"ಡಿ ಬಾಸ್ ಸಿನಿಮಾದಲ್ಲಿ ನಟಿಸಿದ್ರೆ ಎಷ್ಟು ಹೆಸರು ಬರುತ್ತೆ ಅನ್ನೋದು ಗೊತ್ತಾಯ್ತು"; 'ಕಾಟೇರ'ದಲ್ಲಿ ಈ ನಟಿಯ ಪಾತ್ರವೇನು?

By ಅನಿತಾ ಬನಾರಿ

ತರುಣ್ ಸುಧೀರ್ ನಿರ್ದೇಶನದ ಹೊಚ್ಚ ಹೊಸ ಸಿನಿಮಾ 'ಕಾಟೇರ'. ಚಾಲೆಂಜಿಗ್ ಸ್ಟಾರ್ ದರ್ಶನ್ ನಟನೆಯ ಈ ಸಿನಿಮಾ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಸಕತ್ ಸದ್ದು ಮಾಡುತ್ತಿದೆ. ಇದರ ಜೊತೆಗೆ ಕನಸಿನ ರಾಣಿ ಮಾಲಾಶ್ರೀ ಮಗಳು ಆರಾಧನಾ ರಾಮ್ ಪ್ರಭಾವತಿಯಾಗಿ ಈ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಯೂ ಕೊಟ್ಟಿದ್ದಾಗಿದೆ. ಬಹುಮುಖ್ಯವಾದ ವಿಚಾರವೆಂದರೆ ಕಿರುತೆರೆ ನಟಿಯೊಬ್ಬರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅದು ಬೇರಾರೂ ಅಲ್ಲ, ಶ್ವೇತಾ ಪ್ರಸಾದ್.

ಹೌದು. 'ಕಾಟೇರ' ಸಿನಿಮಾದಲ್ಲಿ ಫೋರೆನ್ಸಿಕ್ ತಜ್ಞೆ ರೀನಾ ಡಿಸೋಜಾ ಪಾತ್ರದಲ್ಲಿ ನಟಿ ಶ್ವೇತಾ ಪ್ರಸಾದ್ ಕಾಣಿಸಿಕೊಂಡಿದ್ದಾರೆ. "ನಾನು ಕಾಟೇರ ಸಿನಿಮಾದಲ್ಲಿ ರೀನಾ ಡಿಸೋಜಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಆಕೆ ಬೋಲ್ಡ್ ಫೋರೆನ್ಸಿಕ್ ತಜ್ಞೆ. ಇಡೀ ಸಿನಿಮಾದ ಪೂರ್ತಿ ನನ್ನ ಪಾತ್ರ ಕಾಣಿಸಿಕೊಳ್ಳುತ್ತದೆ. ಇಡೀ ಸಿನಿಮಾದ ಕತೆಯನ್ನು ರೀನಾ ಡಿಸೋಜಾ ಪಾತ್ರ ನಿರೂಪಿಸುತ್ತದೆ" ಎಂದು ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ ಶ್ವೇತಾ ಪ್ರಸಾದ್.

Serial actress Shwetha Prasad turns into bold forensic officer

"ರೀನಾ ಡಿಸೋಜಾ ಪಾತ್ರಕ್ಕೆ ಯಾವುದೇ ಆಡಿಶನ್‌ಗಳನ್ನು ಮಾಡ್ಲಿಲ್ಲ. ಆದ್ರೆ ತರುಣ್ ಸುಧೀರ್ ಅವರು ನನ್ನನ್ನು ಭೇಟಿ ಮಾಡಿ ಪಾತ್ರದ ಬಗ್ಗೆ ಸವಿವರವಾಗಿ ಹೇಳಿದರು. ಮಾತ್ರವಲ್ಲ ಅವರು ನನ್ನ ಬಳಿ ಕೇಳಿದ ಮೊದಲ ಪ್ರಶ್ನೆ ಅಂದ್ರೆ ನೀವು ಸ್ಮೋಕ್ ಮಾಡ್ತೀರಾ ಅಂತ. ನಾನು ಮಾಡಲ್ಲ ಅಂತ ಹೇಳಿದೆ. ಅದಕ್ಕೆ ತರುಣ್ ಅವರು ಇದು ತುಂಬಾ ಬೋಲ್ಡ್ ಸೀನ್. ಸ್ಮೋಕಿಂಗ್ ಇರುತ್ತೆ ಅಂತ ಹೇಳಿದ್ರು. ಪಾತ್ರಕಲ್ವಾ, ನಾನು ಕಲಿತೀನಿ ಅಂತ ಹೇಳ್ದೆ" ಎಂದು ಪಾತ್ರ ಒಪ್ಪಿಕೊಂಡ ಬಗೆಯನ್ನು ಫಿಲ್ಮಿಬೀಟ್ ಜೊತೆಗೆ ಹೇಳುತ್ತಾರೆ ಶ್ವೇತಾ ಪ್ರಸಾದ್.

"ಸುಮಾರು 1980ರ ಚಿತ್ರಣ. ಆ ಸಮಯದಲ್ಲಿ ಹುಡುಗಿ ಫೋರೆನಿಕ್ಸ್ ಆಫೀಸರ್ ಆಗಿರುತ್ತಾಳೆ. ಆಕೆ ಮುಂಬೈಯವಳು. ವಿದ್ಯಾವಂತೆ ಕೂಡಾ. ಅದನ್ನು ತೆರೆ ಮೇಲೆ ನೈಜವಾಗಿ ತೋರಿಸಬೇಕಾಗಿತ್ತು. ಜೊತೆಗೆ ಅದೊಂದು ಬೋಲ್ಡ್ ಕ್ಯಾರೆಕ್ಟರ್. ಅದಕ್ಕೆ ನಾನು ಸರಿಹೊಂದುತ್ತೇನೆ ಎಂದು ತರುಣ್ ಅವರು ಭಾವಿಸಿದ್ದರು. ಹಾಗಾಗಿ ನಾನು ಆ ಪಾತ್ರಕ್ಕೆ ಆಯ್ಕೆಗೊಂಡೆ" ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುತ್ತಾ ಹೇಳುತ್ತಾರೆ ಶ್ವೇತಾ ಪ್ರಸಾದ್.

"ರೀನಾ ಡಿಸೋಜಾ ಪಾತ್ರ ತುಂಬಾ ಸೊಗಸಾಗಿ ಮೂಡಿ ಬಂದಿದೆ. ತರುಣ್ ಅವರು ಇದು ತುಂಬಾ ಮುಖ್ಯವಾದ ಪಾತ್ರ ಎಂದು ಆರಂಭದಲ್ಲಿ ಹೇಳಿದ್ದರು. ಸೆಕೆಂಡ್ ಹೀರೋಯಿನ್ ಅಂತಾನೇ ಹೇಳ್ಬಹುದು. ಹಾಗಂದ ಮಾತ್ರಕ್ಕೆ ದರ್ಶನ್ ಅವರ ಜೊತೆಗೆ ಯಾವುದೇ ಕಾಂಬೀನೇಷನ್ ಇರುವುದಿಲ್ಲ. ಆದರೆ ಇಡೀ ಸಿನಿಮಾ ನರೇಟ್ ಆಗುವುದು ಅಥವಾ ರಿವೀಲ್ ಆಗುವುದು ನಿಮ್ಮಿಂದ ಎಂದರು. ಇಂಪಾರ್ಟೆಂಟ್ ರೋಲ್ ಹಾಗೂ ದರ್ಶನ್ ಅವರ ಸಿನಿಮಾ ಆದ ಕಾರಣ ಒಪ್ಪಿಕೊಂಡೆ" ಎಂದು ರೀನಾ ಡಿಸೋಜಾ ಪಾತ್ರಕ್ಕೆ ಅಸ್ತು ಎಂದುದನ್ನು ಫಿಲ್ಮಿಬೀಟ್ ಜೊತೆಗೆ ವ್ಯಕ್ತಪಡಿಸಿದ್ದಾರೆ ಶ್ವೇತಾ ಪ್ರಸಾದ್.

Serial actress Shwetha Prasad turns into bold forensic officer

"ತರುಣ್ ಸುಧೀರ್ ಅವರು ಅದ್ಭುತ ಡೈರೆಕ್ಟರ್. ದೊಡ್ಡ ಪ್ರೊಡಕ್ಷನ್‌ನಲ್ಲಿ ನಾನು ಇದೇ ಮೊದಲ ಬಾರಿಗೆ ನಟಿಸುತ್ತಿದ್ದೇನೆ. ಇನ್ನು ಸೆಟ್‌ನಲ್ಲಂತೂ ಅವರು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಸಿನಿಮಾಟೋಗ್ರಫಿಯಂತೂ ಅತ್ಯದ್ಭುತವಾಗಿದೆ. ಅದರ ಹಿಂದಿನ ಕೈ ಸುಧಾಕರ್ ಅವರು. 1980ಯ ಕಾಲದ ಕಥೆಯಾದುದರಿಂದ ಸಾಕಷ್ಟು ರಿಸರ್ಚ್ ಮಾಡಿದ್ದಾರೆ. ಯಾವ ತರಹದ ಕ್ಯಾಸ್ಟ್ಯೂಮ್ ಹಾಕೊಳ್ಬೇಕು, ಯಾವ ತರಹದ ಲಿಪ್ ಸ್ಟಿಕ್ ಹಾಕೊಳ್ಬೇಕು, ಯಾವ ತರಹದ ಶೇಡ್ಸ್ ಇತ್ತು, ಫ್ರೇಮ್ ಯಾವ ತರಹ ಇತ್ತು, ಯಾವ ತರಹದ ಜ್ಯೂವೆಲ್ಲರಿ ಇತ್ತು ಎಂಬುದನ್ನು ನನ್ನ ಕ್ಯಾರೆಕ್ಟರ್ ಜೊತೆಗೆ ಎಲ್ಲಾ ಕ್ಯಾರೆಕ್ಟರ್ ಗೂ ಮಾಡಿದ್ರು" ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

"ಮೊದಲೇ ಹೇಳಿದ ಹಾಗೇ ನಾನು ಸ್ಮೋಕ್ ಮಾಡೋದನ್ನ ಪ್ರಾಕ್ಟೀಸ್ ಮಾಡ್ಕೊಂಡು ಹೋಗಿದ್ದೆ. ಸಿಗರೇಟ್ ಸೇದೋದಲ್ವಾ, ಹಿಂಗೆ ತೆಗೊಂಡು ಉಫ್ ಅಂದ್ರೆ ಆಯ್ತು ಅಂತ ಅದ್ಕೊಂಡಿದ್ದೆ. ಫಸ್ಟ್ ಡೇ ಮಾಡಿದಾಗ ಶೂಟ್ ಕಟ್ ಮಾಡಿ ನೀವು ಪ್ರಾಕ್ಟೀಸ್ ಮಾಡ್ಲಿಲ್ವಾ ಅಂತ ಕೇಳಿದ್ರು. ನಾನು ಮಾಡಿದ್ದೆ, ಯಾಕೆ ಅಂದೆ. ಸ್ಮೋಕಿಂಗ್ ಅಂದ್ರೆ, ಬರಿ ಗಾಳಿ ಉಫ್ ಬಿಡೋದಲ್ಲ. ಅದು ಕೈಯಲ್ಲಿ ಹಿಡ್ಕೊಳುವ ಸ್ಟೈಲ್ ಬೇರೆ ಇರುತ್ತೆ. ಅದನ್ನ ನೀವು ಪ್ರಾಕ್ಟೀಸ್ ಮಾಡ್ಬೇಕು ಅಂತ ಹೇಳಿದ್ರು. ನಂತರದ ಶೂಟಿಂಗ್‌ಗೆ ಹದಿನೈದು ದಿನ ಬ್ರೇಕ್ ಇತ್ತು. ಸರಿಯಾಗಿ ಪ್ರಾಕ್ಟೀಸ್ ಮಾಡಿದೆ. ಮುಂದಿನ ಶೂಟಿಂಗ್‌ನಲ್ಲಿ ಅದು ಚೆನ್ನಾಗಿ ಬಂದಿತ್ತು. ರೀನಾ ಡಿಸೋಜಾ ಪಾತ್ರಕ್ಕೆ ನಾನು ಇದನ್ನೊಂದೇ ಕಲಿಯಬೇಕಿತ್ತು. ಅದರ ಹೊರತಾಗಿ ಬೇರೆಲ್ಲವೂ ಪರ್ಫೆಕ್ಟ್ ಆಗಿತ್ತು" ಎಂದು ಶ್ವೇತಾ ಪ್ರಸಾದ್ ಹೇಳುತ್ತಾರೆ.

"ಇನ್ನು ಸಿನಿಮಾ ರಿಲೀಸ್ ಆಗುವ ಮೊದಲು ಎಲ್ಲೂ ಕೂಡಾ ನಾನು ಈ ಪಾತ್ರದ ಬಗ್ಗೆ ಹೇಳಿಕೊಳ್ಳುವ ಹಾಗೆ ಇರಲಿಲ್ಲ. ಯಾಕೆಂದರೆ ಇಡೀ ಸ್ಟೋರಿ ರಿವೀಲ್ ಆಗುವುದೇ ನನ್ನ ಪಾತ್ರದಿಂದ. ಸಿನಿಮಾ ರಿಲೀಸ್ ಆಗುವ ಎರಡು ದಿನದ ಮುಂಚೆಯಷ್ಟೇ ನಾನು ಪ್ರಮೋಶನ್‌ಗೆ ಹೋಗಿದ್ದು. ಸಿನಿಮಾ ನೋಡಿದ ಎಲ್ಲರೂ ಸಂತೋಷಪಟ್ಟಿದ್ದಾರೆ. ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇಂತಹ ಪಾತ್ರ ಸಿಕ್ಕಿದೆ ಎಂದರೆ ನಾನು ತುಂಬಾ ಲಕ್ಕಿ ಅಂತಾನೇ ಹೇಳ್ಬಹುದು. ಜೊತೆಗೆ ಸಂತೋಷವೂ ಆಗಿದೆ. ಡಿ ಬಾಸ್ ಜೊತೆಗೆ ಒಂದು ಇಂಪಾರ್ಟೆಂಟ್ ರೋಲ್ ಮಾಡಿದ್ರೆ ಎಷ್ಟು ಫೇಮ್ ಸಿಗುತ್ತೆ ಎನ್ನುವುದು ಗೊತ್ತಾಯ್ತು"ಎಂದು ತಮ್ಮ ಸಂತಸವನ್ನು ಫಿಲ್ಮಿಬೀಟ್ ಜೊತೆಗೆ ಶ್ವೇತಾ ಪ್ರಸಾದ್ ವ್ಯಕ್ತಪಡಿಸಿದ್ದಾರೆ.

More from Filmibeat

English summary
Shwetha Prasad said that she knew how much fame she would get if she did an important role with D Boss:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X