»   » ಸೇತು : ನೋಡಿ ಹುಚ್ಚರಾದವರು... ಮಾಡಿ ಹುಚ್ಚರಾದರು

ಸೇತು : ನೋಡಿ ಹುಚ್ಚರಾದವರು... ಮಾಡಿ ಹುಚ್ಚರಾದರು

Posted By: *ಸತ್ಯವ್ರತ ಹೊಸಬೆಟ್ಟು
Subscribe to Filmibeat Kannada

ತಮಿಳಿನಲ್ಲಿ ಒಂದು ಒಳ್ಳೆಯ ಚಿತ್ರ ಬಂದರೆ ಅದನ್ನು ಅಚ್ಚುಕಟ್ಟಾಗಿ ಕನ್ನಡಕ್ಕೆ ತರುವಲ್ಲಿ ನಮ್ಮ ನಿರ್ಮಾಪಕರೆಂದೂ ಹಿಂದೆ ಬಿದ್ದವರಲ್ಲ. ವಾನತ್ತೆೈಪೋಲ ಬರುತ್ತಿದ್ದ ಹಾಗೆ ಅದನ್ನು ಯಜಮಾನ ಎನ್ನುವ ಹೆಸರಿನಲ್ಲಿ ರಿಮೇಕ್‌ ಮಾಡಲಾಯಿತು. ಈಗಂತೂ ತಮಿಳು ಚಿತ್ರ ಬಿಡುಗಡೆಯಾಗುತ್ತಿರುವಂತೆಯೇ ಅದರ ಕನ್ನಡ ಹಕ್ಕುಗಳಿಗಾಗಿ ಕ್ಯೂ ನಿಲ್ಲುವ ನಿರ್ಮಾಪಕರೂ ನಿರ್ದೇಶಕರೂ ನಮ್ಮಲ್ಲಿದ್ದಾರೆ.

ಕೆಲವು ತಿಂಗಳ ಹಿಂದೆ ಸೇತು ಬಿಡುಗಡೆಯಾದಾಗ ಅದನ್ನೂ ರಿಮೇಕ್‌ ಮಾಡಬೇಕೆಂಬ ಆಸೆಯನ್ನು ಕನ್ನಡದ ನಿರ್ಮಾಪಕರು ವ್ಯಕ್ತ ಪಡಿಸಿದ್ದುಂಟು. ಉಪೇಂದ್ರ ಚಿತ್ರದ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್‌ ಅದನ್ನು ಕನ್ನಡದಲ್ಲಿ ಮಾಡುವುದಾಗಿಯೂ, ತಾವೇ ಹೀರೋ ಆಗುವುದಾಗಿಯೂ ಹೇಳಿದ್ದರು.

ಇದೀಗ ರೆಹಮಾನ್‌ ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ. ಲೇಟ್‌ ಲತೀಫ ಎಂದೇ ಹೆಸರಾದ ಓಂ ಪ್ರಕಾಶ್‌ ಆ ರಿಮೇಕ್‌ ಚಿತ್ರದ ನಿರ್ದೇಶಕರು. ಸ್ಪರ್ಶ ಖ್ಯಾತಿಯ ಸುದೀಪ್‌ ನಾಯಕರಾಗಿ ನಟಿಸುತ್ತಿದ್ದಾರೆ.

ಅದಕ್ಕಿಂತ ಕುತೂಹಲ ಸಂಗತಿಯೆಂದರೆ, ಸೇತು ಚಿತ್ರದ ಕನ್ನಡ ಅವತರಿಣಿಕೆಗೆ ಹುಚ್ಚ ಎಂದು ಹೆಸರಿಟ್ಟಿರುವುದು. ಮೂಲತಃ ಈ ಹೆಸರಿನ ಚಿತ್ರವನ್ನು ಉಪೇಂದ್ರ ಮಾಡಬೇಕಾಗಿತ್ತು. ಅವರ ಸದ್ಯದ ಇಮೇಜು ಮತ್ತು ಖ್ಯಾತಿಗೆ ಹುಚ್ಚ ಎಂಬ ಟೈಟಲ್‌ ಸೂಟ್‌ ಆಗುತ್ತಿತ್ತು ಕೂಡ.

ಆದರೆ, ಸೇತು ಚಿತ್ರಕ್ಕೆ ೕ ಹೆಸರಿಟ್ಟಿರುವ ಔಚಿತ್ಯ ಅರಿವಾಗುತ್ತಿಲ್ಲ. ಸೇತು ಹುಚ್ಚುತನಕ್ಕಿಂತ ವಿಷಾದವೇ ಗಾಢ ಸ್ಥಾಯಿಯಾಗಿರುವ ಚಿತ್ರ. ನಾಯಕನಿಗೆ ತಲೆಗೆ ಏಟು ಬಿದ್ದು ಆತ ಅಸಿಲಮ್‌ ಸೇರಿಕೊಳ್ಳುತ್ತಾನೆ. ನಿಜ . ಆದರೆ, ಅದರಿಂದಾಗಿ ಆತ ಹುಚ್ಚನೆಂಬ ಭಾವನೆ ನಿಮ್ಮಲ್ಲಿ ಹುಟ್ಟುವುದಿಲ್ಲ. ಕೊನೆಯಲ್ಲಿ ಆತ ನಾಯಕಿಯನ್ನು ಕಳೆದುಕೊಂಡು ನಿಜವಾಗಿಯೂ ಹುಚ್ಚನಾದಾಗಲೂ ನಿಮ್ಮನ್ನು ಅನುಸರಿಸುವುದು ಒಂದು ಒಳ್ಳೆಯ ಕತೆ, ಕಾದಂಬರಿ ಹುಟ್ಟಿಸುವಂಥ ನೋವು ಮಾತ್ರ. ಇಂಥ ಚಿತ್ರಕ್ಕೆ ಹುಚ್ಚ ಎಂಬ ಹೆಸರಿಡುವ ಮೂಲಕ , ರೆಹಮಾನ್‌ ಆ್ಯಂಡ್‌ ಕಂಪೆನಿ ಕನ್ನಡ ಚಿತ್ರ ನಿರ್ಮಾಪಕರ ಮನಸ್ಸುಗಳು ಹೇಗೆ ಯೋಚಿ-ಸುತ್ತವೆ ಅನ್ನುವುದನ್ನು ಹೇಳುತ್ತದೆ.

ಚಿತ್ರದ ನಾಯಕಿ ಯಾರು ಅನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಹಾಗೆ-ಯೇ-, ಚಿತ್ರದ ಸಂಗೀತ ನಿರ್ದೇಶಕರ ಹೆಸರು ಗೊತ್ತಾಗಿಲ್ಲ.

English summary
kannada produsers continue their remake business

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada