ಸಾಲದ ಸುಳಿಯಲ್ಲಿ ಹಿರಿಯ ನಟ ದ್ವಾರಕೀಶ್: ಕೋರ್ಟ್‌ನಿಂದ ಆದೇಶ!

ಕರ್ನಾಟಕದ ಹೆಸರಾಂತ ನಿರ್ದೇಶಕ, ನಿರ್ಲಮಾಪಕ, ನಟ ದ್ವಾರಕೀಶ್‌ ಅವರು ಸಾಲದ ಸುಳಿಯಲ್ಲಿ ಸಿಲುಕಿ ಕೊಂಡಿದ್ದಾರೆ. ದ್ವಾರಕೀಶ್​ ಅವರಿಗೆ ಈಗ ಸಂಕಷ್ಟ ಎದುರಾಗಿದೆ.

ಸಾಲದ ಹಣ ವಾಪಸ್ ನೀಡುವಂತೆ ದ್ವಾರಕೀಶ್‌ಗೆ ಕೋರ್ಟ್​ ಆದೇಶಿಸಿದೆ. 1 ತಿಂಗಳಲ್ಲಿ ಸಾಲದ ಹಣ ಹಿಂದಿರುಗಿಸಲು ಗಡುವು ನೀಡಲಾಗಿದೆ. 2013ರಲ್ಲಿ ನಿರ್ಮಾಪಕ ಕೆಸಿಎನ್​ ಚಂದ್ರಶೇಖರ್‌ ಅವರಿಂದ ದ್ವಾರಕೀಶ್​ ಸಾಲ ಪಡೆದುಕೊಂಡಿದ್ದರು. 'ಚಾರುಲತಾ' ಸಿನಿಮಾ ಬಿಡುಗಡೆಗಾಗಿ 50 ಲಕ್ಷ ರೂ. ಮೊತ್ತವನ್ನು ಅವರು ಪಡೆದಿದ್ದರು. ನಂತರ ಸಾಲದ ಹಣ ವಾಪಸ್​ ನೀಡಿಲ್ಲ. ಈ ಪ್ರಕರಣ ಕೋರ್ಟ್​ ಮೆಟ್ಟಿಲೇರಿತ್ತು. ಇನ್ನು ಒಂದು ತಿಂಗಳ ಒಳಗೆ 52 ಲಕ್ಷ ರೂ.ಗಳನ್ನು ಹಿಂದಿರುಗಿಸುವಂತೆ ದ್ವಾರಕೀಶ್​ ಅವರಿಗೆ ಕೋರ್ಟ್​ ಆದೇಶ ನೀಡಿದೆ.

2013ರಲ್ಲಿ ಕೆಸಿಎನ್​ ಚಂದ್ರಶೇಖರ್‌ ಅವರಿಂದ ಸಾಲ ಪಡೆಯುವಾಗ ದ್ವಾರಕೀಶ್​ ಅವರು ಚೆಕ್​ ನೀಡಿದ್ದರು. ನಂತರ ಚೆಕ್‌ ನೀಡಿಲ್ಲ ಅಂತ ಹೇಳಿದ್ದರು. ಚೆಕ್‌ ಮೇಲಿರುವ ಸಹಿ ಅವರದ್ದಲ್ಲ ಎಂದು ದ್ವಾರಕೀಶ್ ಅವರು ಹೇಳಿದ್ದರು. ಹೀಗಾಗಿ ಕೆಸಿಎನ್​ ಚಂದ್ರಶೇಖರ್‌ ಕೋರ್ಟ್ ಮೆಟ್ಟಿಲೇರಿದ್ದರು. ಆ ಸಹಿ ದ್ವಾರಕೀಶ್ ಅವರದ್ದೇ ಎಂದು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಸಾಬೀತಾಗಿತ್ತು.

Sessions Court Orders Actor, Producer Dwarakish To Repay Debt In One Month

ಹಾಗಾಗಿ ಹಣ ಹಿಂದಿರುಗಿಸುವಂತೆ 2019ರಲ್ಲಿ ದ್ವಾರಕೀಶ್​ ಅವರಿಗೆ ನ್ಯಾಯಾಲಯ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಅವರು ಸೆಷನ್ಸ್​ ಕೋರ್ಟ್​ಗೆ ಅವರು ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ಬಳಿಕ ಕೆಳ ನ್ಯಾಯಾಲಯದ ಆದೇಶವನ್ನು ಸೆಷನ್ಸ್​ ಕೋರ್ಟ್​ ಎತ್ತಿ ಹಿಡಿದಿದೆ.

ದ್ವಾರಕೀಶ್ ಸಂಬಂಧಿ ಸಂಜೀವ್‌ ಎನ್ನುವವರು ಕೆ.ಸಿ.ಎನ್‌ ಅವರಿಂದ ಹಣ ಪಡೆದುಕೊಂಡಿದ್ದರು. ಆಗ ದ್ವಾರಕೀಶ್ ಅವರಿಗೆ ಚೆಕ್‌ ನೀಡಿದ್ದರು. ಬಳಿಕ ಅವರು ಚೆಕ್‌ ನೀಡಿಲ್ಲ ಎಂದು ಹೇಳಿದ್ದರು. ಈ ವಿಚಾರದಲ್ಲಿ ದ್ವಾರಕೀಶ್ ಅವರಿಗೆ ಹಿನ್ನೆಡೆ ಆಗಿದೆ. ಹಾಗಾಗಿ ಇನ್ನು ಒಂದು ತಿಂಗಳಲ್ಲಿ ಪೂರ್ತಿ ಹಣ ಹಿಂದಿರುಗಿಸುವಂತೆ ಆದೇಶ ನೀಡಿದೆ.

Sessions Court Orders Actor, Producer Dwarakish To Repay Debt In One Month

ಆಯುಷ್ಮನಾಭವ ಚಿತ್ರದಿಂದ ಸೋಲುಂಡಿದ್ದ ದ್ವಾರಕೀಶ್!

ಆಯುಷ್ಮಾನ್‌ಭವ ಚಿತ್ರಕ್ಕಾಗಿ ನಿರ್ಮಾಪಕ ದ್ವಾರಕೀಶ್‌ ಸಾಲ ಪಡೆದಿದ್ದರು. ಆದರೆ ಚಿತ್ರ ಕೂಡ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಚಿತ್ರ ಸೋತ ಕಾರಣ ಸಾಲ ಹಿಂದಿರುಗಿಸಲು ಸಾಧ್ಯವಾಗಿಲ್ಲ. ನಂತರ ಈ ವಿಚಾರವಾಗಿ ಒಂದಷ್ಟು ಗಲಾಟೆ ಆಗಿತ್ತು. ನಿರ್ಮಾಪಕರು ಬಂದು ಧಮ್ಕಿ ಹಾಕಿದ್ದಾರೆ ಎಂದು ದ್ವಾರಕೀಶ್​ ಮಗ ಯೋಗೀಶ್​ ಠಾಣೆಗೆ ದೂರು ನೀಡಿದ್ದರು. ಇದಾದ ಬೆನ್ನಲ್ಲೇ ಸುದ್ದಿಗೋಷ್ಠಿ ಕರೆದಿದ್ದರು.

ಘಟನೆ ಬಗ್ಗೆ ಮಾತನಾಡಿದ್ದ ದ್ವಾರಕೀಶ್​, "ನನ್ನ ಮಗ ಮನೆಯಲ್ಲಿರಲಿಲ್ಲ. ನಾನು ನನ್ನ ಹೆಂಡತಿ ಮಾತ್ರ ಇದ್ದೆವು. ಸುಮಾರು 9 ಗಂಟೆ ಸುಮಾರಿಗೆ ಒಂದೇ ಸಮನೆ ಬಾಗಿಲು ತಟ್ಟಿದ್ದರು. ನಂತರ ಬಾಗಿಲು ಹೋಗಿ ನೋಡಿದರೆ ಜಯಣ್ಣ ಸೇರಿ ನಾಲ್ಕು ಜನ ಬಂದಿದ್ದರು. ಅವರು ತುಂಬ ಗಲಾಟೆ ಮಾಡಲು ಶುರು ಮಾಡಿದ್ದರು. ನಿಮ್ಮನ್ನು ಉಡಿಸ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು" ಎಂದು ಆಗ ಸುದ್ದಿಗೋಷ್ಟಿಯಲ್ಲಿ ಹೇಳಿಕೊಂಡಿದ್ದರು.

ಈ ಸಂದರ್ಭದಲ್ಲಿ ಮನೆ ಮಾರಿ ಆದರೂ ದುಡ್ಡು ಹಿಂದಿರುಗಿಸುತ್ತೇನೆ ಎಂದು ದ್ವಾರಕೀಶ್ ಹೇಳಿದ್ದರು. ನಂತರ ಮನೆ ಮಾರಲು ಕುಡ ಅವರು ಮುಂದಾಗಿದ್ದರು. ಈಗ ಕೆಸಿಎನ್‌ ಚಂದ್ರಶೇಖರ್ ಅವರ ಹಣವನ್ನು ಹಿಂದಿರುಗಿಸುವಂತೆ ಕೋರ್ಟ್‌ ಆದೇಶ ನೀಡಿದೆ. ಹಾಗಾಗಿ ದ್ವಾರಕೀಶ್ ಅವರು ಸದ್ಯ ಸಾಲದ ಸುಳಿಯಲ್ಲಿ ಸಿಲುಕಿದ್ದು, ಸಂಕಷ್ಟಕ್ಕೆ ತುತ್ತಾಗಿದ್ದಾರೆ.

More from Filmibeat

English summary
Sessions Court Orders Actor, Producer Dwarakish To Repay Debt In One Month, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X