ಬಡವರಿಗೆ ಊಟ, ಪ್ರಾಣಿ-ಪಕ್ಷಿಗಳಿಗೆ ನೀರುಣಿಸುತ್ತಿರುವ 'ಜೊತೆ ಜೊತೆಯಲಿ' ಅನು
ಲಾಕ್ ಡೌನ್ ನಿಂದ ಎಷ್ಟೋ ಮಂದಿ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಸಂಕಷ್ಟದಲ್ಲಿರುವರ ಸಹಾಯಕ್ಕೆ ಅನೇಕರು ಸ್ಪಂದಿಸುತ್ತಿದ್ದಾರೆ. ಇದೀಗ 'ಜೊತೆ ಜೊತೆಯಲ್ಲಿ' ಧಾರಾವಾಹಿಯ ಅನು ಖ್ಯಾತಿ ನಟಿ ಮೇಘಾ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತಾ ಚಾಚಿದ್ದಾರೆ.
ಧಾರಾವಾಹಿಯ ಅನು ಪಾತ್ರದ ಮೂಲಕ ಕನ್ನಡಿಗರ ಮನೆಮಾತಾಗಿರುವ ಅನು ಈಗ ಸಾಮಾಜಿಕ ಕಾರ್ಯಕ್ಕೆ ಇಳಿದಿದ್ದಾರೆ. ಧಾರಾವಾಹಿಯಲ್ಲಿ ಒಳ್ಳೆಯ ಹುಡುಗಿಯಾಗಿ ಎಲ್ಲರ ಮೆಚ್ಚುಗೆ ಪಡೆದಿದ್ದರು. ಈಗ ನಿಜ ಜೀವನದಲ್ಲಿಯೂ ಮೇಘಾ ಕೆಲಸ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ. ಮುಂದೆ ಓದಿ...

ಹಸಿದವರಿಗೆ ಊಟ ನೀಡುತ್ತಿರುವ ನಟಿ ಅನು
ತಮ್ಮ ಮನೆಯ ಸುತ್ತ ಮುತ್ತ ಇರುವ ಹಸಿದ ಜನರಿಗೆ ಊಟ ವಿತರಣೆ ಮಾಡಿದ್ದಾರೆ. ಲಾಕ್ ಡೌನ್ ನಿಂದ ಕೆಲಸವಿಲ್ಲದೆ, ದುಡಿಮೆ ಇಲ್ಲದೆ ಸಂಕಷ್ಟದಲ್ಲಿರುವ ಅನೇಕರ ನೆರವಿಗೆ ದಾವಿಸಿದ್ದಾರೆ. ಈ ವೇಳೆ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲಾಗಿದೆ.

ಬೀದಿನಾಯಿಗಳಿಗೆ ಆಸರೆಯಾದ ಮೇಘಾ
ಕಷ್ಟದಲ್ಲಿರುವ ಜನರಿಗೆ ಮಾತ್ರವಲ್ಲದೆ, ತಮ್ಮ ಮನೆಯ ಸುತ್ತ ಮುತ್ತ ಇರುವ ನಾಯಿಗಳಿಗೂ ಆಹಾರ ನೀಡುತ್ತಿದ್ದಾರೆ. ಹಕ್ಕಿಗಳಿಗೆ ನೀರುಣಿಸಿದ್ದಾರೆ. ಬೇಸಿಗೆಯಲ್ಲಿ ನೀರಿಲ್ಲದೆ ದಣಿದಿದ್ದ ಪ್ರಾಣಿಗಳಿಗೆ ಆಸರೆ ಆಗಿದ್ದಾರೆ. ಹೋಟೆಲ್, ಜನರನ್ನೆ ನಂಬಿಕೊಂಡು ಜೀವಿಸುತ್ತಿದ್ದ ಪ್ರಾಣಿಗಳು ಲಾಕ್ ಡೌನ್ ನಿಂದ ಊಟ, ನೀರು ಇಲ್ಲದೆ ಪರದಾಡುವಂತಾಗಿದೆ. ಬೀದಿನಾಯಿಗಳಿಗೆ ಆಸರೆಯಾಗಿದ್ದಾರೆ ನಟಿ ಮೇಘಾ.

"ನಿಮ್ಮ ಕೈಲಾದಷ್ಟು ನೆರವಾಗಿ"
ಈ ಬಗ್ಗೆ ಮಾತನಾಡಿರುವ ಅವರು "ನಾನು ನನ್ನ ಕೈಲಾದಷ್ಟು ಸಹಾಯ ಮಾಡುವ ಪ್ರಯತ್ನ ಮಾಡಿದ್ದೇನೆ. ನೀವು ಕೂಡ ಸಹಾಯ ಮಾಡಿ. ಸಣ್ಣ ಸಹಾಯ ಆದರೂ ಸಹಾಯವೇ. ನಿಮ್ಮ ಕೈಲಾದಷ್ಟು ನೆರವಾಗಿ." ಎಂದು ಮನವಿ ಮಾಡಿದ್ದಾರೆ.

ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಿದೆ ಸ್ಯಾಂಡಲ್ ವುಡ್
ಸ್ಯಾಂಡಲ್ ವುಡ್ ನ ಸಾಕಷ್ಟು ಮಂದಿ ಕಷ್ಟದಲ್ಲಿರುವವರಿಗೆ ನೆರವಾಗಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಜನರ ಹಸಿವನ್ನು ನೀಗಿಸುತ್ತಿದ್ದಾರೆ. ನಟರ ಜೊತೆಗೆ ಅಭಿಮಾನಿಗಳು ಸಹ ಆಹಾರ ವಿತರಣೆ ಮಾಡುತ್ತಿದ್ದಾರೆ. ಜೊತೆಗೆ ಬೀದಿನಾಯಿಗಳು, ಪಕ್ಷಿಗಳಿಗೂ ಆಹಾರ, ನೀರು ನೀಡುತ್ತಿದ್ದಾರೆ.


Click it and Unblock the Notifications











