For Quick Alerts
  ALLOW NOTIFICATIONS  
  For Daily Alerts

  Me Too ಪ್ರಕರಣ: ನಟಿ ಶ್ರುತಿ ಹರಿಹರನ್ ಗೆ ಹಿನ್ನಡೆ

  |
  Me Too ಪ್ರಕರಣ : ಶ್ರುತಿ ಹರಿಹರನ್ ಸಲ್ಲಿಸಿದ್ದ ಅರ್ಜಿ ವಜಾ | FILMIBEAT KANNADA

  Me Too ಪ್ರಕರಣದಲ್ಲಿ ನಟಿ ಶ್ರುತಿ ಹರಿಹರನ್ ಗೆ ಹಿನ್ನಡೆ ಆಗಿದೆ. ನಟ ಅರ್ಜುನ್ ಸರ್ಜಾ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ವಜಾಗೊಳಿಸುವಂತೆ ಶ್ರುತಿ ಹರಿಹರನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

  ಬೆಂಗಳೂರಿನ ನೆಷನ್ಸ್ ನ್ಯಾಯಾಲಯ ಶ್ರುತಿ ಹರಿಹರನ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ನಟ ಅರ್ಜುನ್ ಸರ್ಜಾ ಪರವಾಗಿ ಧ್ರುವ ಸರ್ಜಾ 5 ಕೋಟಿ ರೂ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು.

  ಶ್ರುತಿ ಬಾಳಲ್ಲಿ ಡಬಲ್ ಧಮಾಕ: ಒಂದು ಪರ್ಸನಲ್, ಇನ್ನೊಂದು ಸಿನಿಮಾಶ್ರುತಿ ಬಾಳಲ್ಲಿ ಡಬಲ್ ಧಮಾಕ: ಒಂದು ಪರ್ಸನಲ್, ಇನ್ನೊಂದು ಸಿನಿಮಾ

  ನಟಿ ಶ್ರುತ ಹರಿಹರನ್ ಸುಳ್ಳು ಆರೋಪ ಮಾಡಿ, ವೈಯಕ್ತಿಕವಾಗಿ ಅರ್ಜುನ್ ಸರ್ಜಾರನ್ನು ಹಾಗೂ ಇಡೀ ಕುಟುಂಬವನ್ನು ಸಮಾಜದ ಎದುರು ತೆಲೆ ತಗ್ಗಿಸುಂತೆ ಮಾಡಿದ್ದಾರೆಂದು ಮಾನನಷ್ಟ ಮೊಕದ್ದಮೆ ಹೂಡಿದ್ದರು.


  ಧ್ರುವ ಸರ್ಜಾ ಹೂಡಿದ್ದ ಮಾನನಷ್ಟ ಮೊಕದ್ದಮೆ ಮಜಾ ಗೊಳಿಸುವಂತೆ ಶ್ರುತಿ ಹರಿಹರನ್ ನ್ಯಾಯಾಲದ ಮೆಟ್ಟಿಲೇದಿದ್ದರು. ವಾದ -ಪ್ರತಿವಾದ ಆಲಿಸಿದ ಕೊರ್ಟ್ ಧ್ರುವ ಸರ್ಜಾ ಸಲ್ಲಿಸಿದ್ದ ಮಾನನಷ್ಟ ಅರ್ಜಿಯನ್ನು ಊರ್ಜಿತವಾಗಿದೆ ಎಂದು, ಶ್ರುತಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ.

  ಶ್ರುತಿ ಹರಿಹರನ್, ನಟ ಅರ್ಜುನ್ ಸರ್ಜಾ ವಿರುದ್ಧ ಮೀ-ಟೂ ಆರೋಪ ಮಾಡಿದ್ದರು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸರ್ಜಾ ವಿರುದ್ಧ ದೂರು ನೀಡಿದ್ದರು. ಈ ದೂರಿನ ಬಗ್ಗೆ ಎಫ್ಐಆರ್ ದಾಖಲಿಸಲು ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸೆಷನ್ಸ್ ನ್ಯಾಯಾಲಯ ಶ್ರುತಿ ಹರಿಹರನ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವುದರಿಂದ ಮಾನನಷ್ಟ ಮೊಕದ್ದಮೆ ವಿಚಾರಣೆ ಮುಂದುವರೆಯಲಿದೆ.

  English summary
  Session court of Bangalore disqualified actress Shruthi Hariharan request

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X