»   » ಶಬರಿಮಲೆಯಲ್ಲಿ ಪ್ರಸಾದದ ಕೊರತೆ : ಭಕ್ತರ ಅಸಮಧಾನ

ಶಬರಿಮಲೆಯಲ್ಲಿ ಪ್ರಸಾದದ ಕೊರತೆ : ಭಕ್ತರ ಅಸಮಧಾನ

Posted By:
Subscribe to Filmibeat Kannada


ಶಬರಿಮಲೆ, ಡಿ.13 : ಪೂರ್ವ ಸಿದ್ಧತೆಯಿಲ್ಲದ ಕಾರಣ, ಭಕ್ತರಿಗೆ ಪ್ರಸಾದ ವಿನಿಯೋಗಿಸುವಲ್ಲಿ ಶಬರಿಮಲೆ ದೇವಸ್ಥಾನ ವಿಫಲವಾಗಿದೆ. ಈ ಪರಿಣಾಮ ದೇವಸ್ಥಾನಕ್ಕೆ ಸುಮಾರು 3ಕೋಟಿ ರೂಪಾಯಿ ನಷ್ಟ ಉಂಟಾಗಿದ್ದು, ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಕರ ಜ್ಯೋತಿ ದರ್ಶನ ಸೇರಿದಂತೆ ಡಿಸೆಂಬರ್ ಮತ್ತು ಜನವರಿ ತಿಂಗಳ ದಿನಗಳು ಅಯ್ಯಪ್ಪನ ಭಕ್ತರಿಗೆ, ಶ್ರದ್ಧಾಭಕ್ತಿಯ ದಿನಗಳು. ಹೆಚ್ಚಿನ ಭಕ್ತರು ಈ ಸಂದರ್ಭದಲ್ಲಿ ಶಬರಿಮಲೆಗೆ ಆಗಮಿಸುತ್ತಾರೆ. ಅರವಣ ಹೆಸರಿನ ಪ್ರಸಾದವನ್ನು ಭಕ್ತರಿಗೆ ವಿತರಣೆ ಮಾಡಲಾಗುತ್ತದೆ. ಈ ಸಲ ಪ್ರಸಾದದ ಅಭಾವ ಕಂಡು ಬಂದಿದೆ. ಕಳೆದ ಸಲ ಇದೇ ಅವಧಿಯಲ್ಲಿ ದೇವಸ್ಥಾನ ಪ್ರಸಾದ ಮಾರಾಟ ಮಾಡಿ 6.75ಕೋಟಿ ಆದಾಯ ಗಳಿಸಿತ್ತು. ಈ ಸಲ ಆದಾಯದ ಪ್ರಮಾಣ 3.28ಕೋಟಿ ಮಾತ್ರ. ದೇವಸ್ಥಾನದ ಇತಿಹಾಸದಲ್ಲಿ ಎಂದೂ ಪ್ರಸಾದಕ್ಕೆ ಕೊರತೆ ಉಂಟಾಗಿರಲಿಲ್ಲ.

(ಏಜನ್ಸೀಸ್)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X