»   » ಮಲಯಾಳಂ ನಟ ದಿಲೀಪ್ ವಿರುದ್ಧ ಗುಡುಗಿದ ಬಹುಭಾಷಾ ನಟಿ

ಮಲಯಾಳಂ ನಟ ದಿಲೀಪ್ ವಿರುದ್ಧ ಗುಡುಗಿದ ಬಹುಭಾಷಾ ನಟಿ

Posted By:
Subscribe to Filmibeat Kannada

ಮಲಯಾಳಂ ನಟಿಯ ಮೇಲೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂದಪಟ್ಟಂತೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ವಿರುದ್ಧ ಮಾನಹಾನಿಕರ ಹೇಳಿಕೆ ನೀಡುತ್ತಿರುವ ಜನಪ್ರಿಯ ಸಿನಿಮಾ ನಟ ದಿಲೀಪ್ ಗೆ ಎಚ್ಚರಿಕೆ ನೀಡಿದ್ದಾರೆ. 'ನಿಮ್ಮ ಮೇಲೆ ಮಾನ ನಷ್ಟ ಮೊಕದ್ದಮೆ ಹೂಡುತ್ತೇನೆ,' ಎಂದು ಆಕೆ ಬೆದರಿಕೆ ಹಾಕಿದ್ದಾರೆ.

ಮಲಯಾಳಂ ಭಾಷೆಯ ಜನಪ್ರಿಯ ನಟ ದಿಲೀಪ್ ವಿರುದ್ದ ಬಹುಭಾಷಾ ಸ್ಟಾರ್ ನಟಿ ತಿರುಗಿ ಬಿದ್ದಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಅಪಹರಣಕ್ಕೊಳಗಾಗಿ, ಈಕೆ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದರು.

ಬಹುಭಾಷಾ ನಟಿ ಲೈಂಗಿಕ ಪ್ರಕರಣ: ನಟ ದಿಲೀಪ್ ಗೆ ಬ್ಲ್ಯಾಕ್ ಮೇಲ್ ಕರೆ.!

ಫೆಬ್ರವರಿ 17ರಂದು ಮಲಯಾಳಂ ಮೂಲದ ಸ್ಟಾರ್ ನಟಿ ಅಪಹರಣಕ್ಕೊಳಗಾಗಿ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದರು. ಆದರೆ ಅಲ್ಲಿಂದ ಘಟನೆ ಬಗ್ಗೆ ಮೌನವಾಗಿದ್ದ ನಟಿ ಮಂಗಳವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ದೌರ್ಜನ್ಯ ನಡೆದ ಬೆನ್ನಿಗೆ ತನ್ನ ಪ್ರಿಯತಮ ಕರ್ನಾಟಕದ ಮೂಲದ ನಿರ್ಮಾಪಕನ ಜತೆ ನಟಿ ನಿಶ್ಚಿತಾರ್ಥವನ್ನೂ ಮುಗಿಸಿದ್ದರು. ಇದೀಗ ಅವರು ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಮುಂದೆ ಓದಿ...

ನಟಿ ಮಾತು

"ಇದೀಗ ಪ್ರಕರಣದಲ್ಲಿ ಕೈಜೋಡಿಸಿದ್ದಾರೆ ಎನ್ನಲಾದ ಹಲವರ ಹೆಸರುಗಳು ಹೊರ ಬರುತ್ತಿವೆ. ನನಗೆ ಗೊತ್ತು ಮಾಧ್ಯಮಗಳ ಮೂಲಕ ಈ ಹೆಸರುಗಳು ನನಗೆ ತಿಳಿಯುತ್ತಿವೆ. ಯಾರನ್ನೇ ಗುರಿಯಾಗಿಸಿ ಶಿಕ್ಷೆ ನೀಡಿ ಅಥವಾ ಕೈ ಬಿಡಿ ಎಂದು ಪೊಲೀಸರಿಗೆ ನಾನು ಹೇಳಿಲ್ಲ. ಸಾಮಾಜಿಕ ಜಾಲತಾಣಲದಲ್ಲಿಯೂ ನಾನು ಯಾರ ಹೆಸರನ್ನೂ ಹೇಳಿಲ್ಲ. ಪ್ರಸ್ತಾಪವಾಗುತ್ತಿರುವ ಹೆಸರುಗಳಲ್ಲಿ ಯಾರದ್ದೇ ಆಗಲಿ ಘಟನೆಯಲ್ಲಿ ಅವರ ಕೈವಾಡ ಇದೆ ಎಂದು ನಿರೂಪಿಸಲು ನನ್ನ ಬಳಿ ಯಾವುದೇ ಸಾಕ್ಷ್ಯವಿಲ್ಲ," ಎಂದು ನಟಿ ಹೇಳಿದ್ದಾರೆ.

ನನ್ನ ಗಮನಕ್ಕೆ ಬಂದಿದೆ.

''ನಟರೊಬ್ಬರು ಹೇಳಿಕೆ ನೀಡಿದ್ದು ನನ್ನ ಗಮನಕ್ಕೆ ಬಂದಿದೆ. ಹೇಳಿಕೆಯಲ್ಲಿ ನಟರು ನಾನು ಮತ್ತು ಆರೋಪಿ ಪಲ್ಸರ್ ಸುನಿ ಗೆಳೆಯರು ಎಂದಿದ್ದಾರೆ. ನಾನು ನನ್ನ ಗೆಳೆಯರನ್ನು ತುಂಬಾ ಜಾಗರೂಕತೆಯಿಂದ ಆರಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಇದು ನನ್ನ ಮನಸ್ಸಿಗೆ ಭಾರೀ ನೋವುಂಟು ಮಾಡಿದೆ. ಅನಿವಾರ್ಯವಾದರೆ ನಾನು ಆಧಾರ ರಹಿತ ಸುದ್ದಿಯನ್ನು ಹರಡುತ್ತಿರುವುದಕ್ಕೆ ನಟನ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ. " ಎಂದು ನಟಿ ಹೇಳಿದ್ದಾರೆ.

ಕಾನೂನು ಕ್ರಮಕ್ಕೆ ಸಿದ್ಧ

''ನನ್ನ ಬಗ್ಗೆ ಆಧಾರವಿಲ್ಲದ ವದಂತಿಗಳು ಹರಿದಾಡುತ್ತಿದೆ. ಆದರೆ ನನ್ನ ಆತ್ಮಸಾಕ್ಷಿ ಶುದ್ಧವಾಗಿದೆ, ನಾನು ಯಾರಿಗೂ ಭಯ ಪಡುವ ಅಗತ್ಯ ಇಲ್ಲ. ತಪ್ಪು ಮಾಡಿದ್ದರೆ ಕಾನೂನು ಕ್ರಮ ಕೈಗೊಳ್ಳಿ. ಎಲ್ಲ ವಿಚಾರಣೆಗಳನ್ನು ನಾನು ಎದುರಿಸುತ್ತೇನೆ. ಸುಳ್ಳು ಪತ್ತೆ ಪರೀಕ್ಷೆಗೆ ಸಹ ನಾನು ಸಿದ್ಧ'' - ದಿಲೀಪ್, ನಟ

ದೂರು ನೀಡಿದ್ದೇನೆ

''ಜೈಲಿನಲ್ಲಿರುವ ಪಲ್ಸರ್ ಸುನಿಯ ಸಹಚರರು ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ನನಗೆ ಹಣಕ್ಕೆ ಡಿಮ್ಯಾಂಡ್ ಮಾಡಿ ಕರೆ ಮಾಡಿದ್ದಾನೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರನ್ನು ನೀಡಿದ್ದೇನೆ'' - ದಿಲೀಪ್, ನಟ

ಪ್ರಕರಣದ ಬಗ್ಗೆ

ಮಲೆಯಾಳಂ ನಟಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ವಿರುದ್ಧ ಆರೋಪ ಕೇಳಿ ಬಂದಿತ್ತು. ಈಗ ದಿಲೀಪ್ ಪ್ರಕರಣ ಕುರಿತು ತಾವು ಎಲ್ಲ ರೀತಿಯ ತನಿಖೆಗೆ ಸಿದ್ಧ ಅಂತ ಹೇಳಿಕೊಂಡಿದ್ದಾರೆ.

English summary
Actor Dilip has Reacted About the Allegations of Sexual Harassment on Actress.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada