»   » ರಾಜ್ಯಾದ್ಯಂತ ‘ಶಬ್ದವೇಧಿ’ ಮತ್ತೆ ತೆರೆಗೆ

ರಾಜ್ಯಾದ್ಯಂತ ‘ಶಬ್ದವೇಧಿ’ ಮತ್ತೆ ತೆರೆಗೆ

Posted By: Staff
Subscribe to Filmibeat Kannada

ಬೆಂಗಳೂರು : ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ, ಜನರಿದ್ದರೆ ನನ್ನ ಬೆನ್ನ ಹಿಂದೆ, ಹೋರಾಡಲು ನಾನೆಂದು ಮುಂದೆ.... ಎಂದು ಹಾಡಿದ ರಾಜ್‌ಕುಮಾರ್‌, 108 ದಿನಗಳ ಕಾಲ ವೀರಪ್ಪನ್‌ ಜತೆ ಸೆಣಸಾಡಬೇಕಾದ ಸ್ಥಿತಿ ಬರುತ್ತದೆಂದು ಯಾರೂ ಊಹಿಸಿರಲಿಲ್ಲ.

ಅಂತೂ ರಾಜ್‌ ಅಪಹರಣ ಪ್ರಕರಣ ಸುಖಾಂತವಾಯಿತು. ರಾಜ್‌ ಬಿಡುಗಡೆ ಆಗುತ್ತಿದ್ದಂತೆ, ಈ ಶುಕ್ರವಾರ ರಾಜ್‌ ಅಭಿನಯದ 'ಶಬ್ದವೇಧಿ" ಮತ್ತೆ ತೆರೆಕಂಡಿದೆ. ಅತಿ ಅಲ್ಪಾವಧಿಯಲ್ಲಿ ರಾಜ್ಯಾದ್ಯಂತ ಎರಡನೇ ಬಾರಿಗೆ ಬಿಡುಗಡೆಯಾದ ರಾಜ್‌ಕುಮಾರರ ಮೊದಲ ಚಿತ್ರ ಇದು. ರಾಜ್‌ಕುಮಾರ್‌ ಅಪಹರಣಕ್ಕೆ ಮುನ್ನ ಬಿಡುಗಡೆಯಾಗಿ ಭಾರಿ ಭರವಸೆ ಮೂಡಿಸಿದ್ದ ದೇಸಾಯರ ಚಿತ್ರ 'ಸ್ಪರ್ಶ" ರೀರಿಲೀಸ್‌ ಆದ ನಂತರ ನೂರು ದಿನ ಓಡಿಯೂ ಬಾಕ್ಸ್‌ ಆಫೀಸಲ್ಲಿ ಸೋಲನ್ನಪ್ಪಿತು.

ಆದರೆ, ಈಗಾಗಲೇ ಜನಮನ್ನಣೆ ಗಳಿಸಿರುವ 'ಶಬ್ದವೇಧಿ"ಗೆ ಆ ಸಮಸ್ಯೆ ಇಲ್ಲ. ರಾಜ್‌ಕುಮಾರ್‌ ಬಿಡುಗಡೆಯ ಸಂತಸವನ್ನು ಆನಂದದಿಂದ ಅನುಭವಿಸಲಿಚ್ಛಿಸುವ ರಾಜ್‌ ಅಭಿಮಾನಿಗಳಿಗೆ ಇದೊಂದು ಮಹತ್ವದ ಕೊಡುಗೆ. ಚಿತ್ರ 24ರ ನವೆಂಬರ್‌ನಿಂದ ಪುನಾರಂಭಗೊಂಡಿದೆ.

ಡಾ. ರಾಜ್‌ ಅರ್ಪಿಸುವ, ಶ್ರೀ ಭಾರ್ಗವಿ ಆರ್ಟ್‌ ಕಂಬೈನ್ಸ್‌ರವರ ಈ ಚಿತ್ರ ಬೆಂಗಳೂರಿನ ತ್ರಿಭುವನ್‌, ವೀರೇಶ್‌, ವೀರಭದ್ರೇಶ್ವರ, ವಿನಾಯಕ, ಮೈಸೂರಿನ ರತ್ನ, ಮಂಡ್ಯದ ಸಂಜಯ, ಕನಕಪುರದ ವಾಣಿ, ಮಾಲೂರಿನ ಬಾಲಾಜಿ, ಬೆಳ್ತಂಗಡಿಯ ಭಾರತ್‌, ಕಾಕಳದ ರಾಧಿಕಾ, ಶಿವಮೊಗ್ಗದ ವೀರಭದ್ರೇಶ್ವರ, ಚಿಕ್ಕಮಗಳೂರಿನ ಮಿಲನ್‌ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಮತ್ತೆ ತೆರೆಕಂಡಿದೆ.

ಸಿಹಿ ವಿತರಣೆ: ರಾಜ್‌ಕುಮಾರ್‌ ಅವರ ಬಿಡುಗಡೆಯ ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಮೈಸೂರು ರಸ್ತೆಯಲ್ಲಿರುವ ವಿನಾಯಕ ಚಿತ್ರಮಂದಿರದ ಸಿಬ್ಬಂದಿ 26ರ ಭಾನುವಾರ 4.30ರ ಪ್ರದರ್ಶನಕ್ಕೆ ಬರುವ ಎಲ್ಲ ಪ್ರೇಕ್ಷಕರಿಗೂ ಸಿಹಿ ಹಂಚುತ್ತಿದ್ದಾರೆ. ಅಂದು ಡಾ. ರಾಜ್‌ಕುಮಾರ್‌ ಅವರ ಬೃಹತ್‌ ಕಟೌಟ್‌ಗೆ ಭಾರಿ ತೂಕದ ಹಾಗೂ ಉದ್ದದ ಹೂವಿನ ಹಾರ ಹಾಕುವ

English summary
Rajkumars Shabdavedhi rereleased

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada