»   » ಯಾರಿವಳು.. ಸ್ಯಾಂಡಲ್ ವುಡ್ ಗೆ 'ಗುಡುಗಿ'ನಂತೆ ಬಂದವಳು.?

ಯಾರಿವಳು.. ಸ್ಯಾಂಡಲ್ ವುಡ್ ಗೆ 'ಗುಡುಗಿ'ನಂತೆ ಬಂದವಳು.?

Posted By:
Subscribe to Filmibeat Kannada

ಇತ್ತೀಚೆಗೆ ಮಾಡೆಲಿಂಗ್ ಕ್ಷೇತ್ರದಿಂದ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಅಡಿಯಿಡುತ್ತಿರುವ ನಟಿಯರ ಸಂಖ್ಯೆ ಜಾಸ್ತಿಯಾಗುತ್ತಿದೆ. ವಿನಯ್ ರಾಜ್ ಕುಮಾರ್ ಅವರ 'ರನ್ ಆಂಟನಿ' ಚಿತ್ರದ ಮೂಲಕ ಮಾಡೆಲ್ ಸುಶ್ಮಿತಾ ಜೋಷಿ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು, ತಮ್ಮ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದಿರೋದು ಹಳೇ ವಿಷಯ.

ಇದೀಗ ಮತ್ತೊಬ್ಬ ಮಾಡೆಲ್ ಹೊಸಬರ 'ಗುಡುಗು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಮೊದಲು ಇವರು ಕನ್ನಡ ಧಾರಾವಾಹಿಗಳಲ್ಲಿ ಕೂಡ ನಟಿಸಿ ಮನೆಮಾತಾಗಿದ್ದರು ಅನ್ನೋದು ವಿಶೇಷ.

ಈ ಮುಂಚೆ 'ಸಂತೋಷಕ್ಕೆ' ಎಂಬ ಸಿನಿಮಾವನ್ನು ನಿರ್ದೇಶನ ಜೊತೆಗೆ ನಿರ್ಮಾಣ ಮಾಡಿದ್ದ ನಿರ್ದೇಶಕ ಸರವಣ ದಾಸ್ ಎಂಬುವವರು 'ಗುಡುಗು' ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದು, ಓಂ ಸರವಣಭವ ಪ್ರೊಡಕ್ಷನ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ.['ರನ್ ಆಂಟನಿ' ನಟಿ ಸುಶ್ಮಿತಾ ಜೋಷಿ ಬಗ್ಗೆ ಒಂದಿಷ್ಟು ವಿಚಾರಗಳು]

ಅಂದಹಾಗೆ 'ಗುಡುಗು' ಚಿತ್ರದ ಮೂಲಕ ಇಬ್ಬರು ಧಾರಾವಾಹಿ ನಾಯಕಿಯರು ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಯಾರು 'ಆ' ನಾಯಕಿಯರು ಅನ್ನೋದರ ಬಗ್ಗೆ ಸಂಪೂರ್ಣ ಸುದ್ದಿಯನ್ನು ಓದಲು ಮುಂದಿನ ಸ್ಲೈಡ್ಸ್ ಕ್ಲಿಕ್ಕಿಸಿ....

ಯುವನಟಿ ಶುಭರಕ್ಷ ಗೌಡ

'ಮೊಗ್ಗಿನ ಮನಸು' ಮತ್ತು 'ಭಲೇ ಅಪರೂಪ ನಮ್ ಜೋಡಿ' ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ಕಿರುತೆರೆ ನಟಿ ಶುಭರಕ್ಷ ಅವರು ಇದೀಗ 'ಗುಡುಗು' ಚಿತ್ರದ ಮೂಲಕ ಬಿಗ್ ಸ್ಕ್ರೀನ್ ನಲ್ಲಿ ತಮ್ಮ ಪ್ರತಿಭೆ ತೋರಲು ಸಜ್ಜಾಗಿದ್ದಾರೆ.

ಅಡೆ-ತಡೆ ದಾಟಿ ಬಂದ ಶುಭರಕ್ಷ

ಅಂದಹಾಗೆ ಈ ಮೊದಲು ಶುಭರಕ್ಷ ಅವರು ಒಪ್ಪಿಕೊಂಡಿದ್ದ ಎರಡು ಸಿನಿಮಾಗಳು ಅರ್ಧಕ್ಕೆ ನಿಂತು ಹೋಗಿದ್ದವು. ಆದರೂ ಎದೆಗುಂದದ ನಟಿ ಎಲ್ಲಾ ಸವಾಲುಗಳನ್ನು ಮೆಟ್ಟಿ ಇದೀಗ 'ಗುಡುಗು' ಮೂಲಕ ಗುಡುಗಲು ತಯಾರಾಗಿದ್ದಾರೆ. ಜೊತೆಗೆ ಇನ್ನೊಂದು ಚಿತ್ರಕ್ಕೂ ಸಹಿ ಹಾಕಿದ್ದು, ಇನ್ನೂ ಹೆಸರಿಡದ ಚಿತ್ರ ಆಗಸ್ಟ್ ಕೊನೆಯ ವಾರದಲ್ಲಿ ಟೇಕಾಫ್ ಆಗಲಿದೆ.

ಟಾಲಿವುಡ್ ನಿಂದ ಬುಲಾವ್

ಬರೀ ಕನ್ನಡ ಮಾತ್ರವಲ್ಲದೇ ಟಾಲಿವುಡ್ ಕ್ಷೇತ್ರದಲ್ಲೂ ಮಿಂಚಲು ತಯಾರಿ ನಡೆಸುತ್ತಿರುವ ನಟಿ ಶುಭರಕ್ಷ ಅವರು ಈಗಾಗಲೇ ಟಾಲಿವುಡ್ ನಲ್ಲಿ ಚಿತ್ರದ ಶೂಟಿಂಗ್ ಒಂದನ್ನು ಮುಗಿಸಿದ್ದಾರೆ. ಜೊತೆಗೆ ಕಾಲಿವುಡ್ ನತ್ತ ಕೂಡ ಮುಖ ಮಾಡಿರುವ ಶುಭರಕ್ಷ ನಿಖಿಲ್ ಮುರುಗನ್ ಅವರ ಪ್ರಾಜೆಕ್ಟ್ ಒಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

'ಅರಗಿಣಿ' ಖುಷಿ

'ಗುಡುಗು' ಚಿತ್ರದ ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ, ಈ ಚಿತ್ರದಲ್ಲಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅರಗಿಣಿ' ಧಾರಾವಾಹಿ ಖ್ಯಾತಿಯ ನಟಿ ಖುಷಿ ಅಲಿಯಾಸ್ ಮೇಘನಾ ಗೌಡ ಅವರು ಕೂಡ ಈ ಚಿತ್ರದಲ್ಲಿ ಖಡಕ್ ಪಾತ್ರ ಮಾಡಿದ್ದಾರೆ.['ಅರಗಿಣಿ' ಸೀರಿಯಲ್ ಖುಷಿ 'ಗುಡುಗು' ಯಾರ ಮೇಲೆ]

ಮೇಘನಾ ಗೌಡ

ಕೈಯಲ್ಲಿ ಗನ್ ಹಿಡಿದು ತಮ್ಮ ಅಭಿಮಾನಿಗಳಿಗೆ ಮೋಡಿ ಮಾಡಲಿರುವ ನಟಿ ಖುಷಿ ಅಲಿಯಾಸ್ ಮೇಘನಾ ಗೌಡ ಅವರು ಈ ಚಿತ್ರದ ಮೂಲಕ ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡುತ್ತಿದ್ದಾರೆ.

ನಟ ಪ್ರತಾಪ್ ನಾರಾಯಣ್

'ಬೆಂಕಿಪಟ್ಣ' ಚಿತ್ರದ ಖ್ಯಾತಿಯ ನಟ ನಟ ಪ್ರತಾಪ್ ನಾರಾಯಣ್ ಅವರು ಈ ಚಿತ್ರದಲ್ಲಿ ನಟಿ ಶುಭರಕ್ಷ ಅವರ ಜೊತೆ ರೋಮ್ಯಾನ್ಸ್ ಮಾಡಲಿದ್ದು, ನಟ ಜೀವಾ ಅವರು ಖುಷಿ ಅವರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಕೊನೆಯ ಹಂತದ ಶೂಟಿಂಗ್ ನಲ್ಲಿ ಗುಡುಗು

ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಟಾಕಿ ಪೋರ್ಷನ್ ಕೆಲಸಗಳಲ್ಲಿ ಬಿಜಿಯಾಗಿದೆ. ಆಗಸ್ಟ್ ತಿಂಗಳಿನಿಂದ ಚಿತ್ರದ ಹಾಡುಗಳ ಚಿತ್ರೀಕರಣ ನಡೆಯಲಿದೆ.

English summary
Serial Actress Shubha Raksha's kannada debut is Kannada Movie 'Gudugu'. Kannada Actress Meghana gowda, Kannada Actor Prathap Narayan in the lead role. The movie is Produced and Directed by Saravana Dass.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada