಡಿತ್ತು

  ತಲೆನೋವು ಮಾತ್ರ ಕಾಣಿಸಿಕೊಂಡಿತ್ತು

  ಕೇವಲ ತಲೆ ನೋವು ಮಾತ್ರ ಕಾಣಿಸಿಕೊಂಡಿದ್ದಂತೆ. ಅಲ್ಲದೆ ತುಂಬಾ ಸುಸ್ತಾಗುತ್ತಿದ್ದರಂತೆ. ಹಾಗಾಗಿ ಕೊರೊನಾ ಪರೀಕ್ಷೆ ಮಾಡಿದ್ದಾರೆ. ನಂತರ ಗೊತ್ತಾಗಿದೆ ಕೊರೊನಾ ಪಾಸಿಟಿವ್ ಇದೆ ಎಂದು. ತಕ್ಷಣ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಸದ್ಯ ಅವರಿಗೆ ಯಾವುದೆ ರೋಗ ಲಕ್ಷ್ಮಗಳು ಇಲ್ಲವಂತೆ. ಆರಾಮಾಗಿ ಇರುವುದಾಗಿ ನವ್ಯಾ ಹೇಳಿಕೊಂಡಿದ್ದಾರೆ.

  English summary
  Serial Actress Navya Swamy has spoken after tests positive for Coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X