For Quick Alerts
  ALLOW NOTIFICATIONS  
  For Daily Alerts

  ತಿಂಗಳ ಬಳಿಕ ಚಿತ್ರೀಕರಣಕ್ಕೆ ಹೊರಟ ಧ್ರುವ ಸರ್ಜಾ: ದುಬಾರಿ ಸೆಟ್ ನಲ್ಲಿ 'ಪೊಗರು' ಟೈಟಲ್ ಸಾಂಗ್ ಶೂಟಿಂಗ್

  |

  ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಮತ್ತೆ ಚಿತ್ರೀಕಣಕ್ಕೆ ಹೊರಡಲು ಸಿದ್ಧರಾಗಿದ್ದಾರೆ. ಧ್ರುವ ಸದ್ಯ ಬಹು ನಿರೀಕ್ಷೆಯ 'ಪೊಗರು' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕೊರೊನಾ ಲಾಕ್ ಡೌನ್ ನಿಂದ ಸಿನಿಮಾ ಕೆಲಸಕ್ಕೆ ಬ್ರೇಕ್ ಹಾಕಿತ್ತು.

  ಇದೀಗ ಧ್ರುವ ಲಾಕ್ ಡೌನ್ ಮುಗಿಸಿ ಮತ್ತೆ ಚಿತ್ರೀಕರಣಕ್ಕೆ ಹೊರಟಿದ್ದಾರೆ. ಅಂದ್ಹಾಗೆ ಚಿತ್ರತಂಡ 'ಪೊಗರು' ಸಿನಿಮಾದ ಟೈಟಲ್ ಸಾಂಗ್ ಸೆರೆಹಿಡಿಯುತ್ತಿದೆ. ಅದ್ದೂರಿಯಾಗಿ ಮೂಡಿಬರುತ್ತಿರುವ ಈ ಹಾಡಿಗೆ ಕೋಟಿ ವೆಚ್ಚದಲ್ಲಿ ಸೆಟ್ ನಿರ್ಮಾಣ ಮಾಡಲಾಗಿದೆಯಂತೆ. ಈ ಹಾಡನ್ನು ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಲಾಗುತ್ತಿದ್ದು, ಚಿತ್ರದ ಹೈ ವೋಲ್ಟೇಜ್ ಹಾಡು ಇದಾಗಿದೆ ಎನ್ನಲಾಗುತ್ತಿದೆ. ಮುಂದೆ ಓದಿ...

  'ಪೊಗರು' ಚಿತ್ರದ 'ಖರಾಬು' ಹಾಡಿಗೆ ತೆಲುಗಿನಲ್ಲಿಯೂ ಭರ್ಜರಿ ರೆಸ್ಪಾನ್ಸ್

  'ಪೊಗರು ಅಣ್ಣನಿಗೆ ಪೊಗರು...' ಹಾಡಿನ ಚಿತ್ರೀಕರಣ

  'ಪೊಗರು ಅಣ್ಣನಿಗೆ ಪೊಗರು...' ಹಾಡಿನ ಚಿತ್ರೀಕರಣ

  'ಪೊಗರು' ಚಿತ್ರದ ಟೈಟಲ್ ಹಾಡಿನ ಚಿತ್ರೀಕರಣಕ್ಕೆ ಬರೋಬ್ಬರಿ 1.50 ಕೋಟಿಯ ಸೆಟ್ ನಿರ್ಮಾಣ ಮಾಡಲಾಗಿದೆಯಂತೆ. ಈ ಸೆಟ್ ನಲ್ಲಿ ಧ್ರುವ ಅನೇಕ ನೃತ್ಯಗಾರ ಜೊತೆ ಜಬರ್ದಸ್ತ್ ಸ್ಟೆಪ್ ಹಾಕುತ್ತಿದ್ದಾರೆ. 'ಪೊಗರು ಅಣ್ಣನಿಗೆ ಪೊಗರು...' ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡು ಅದ್ಭುತವಾಗಿ ಮೂಡಿ ಬಂದಿದೆಯಂತೆ. ಈ ಹಾಡಿಗೆ ಮುರಳಿ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ.

  ಸೆಪ್ಟಂಬರ್ 24ರಿಂದ ಚಿತ್ರೀಕರಣ

  ಸೆಪ್ಟಂಬರ್ 24ರಿಂದ ಚಿತ್ರೀಕರಣ

  ಅಂದ್ಹಾಗೆ 'ಪೊಗರು' ಸಿನಿಮಾದ ಬಹು ನಿರೀಕ್ಷೆಯ ಟೈಟಲ್ ಹಾಡು ಸೆಪ್ಟಂಬರ್ 24ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಸುಮಾರು 6 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಪೊಗರು ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ನಟ ಧನಂಜಯ್ ಮತ್ತು ಇತರ ಕೆಲವು ಕಲಾವಿದರ ಸಂಭಾಷಣೆ ದೃಶ್ಯಗಳು ಮಾತ್ರ ಬಾಕಿಯಿದೆಯಂತೆ.

  ಧ್ರುವ ಸರ್ಜಾ ದಂಪತಿಗೆ ಕೊರೊನಾ ನೆಗೆಟಿವ್: ಅಣ್ಣನ ಆಶೀರ್ವಾದ ಎಂದ ನಟ

  ದಾಖಲೆಯ ವೀಕ್ಷಣೆ ಪಡೆದ 'ಖರಾಬು..' ಹಾಡು

  ದಾಖಲೆಯ ವೀಕ್ಷಣೆ ಪಡೆದ 'ಖರಾಬು..' ಹಾಡು

  ಈಗಾಗಲೇ ಚಿತ್ರದಿಂದ 'ಖರಾಬು' ಹಾಡು ರಿಲೀಸ್ ಆಗಿದ್ದು, ದಾಖಲೆ ನಿರ್ಮಿಸಿದೆ. ಲಾಕ್ ಡೌನ್ ಸಮಯದಲ್ಲಿ ಅಂದರೆ ಏಪ್ರಿಲ್ ನಲ್ಲಿ ರಿಲೀಸ್ ಆದ ಈ ಹಾಡು ವೀಕ್ಷಣೆಯಲ್ಲಿ ಮತ್ತು ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದೆ. ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇದೀಗ ಚಿತ್ರೀಕರಣವಾಗುತ್ತಿರುವ ಹಾಡಿನ ಮೇಲು ಸಹ ನಿರೀಕ್ಷೆ ದುಪ್ಪಟ್ಟಾಗಿದೆ.

  ಡ್ರಗ್ ವಿಚಾರ ಇದು ನನಗೆ ಹೊಸ ತರ ಅನುಭವ ಎಂದ ಬ್ರಹ್ಮಗಂಟು ನಟಿ | Geetha Bhat | Filmibeat Kannada
  ಧ್ರುವ ಸರ್ಜಾಗೆ ನಾಯಕಿಯಾಗಿ ರಶ್ಮಿಕಾ ಅಭಿನಯ

  ಧ್ರುವ ಸರ್ಜಾಗೆ ನಾಯಕಿಯಾಗಿ ರಶ್ಮಿಕಾ ಅಭಿನಯ

  ಚಿತ್ರದಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ರಶ್ಮಿಕಾ, ಧ್ರುವ ಜೊತೆ ನಟಿಸುತ್ತಿದ್ದಾರೆ. ರಶ್ಮಿಕಾ 'ಯಜಮಾನ' ಸಿನಿಮಾ ಬಳಿಕ ಕನ್ನಡದಲ್ಲಿ ನಟಿಸುತ್ತಿರುವ ಸಿನಿಮಾವಿದು. ಈಗಾಗಲೇ ಹಾಡಿನ ಜೊತೆಗೆ ಚಿತ್ರದಿಂದ ಡೈಲಾಗ್ ಟ್ರೈಲರ್ ಕೂಡ ರಿಲೀಸ್ ಆಗಿದ್ದು, ಅಭಿಮಾನಿಗಳ ನಿದ್ದೆ ಗೆಡಿಸಿದೆ. ಚಿತ್ರದಲ್ಲಿ ನಟಿ ಮಯೂರಿ, ರವಿ ಶಂಕರ್, ಚಿಕ್ಕಣ್ಣ, ಕುರಿ ಪ್ರಥಾಪ್ ಸೇರಿದಂತೆ ಅನೇಕ ಕಲಾವಿದರಿದ್ದಾರೆ. ಸ್ಯಾಂಡಲ್ ವುಡ್ ನ ನಿರೀಕ್ಷೆಯ ಸಿನಿಮಾಗಳಲ್ಲಿ ಇದಾಗಿದ್ದು, ಮುಂದಿನ ವರ್ಷ ತೆರೆಗೆ ಬರುತ್ತಿದೆ.

  English summary
  Dhruva Sarja starrer Pogaru movie is gearing up to kick start shooting again after lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X