ದುನಿಯಾ ವಿಜಿ ಜಾಮೀನು ಅರ್ಜಿ ತೀರ್ಪು ಮುಂದೂಡಿಕೆ : ಇನ್ನೂ ಎರಡು ದಿನ ಜೈಲೇ ಗತಿ
Recommended Video

ನಟ ದುನಿಯಾ ವಿಜಯ್ ಜಾಮೀನು ಅರ್ಜಿ ವಿಚಾರಣೆ ಇಂದು ಸೆಷನ್ಸ್ ಕೋರ್ಟ್ ನಲ್ಲಿ ನಡೆದಿದ್ದು, ಅವರ ತೀರ್ಪು ಅಕ್ಟೋಬರ್ 1ಕ್ಕೆ ಮುಂದೂಡಲಾಗಿದೆ.
ವಿಚಾರಣೆಯಲ್ಲಿ ದುನಿಯಾ ವಿಜಯ್ ಪರ ವಕೀಲರು ''ವಿಜಿ ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಿಲ್ಲ, ಒಬ್ಬ ಸೆಲಿಬ್ರಿಟಿ ಎನ್ನುವ ಕಾರಣಕ್ಕೆ ಸೆಕ್ಷನ್ 226 ಅನ್ನು ಹಾಕಲಾಗಿದೆ. ಅಲ್ಲದೆ, ಮಾರುತಿ ಗೌಡ ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ''. ಎಂದು ವಾದ ಮಂಡಿಸಿದ ಮಾಡಿಸಿದರು.
ವಾದ ವಿವಾದ ಆಲಿಸಿದ ಕೋರ್ಟ್ ಈ ತೀರ್ಪನ್ನು ಸೋಮವಾರಕ್ಕೆ ಮುಂದುಡಿದೆ. ಇದರಿಂದ ದುನಿಯಾ ವಿಜಯ್ ಇನ್ನೂ ಎರಡು ದಿನಗಳ ಕಾಲ ಜೈಲಿನಲ್ಲಿ ಇರಬೇಕಾಗಿದೆ. ಇಂದು ಜಾಮೀನು ಸಿಗಬಹುದು ಎಂಬ ಆಸೆಯಲ್ಲಿ ಇದ್ದ ವಿಜಿ ಇನ್ನು ಎರಡು ದಿನ ಕಾಯಬೇಕಿದೆ.

ಅಂದಹಾಗೆ, ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಜಾಮೀನು ನಿರಾಕರಣೆ ಆದ ಕಾರಣ ಈಗ ದುನಿಯಾ ವಿಜಯ್ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು. ಗುರುವಾರ ವಿಜಿ ಪರ ವಕೀಲ ಶಿವಕುಮಾರ್ ಅವರು ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.
ಘಟನೆಯ ವಿವರ:
ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಕಾಂಪಿಟೇಷನ್ ನಡೆಯುತ್ತಿತ್ತು. ಈ ವೇಳೆ ದುನಿಯಾ ವಿಜಿ ತಂಡ ಟ್ರೈನರ್ ಮಾರುತಿ ಗೌಡ ಅವರ ಮೇಲೆ ಹಲ್ಲೆ ಮಾಡಿ, ಕಾರಿನಲ್ಲಿ ಕರೆದೊಯ್ದಿದ್ದು, ಬೆದರಿಕೆ ಹಾಕಿದ್ದಾರೆ ಎಂದು ಪಾನಿಪುರಿ ಕಿಟ್ಟಿ ದೂರು ನೀಡಿದ್ದಾರೆ. ಮತ್ತೊಂದೆಡೆ ಹಲ್ಲೆಗೊಳಗಾದ ಮಾರುತಿ ಗೌಡ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರುತಿ ಅವರ ತುಟಿಗೆ 15 ಹೊಲಿಗೆ ಹಾಕಲಾಗಿದೆ.


Click it and Unblock the Notifications











