'ರಾಮಾಚಾರಿ' ನಿರ್ಮಾಪಕ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಪೊಲೀಸ್ ಠಾಣೆ ಮೆಟ್ಟಿಲೇರಿದ ರಾಮ್ ಜೀ!

By ಫಿಲ್ಮಿಬೀಟ್ ಡೆಸ್ಕ್

ಕನ್ನಡ ಕಿರುತೆರೆ ಲೋಕದಲ್ಲಿ ನಿರ್ಮಾಪಕ ರಾಮ್ ಜೀ ಸಿಕ್ಕಾಪಟ್ಟೆ ಜನಪ್ರಿಯ ವ್ಯಕ್ತಿ. ಈಗಾಗಲೇ ಕನ್ನಡದಲ್ಲಿ ಹಲವು ದುಬಾರಿ ಧಾರಾವಾಹಿಗಳನ್ನು ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದಾರೆ. ಅದರಲ್ಲಿ ಜನಪ್ರಿಯ ಧಾರಾವಾಹಿಗಳಾದ 'ಪುಟ್ಟಗೌರಿ ಮದುವೆ', 'ಗೀತಾ','ನಾಗಿಣಿ 2','ರಾಮಾಚಾರಿ' ಸೇರಿಕೊಂಡಿವೆ. ಕನ್ನಡ ಕಿರುತೆರೆಗೆ ಶ್ರೀಮಂತಿಕೆಯನ್ನು ತಂದುಕೊಟ್ಟ ನಿರ್ಮಾಪಕರಲ್ಲಿ ಇವರೂ ಒಬ್ಬರು.

ಕಳೆದ ಕೆಲವು ದಿನಗಳಿಂದ ಇದೇ ನಿರ್ಮಾಪಕ ರಾಮ್‌ ಜೀ ವಿರುದ್ಧ ಸೋಶಿಯಲ್ ಮೀಡಿಯಾದ ಅಪ್ರಚಾರ ಮಾಡಲಾಗುತ್ತಿದೆ. ರಾಮ್‌ ಜೀ ಹೆಣ್ಣುಮಕ್ಕಳಿಗೆ ಧಾರಾವಾಹಿಯಲ್ಲಿ ಅವಕಾಶ ಕೊಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಹಬ್ಬಿಸುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಪೋಸ್ಟ್‌ಗಳು ಹರಿದಾಡಿದ್ದವು. ಇದರ ವಿರುದ್ಧ ನಿರ್ಮಾಪಕ ರಾಮ್‌ ಜೀ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

producer Ramji filed Complaint at police station

ಸೋಶಿಯಲ್ ಮೀಡಿಯಾಗಳಲ್ಲಿ ತನ್ನ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ರಾಮ್ ಜೀ ಸೈಬರ್ ಕ್ರೈಂ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ಶುರುವಾಗಿದೆ. ಅಸಲಿಗೆ ರಾಮ್‌ ಜೀ ಲೈಂಗಿಕ ಕಿರುಕುಳದ ಆರೋಪ ಏನು? ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಸುದ್ದಿ ಏನು? ಅನ್ನುವುದನ್ನು ನೋಡುವುದಾರೇ..

ಕಳೆದ ಕೆಲವು ದಿನಗಳಿಂದ ಕನ್ನಡದ ಖ್ಯಾತ ಜನಪ್ರಿಯ ನಿರ್ಮಾಪಕ ರಾಮ್ ಜೀ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿತ್ತು. ಧಾರಾವಾಹಿಯಲ್ಲಿ ಅವಕಾಶ ಕೊಡಿಸುವುದಾಗಿ ಯುವತಿಗೆ ಮೋಸ ಮಾಡಿದ್ದಾರೆ. ಆ ಯುವತಿ ತನಗಾದ ಅನ್ಯಾಯದ ವಿರುದ್ಧ ಸಿಡಿದೆದ್ದಿದ್ದು, ಕೆಲವು ಸುದ್ದಿ ವಾಹಿನಿಗಳ ಕದ ತಟ್ಟಿದ್ದರು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ ಅನ್ನೋ ಸುದ್ದಿ ಓಡಾಡುತ್ತಿತ್ತು.

ಅಸಲಿಗೆ ವಿಷಯ ಏನಂದ್ರೆ, ನಟಿಸಲು ಅವಕಾಶ ಕೇಳಿಕೊಂಡು ಬಂದವಳನ್ನು ರಾಮ್ ಜೀ ಲೈಂಗಿಕವಾಗಿ ಬಳಿಸಿಕೊಂಡಿದ್ದಾರೆ ಅನ್ನೋದು ಆ ಅಪರಿಚಿತ ಯುವತಿ ಮಾಡುತ್ತಿರುವ ಆರೋಪ ಎನ್ನಲಾಗಿದೆ. ಇದೇ ವಿಚಾರವಾಗಿ ಯುವತಿ ಸುದ್ದಿ ವಾಹಿನಿಯ ಮೆಟ್ಟಿಲೇರಿದ್ದರು ಎನ್ನಲಾಗಿದೆ. ಆದರೆ, ನಿರ್ಮಾಪಕರು ನ್ಯಾಯಾಲಯದ ಮೊರೆ ಹೋಗಿ ಕಾರ್ಯಕ್ರಮ ಪ್ರಸಾರ ಮಾಡದಂತೆ ತಡೆ ತಂದಿದ್ದಾರೆ ಅನ್ನೋ ಸುದ್ದಿನೂ ಹರಿದಾಡುತ್ತಿದೆ.

ಇನ್ನೊಂದು ಕಡೆ ಪೇಸ್‌ ಬುಕ್‌ ನಲ್ಲಿ exposing ks ram ji director ಎಂದು ಪೇಜ್‌ ಕ್ರಿಯೆಟ್‌ ಮಾಡಿ ನಿರ್ಮಾಪಕರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಲಾಗಿದೆ. ಈ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿವೆ. ಆರೋಪ ಮಾಡುತ್ತಿರುವ ಆ ಯುವತಿ ಕೆಲವು ಆಡಿಯೋ ಮತ್ತು ವಿಡಿಯೋ ದಾಖಲೆ ಇಟ್ಟುಕೊಂಡಿದ್ದಾರೆ ಅನ್ನೋದು ಸದ್ಯ ಓಡುತ್ತಿರುವ ಸುದ್ದಿ.

producer Ramji filed Complaint at police station

ಇತ್ತ ನಿರ್ಮಾಪಕ ರಾಮ್‌ ಜೀ ವರ್ಷನ್ ಬೇರೆನೇ ಇದೆ. ತನ್ನ ಏಳಿಗೆಯನ್ನು ಸಹಿಸಲಾಗದವರು ತನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಯಾರೋ ಅಪರಿಚಿತರು ಸೋಶಿಯಲ್ ಮೀಡಿಯಾದಲ್ಲಿ ತನ್ನ ಹೆಸರು ಹಾಗೂ ಫೋಟೊವನ್ನು ಬಳಸಿಕೊಂಡು ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೆ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಪೇಜ್ ಮಾಡಿದ್ದನ್ನು ಡಿಲೀಟ್ ಮಾಡಿ, ಹೀಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.

More from Filmibeat

English summary
Serial producer Ramji filed Complaint at police station Miscreants Spreading False News Against Him.
Read more about: serial controversy case
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X