ಚಿತ್ರೋದ್ಯಮಿಗಳಿಗೆ ಶಬಾನಾ ಫೈರಿಂಗ್‌

By Staff

*ಮೋಹನ್‌

ಆ ಮನೆಯಲ್ಲಿ ವರದಕ್ಷಿಣೆ ಕಾಟ. ಇನ್ನೇನು ಸೀಮೆ ಎಣ್ಣೆ ಸುರಿದು ಬೆಂಕಿ ಕೊಡಬೇಕು ಎನ್ನುವಷ್ಟರಲ್ಲಿ ಆಕೆ ಪಾರಾಗಿ ತವರಿಗೆ ಓಡುತ್ತಲೇ ಹೋಗುತ್ತಾಳೆ. ಹಲವು ವರ್ಷಗಳ ನಂತರ ತೀರಾ ಬಡತನಕ್ಕೆ ತುತ್ತಾದ ಗಂಡನ ಸಂಸಾರವನ್ನು ಕಂಡು ಕರುಳು ಕರಗಿ, ಧಾರಾಳವಾಗಿ ಕ್ಷಮಿಸಿ, ಆಕೆ ಮತ್ತೆ ಗಂಡನ ಮನೆಗೆ ಬರುತ್ತಾಳೆ...ಮಹಾಲಕ್ಷ್ಮಿಯಾಗಿ. ಇದು ಸಿನೆಮಾವೊಂದರ ಕತೆ.

ಇತ್ತೀಚಿನ ದಶಕಗಳಲ್ಲಿ ಬರುತ್ತಿರುವ ಧಾರಾವಾಹಿ, ಸಿನೆಮಾಗಳಲ್ಲಿ ಮಹಿಳೆಯನ್ನು ತ್ಯಾಗ ಮೂರ್ತಿ, ಕ್ಷಮಾದೇವಿ ಎಂದು ಚಿತ್ರಿಸುವುದು, ಆ ಮೂಲಕ ಗಂಡಸು ಏನು ತಪ್ಪು ಮಾಡಿದರೂ ಅದನ್ನು ಹೆಂಗಸು ಕ್ಷಮಿಸುವುದೇ ಧರ್ಮ ಎಂಬ ಪರೋಕ್ಷ ಸಂದೇಶವನ್ನು ವೀಕ್ಷಕರಿಗೆ ನೀಡುವುದು ಸರಿಯೇ...?

‘ ಸರಿಯಲ್ಲ. ಹೆಣ್ಣೆಂದರೆ ಆದರ್ಶ ಸೀತೆ ಎಂಬ ಕಲ್ಪನೆಯನ್ನು ಬಿಂಬಿಸುವ ಸಿನೆಮಾಗಳು ಸಾಕೋ.. ಸಾಕು’ ಅಂತ ಚಿತ್ರನಟಿ, ರಾಜ್ಯಸಭಾ ಸದಸ್ಯೆ ಹಾಗೂ ಇತ್ತೀಚೆಗೆ ಚಿಂತಕಿ ಎಂದೂ ಕರೆಸಿಕೊಳ್ಳುತ್ತಿರುವ ಶಬಾನಾ ಆಜ್ಮಿ ಚಿತ್ರ ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಕಿವಿ ಮಾತು ಹೇಳಿದ್ದಾರೆ.

ಫೈರ್‌ ಚಿತ್ರದ ಮೂಲಕ ದೇಶದ ಸಂಸ್ಕೃತಿಗೆ ವ್ಯಾಖ್ಯೆ ಕಟ್ಟುವ ಆಂದೋಳನವನ್ನೇ ಹುಟ್ಟು ಹಾಕಿ, ವಾಟರ್‌ ಚಿತ್ರಕ್ಕಾಗಿ ತಲೆ ಬೋಳಿಸಿಕೊಂಡು ಸಾಕಷ್ಟು ವಾದ ವಿವಾದಗಳಿಗೆ ತುಪ್ಪ ಸುರಿದಿದ್ದ ಶಬಾನಾ , ಮೈಸೂರಿನ ಅಕ್ಕ ನಾಟಕೋತ್ಸವದಲ್ಲಿ ನಡೆದ ಮಹಿಳಾ ಸಶಕ್ತೀಕರಣ ಎಂಬ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದರು.

ಬರೇ ದೌರ್ಜನ್ಯವನ್ನೇ ಯಾಕೆ ಚಿತ್ರಿಸುತ್ತೀರಿ ?

ಆರ್ಥಿಕ ಸ್ವಾತಂತ್ರ್ಯ ಯಾವತ್ತೂ ಮಹಿಳೆಯನ್ನು ದೌರ್ಜನ್ಯದಿಂದ ಮುಕ್ತವಾಗಿಸುತ್ತದೆ ಎನ್ನುವುದು ಶಬಾನಾ ಅಭಿಪ್ರಾಯ. ಬೆಳಗ್ಗೆ ಅಡುಗೆ, ಮಕ್ಕಳ ಸ್ಕೂಲು , ಗಂಡನ ಸಾಕ್ಸು, ಶೂ ಎಲ್ಲವನ್ನೂ ನಿಭಾಯಿಸಿಕೊಂಡು ನಂತರ, ತಡಬಡಾಯಿಸಿ ನೌಕರಿಗೆ ಹೋಗುವ ಮಹಿಳೆಯದು ಆರಾಮ್‌ ಜೀವನವೇ.... ಎಂಬ ಹಿಂದಿನ ಸಾಲಿನ ಪ್ರಶ್ನೆ ಶಬಾನಾಗೆ ಕೇಳಿಸಲಿಲ್ಲ. ಅವರು ಮಾತನಾಡುತ್ತಿದ್ದು ಇತ್ತೀಚೆಗಿನ ಸಿನೆಮಾಗಳ ಧೋರಣೆ ಬಗ್ಗೆ.

‘ಈಗ ಮಹಿಳೆಯರು ತಮ್ಮ ಸಾಮರ್ಥ್ಯವನ್ನುಅರಿತಕೊಂಡಿದ್ದಾರೆ. ದೌರ್ಜನ್ಯಕ್ಕೊಳಗಾಗುವುದು, ತ್ಯಾಗವನ್ನೇ ತೆಕ್ಕೆಯಲ್ಲಿಟ್ಟುಕೊಂಡು ಬದುಕುವ ಕಾಲ ಹಿಂದೆ ಸರಿದಿದೆ. ಚಿತ್ರ ನಿರ್ಮಾಪಕರು ಇದನ್ನು ಅರಿತುಕೋಬೇಕು. ಆಕೆಯನ್ನು ಮನೆಯಲ್ಲಿ ಮುದ್ದಿನ, ಮುಗುದೆ ಮಗಳು, ಅಮ್ಮ, ಸಹೋದರಿ, ನಾದಿನಿ, ಅಕ್ಕ...ಆಫೀಸಿನಲ್ಲಿ ಆಪ್ತ ಸೆಕ್ರೆಟರಿಯಾಗಿಯೇ ಚಿತ್ರಿಸುವುದಷ್ಟೇ ಚಿತ್ರನಿರ್ಮಾಪಕರಿಗೆ ಗೊತ್ತು ಅಂತ ಶಬಾನಾ ಬೇಜಾರು ಮಾಡಿಕೊಂಡರು.

ದೌರ್ಜನ್ಯ, ಶೋಷಣೆಯಂತಹ ವಿಷಯಗಳನ್ನೇ ಮತ್ತೆ ಮತ್ತೆ ಚಿತ್ರಿಸುವುದರ ಬದಲು ಮುಂದೆ ಬರುತ್ತಿರುವ ಆಧುನಿಕ ಮಹಿಳೆಯರಿಗೆ ಪ್ರೋತ್ಸಾಹ ನೀಡುವಂತಹ ಚಿತ್ರಗಳನ್ನು ನಿರ್ಮಿಸಬಾರದೇ ... ಎಂದು ಪ್ರಶ್ನಿಸಿದ ಅಜ್ಮಿ ಕೋಮುವಾದ, ಮಹಿಳಾ ವಾದಕ್ಕೆ ಸಂಬಂಧಿಸಿ ತಮ್ಮ ಇತ್ತೀಚಿನ ಹೊಸ ಚಿಂತನೆ, ವಾದಗಳನ್ನು ಮಂಡಿಸಿದರು.
ಅವುಗಳಲ್ಲಿ ಒಂದರೆಡು :

  • ಕೇಂದ್ರ ಸರಕಾರ ಹೊಸದೊಂದು ರಾಷ್ಟ್ರೀಯ ಸಾಂಸ್ಕೃತಿಕ ನೀತಿ ಸಂಹಿತೆ ರಚಿಸಬೇಕು.
  • ಬಹುಸಂಖ್ಯಾತರ ಕೋಮುವಾದದಷ್ಟೇ ಅಲ್ಪಸಂಖ್ಯಾತರ ಕೋಮುವಾದ ಅಪಾಯಕಾರಿ. ಅದು ಭಾರತೀಯ ಸಂಸ್ಕೃತಿಯನ್ನು ನಾಶ ಮಾಡುತ್ತದೆ. ಆದ್ದರಿಂದ ಕೋಮುವಾದ ಯಾವುದೇ ಇರಲಿ ಅದು ಖಂಡನೆಗೆ ಅರ್ಹ.
  • ಶಿಕ್ಷಣದ ಕೇಸರೀಕರಣವನ್ನು ತಡೆಗಟ್ಟಲು, ಶಿಕ್ಷಣ ನೀತಿ ರೂಪಿಸುವಾಗ ಕೇಂದ್ರ, ರಾಜ್ಯ ಸರಕಾರಗಳನ್ನು ಸಂಪರ್ಕಿಸಲೇ ಬೇಕು.
  • ದೇಶದ ಬಹು ಸಾಂಸ್ಕೃತಿಕತೆಯನ್ನು ಬಿಂಬಿಸಬಲ್ಲ, ಜನಪ್ರಿಯ ರಂಗಭೂಮಿ ಕ್ಷೇತ್ರಕ್ಕೆ ಸ್ವತಂತ್ರ ಸಾಮರ್ಥ್ಯವಿದೆ. ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕು.
ವಾರ್ತಾ ಸಂಚಯ
ಮುಖಪುಟ / ಸ್ಯಾಂಡಲ್‌ವುಡ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X