»   » ಮನೆಕೆಲಸದಾಕೆ ಮೇಲೆ ನಟಿ ಶ್ರುತಿ ಹಲ್ಲೆ ಆರೋಪ

ಮನೆಕೆಲಸದಾಕೆ ಮೇಲೆ ನಟಿ ಶ್ರುತಿ ಹಲ್ಲೆ ಆರೋಪ

Posted By:
Subscribe to Filmibeat Kannada

ತಮ್ಮ ಭಾವಪೂರ್ಣ ಅಭಿನಯದ ಮೂಲಕ ಮನೆಮಾತಾದ ತಾರೆ ಶ್ರುತಿ ಈಗ ಮತ್ತೊಂದು ಗುರುತರ ಆರೋಪ ಎದುರಿಸುವಂತಾಗಿದೆ. ತಮ್ಮ ಮನೆಕೆಲಸದಾಕೆಯ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಶ್ರುತಿ ಗುರಿಯಾಗಿದ್ದಾರೆ.

ನಟಿ ಶ್ರುತಿ ಅವರು ತಮ್ಮ ಮೇಲೆ ಹಲ್ಲೆ ಮಾಡಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಅವರ ಮನೆಕೆಲಸದಾಕೆ ಶೋಭಾ ಎಂಬುವವರು ಆರೋಪಿಸುತ್ತಿದ್ದಾರೆ. ಶ್ರುತಿ ಅವರ ಮನೆಯಲ್ಲಿ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಬೆಂಗಳೂರಿನ ಬಸವೇಶ್ವರನಗರದ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. [ಬೈದಿದ್ದೀನಿ, ಕೆಲಸದಿಂದ ತೆಗೆದಿದ್ದೇನೆ, ಹೊಡೆದಿಲ್ಲ: ಶ್ರುತಿ]

Servent accuses Kannada actress Shruti

ತಮ್ಮ ಮನೆಯ ಆಂತರಿಕ ವಿಚಾರಗಳನ್ನು ಬಹಿರಂಗಪಡಿಸಿದರು ಎಂಬ ಕಾರಣಕ್ಕೆ ಶ್ರುತಿ ಅವರು ಹಲ್ಲೆ ಮಾಡಿದ್ದಾಗಿ ಶೋಭಾ ಅವರು ಹೇಳಿಕೊಂಡಿದ್ದಾರೆ. ಈ ಸಂಬಂಧ ಶ್ರುತಿ ಅವರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರುವುದಾಗಿ ಹೇಳಿದ್ದಾರೆ.

ತಮ್ಮ ಮನೆಯ ಆಂತರಿಕ ವಿಚಾರಗಳನ್ನು ಅಕ್ಕಪಕ್ಕದವರ ಮನೆಗೆ ಹೇಳುತ್ತಿದ್ದರು ಎಂಬ ಕಾರಣ ಶ್ರುತಿ ಅವರು ಹಲ್ಲೆ ಮಾಡಿದ್ದಾರೆ ಎನ್ನುತ್ತಿದ್ದಾರೆ ಶೋಭಾ. ಹಲ್ಲೆ ಮಾಡಿದ ಬಳಿಕ ಖಾಲಿ ಹಾಳೆ ಮೇಲೆ ಸಹಿ ಮಾಡಿಸಿಕೊಂಡರು ಎಂದೂ ಶೋಭಾ ಅವರು ಆರೋಪಿಸಿದ್ದಾರೆ. (ಏಜೆನ್ಸೀಸ್)

English summary
Kannada actress Shruti's servent Shobha has accused the actress Shruti slapping her in her Basaveshwara Nagar residence. Servent Shobha decided to file a complaint against Shruti. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada