twitter
    For Quick Alerts
    ALLOW NOTIFICATIONS  
    For Daily Alerts

    ಕಲೆಕ್ಷನ್ ನಲ್ಲಿ 'ಕೆಜಿಎಫ್' ಎದುರು ಮಂಡಿಯೂರಿದ 'ಜೀರೋ'.!

    |

    Recommended Video

    KGF ಮುಂದೆ ಕಲೆಕ್ಷನ್ ನಲ್ಲಿ ಮಕಾಡೆ ಮಲಗಿದ ಜೀರೋ...! | FILMIBEAT KANNADA

    ಶಾರೂಖ್ ಖಾನ್ ಅಭಿನಯದ 'ಜೀರೋ' ಚಿತ್ರದ ಮೇಲೆ ಬಹಳ ದೊಡ್ಡ ನಿರೀಕ್ಷೆ ಇತ್ತು. ಕುಬ್ಜನ ಪಾತ್ರದಲ್ಲಿ ಶಾರೂಖ್ ಅವರನ್ನ ನೋಡಿ ಇಡೀ ಬಾಲಿವುಡ್ ಅಚ್ಚರಿಯಿಂದ ಕಾಯುತ್ತಿತ್ತು. ಆದ್ರೆ, ಸಿನಿಮಾ ನೋಡಿದ್ಮೇಲೆ ಜನರು ನಿರಾಸೆಯಾಗಿದ್ದಾರೆ.

    'ಜೀರೋ' ಸಿನಿಮಾ ಅಂದುಕೊಂಡಂತೆ ಬಂದಿಲ್ಲ, ಸಿನಿಮಾ ಬೋರ್ ಆಗುತ್ತೆ, ನೋಡಲು ಕಷ್ಟ ಎಂಬ ಅಭಿಪ್ರಾಯಗಳು ಹೊರಬಿದ್ದಿವೆ. ಚಿತ್ರದ ಆರಂಭ ದಿನವೇ ಜೀರೋಗೆ ಮಿಶ್ರಪ್ರತಿಕ್ರಿಯೆ ಬಂದಿದ್ದು ಸಹಜವಾಗಿ ಬಾಕ್ಸ್ ಆಫೀಸ್ ನಲ್ಲಿ ಭಾರಿ ಇಳಿಕೆ ಕಾಣುವಂತೆ ಆಗಿದೆ.

    ಕೆಜಿಎಫ್ ಹಿಂದಿ ಕಲೆಕ್ಷನ್ ಬಹಿರಂಗ: ಗಳಿಕೆಯ ಅಂಕಿ ಅಂಶ ಅಚ್ಚರಿಯಾಗಿದೆ.! ಕೆಜಿಎಫ್ ಹಿಂದಿ ಕಲೆಕ್ಷನ್ ಬಹಿರಂಗ: ಗಳಿಕೆಯ ಅಂಕಿ ಅಂಶ ಅಚ್ಚರಿಯಾಗಿದೆ.!

    ಹೌದು, ಮೊದಲ ಮೂರು ದಿನದ ಕಲೆಕ್ಷನ್ ನಲ್ಲಿ ಜೀರೋಗೆ ಹಿನ್ನಡೆಯಾಗಿದೆ. ಇನ್ನೊಂದು ಕಡೆ ಕನ್ನಡದ ಕೆಜಿಎಫ್ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದ್ದು, ಒಟ್ಟಾರೆ ಕಲೆಕ್ಷನ್ ನಲ್ಲಿ ಶಾರೂಖ್ ಸಿನಿಮಾವನ್ನ ಹಿಂದಿಕ್ಕುವತ್ತಾ ಹೆಜ್ಜೆಹಾಕಿದೆ. ಹಾಗಿದ್ರೆ, ಜೀರೋ ಕಲೆಕ್ಷನ್ ಎಷ್ಟು?

    ಜೀರೋ ಮೊದಲ ದಿನ ಗಳಿಸಿದ್ದೆಷ್ಟು?

    ಜೀರೋ ಮೊದಲ ದಿನ ಗಳಿಸಿದ್ದೆಷ್ಟು?

    ಶಾರೂಖ್ ಖಾನ್ ಸಿನಿಮಾ ಮೊದಲ ದಿನ 20.1 ಕೋಟಿ (ಭಾರತದಲ್ಲಿ) ಗಳಿಕೆ ಕಂಡಿತ್ತು ಎಂದು ಖ್ಯಾತ ವಿಶ್ಲೇಶಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದರು. ಈ ಕಡೆ ಕೆಜಿಎಫ್ ಚಿತ್ರ ಮೊದಲ ದಿನ ವರ್ಲ್ಡ್ ವೈಡ್ 24 ಕೋಟಿ ಕಲೆಕ್ಷನ್ ಮಾಡಿದೆ ಎಂಬ ಸುದ್ದಿಗಳು ವರದಿಯಾಗಿದೆ.

    ಕಲೆಕ್ಷನ್ ನಲ್ಲಿ ಇತಿಹಾಸ ನಿರ್ಮಿಸಿದ ಕೆಜಿಎಫ್: ಮೊದಲ ದಿನ 24 ಕೋಟಿ.! ಕಲೆಕ್ಷನ್ ನಲ್ಲಿ ಇತಿಹಾಸ ನಿರ್ಮಿಸಿದ ಕೆಜಿಎಫ್: ಮೊದಲ ದಿನ 24 ಕೋಟಿ.!

    ಎರಡನೇ ದಿನದ ಕಥೆ ಏನು?

    ಎರಡನೇ ದಿನದ ಕಥೆ ಏನು?

    ಎರಡನೇ ದಿನ ಜೀರೋ ಸಿನಿಮಾದ ಗಳಿಕೆಯಲ್ಲಿ ಕುಸಿತ ಕಂಡಿತ್ತು. ಮೊದಲ ದಿನ 21 ಕೋಟಿ ಬಾಚಿದ್ದ ಜೀರೋ ಎರಡನೇ ದಿನ ಕೇವಲ 18 ಕೋಟಿಗೆ ಸುಸ್ತಾಯಿತು. ಈ ಕಡೆ ಕೆಜಿಎಫ್ ಸಿನಿಮಾ ಎರಡನೇ ದಿನ ಐದು ಭಾಷೆಗಳಿಂದ ವರ್ಲ್ಡ್ ವೈಡ್ 37 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ.

    'ಕೆಜಿಎಫ್' ಎರಡನೇ ದಿನದ ಕಲೆಕ್ಷನ್ ಎಷ್ಟು? ಎಷ್ಟು ಕೋಟಿ ಬಂತು? 'ಕೆಜಿಎಫ್' ಎರಡನೇ ದಿನದ ಕಲೆಕ್ಷನ್ ಎಷ್ಟು? ಎಷ್ಟು ಕೋಟಿ ಬಂತು?

    ಮೂರನೇ ದಿನ 'ಜೀರೋ' ಕಲೆಕ್ಷನ್ ?

    ಮೂರನೇ ದಿನ 'ಜೀರೋ' ಕಲೆಕ್ಷನ್ ?

    ಮೊದಲ ಎರಡು ದಿನ ಸಾಧಾರಣ ಮೊತ್ತ ಗಳಿಸಿದ್ದ ಜೀರೋ ಸಿನಿಮಾ ಮೂರನೇ ದಿನವೂ ಅದೇ ಗಳಿಕೆಯನ್ನ ಮುಂದುವರಿಸಿತು. ಅಂದ್ರೆ, ಭಾನುವಾರ ಜೀರೋ ಗಳಿಸಿದ್ದು 20.7 ಕೋಟಿ. ಈ ಕೆಜಿಎಫ್ ಸಿನಿಮಾ ಮೂರನೇ ದಿನ ಎಷ್ಟು ಗಳಿಸಿದೆ ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ. ಆದ್ರೆ, ಮೊದಲ ಎರಡು ದಿನಕ್ಕಿಂತ ಹೆಚ್ಚು ಗಳಿಸಿರಬಹುದು ಎಂಬ ನಿರೀಕ್ಷೆ ಇದೆ.

    'ಕೆಜಿಎಫ್' ಪೂರ್ಣ ವಿಮರ್ಶೆ : ಪ್ರಪಂಚ ಗೆಲ್ಲಲು ಹೊರಟ 'ಕೆಜಿಎಫ್' ಕಂದನ ಕಥನ'ಕೆಜಿಎಫ್' ಪೂರ್ಣ ವಿಮರ್ಶೆ : ಪ್ರಪಂಚ ಗೆಲ್ಲಲು ಹೊರಟ 'ಕೆಜಿಎಫ್' ಕಂದನ ಕಥನ

    ಜೀರೋ ಒಟ್ಟು ಕಲೆಕ್ಷನ್?

    ಜೀರೋ ಒಟ್ಟು ಕಲೆಕ್ಷನ್?

    ಅಂದ್ಹಾಗೆ, ಮೊದಲ ವಾರಾಂತ್ಯಕ್ಕೆ ಶಾರೂಖ್ ಖಾನ್ ಸಿನಿಮಾ ನೂರು ಕೋಟಿ ಕ್ಲಬ್ ಸೇರುತ್ತೆ ಎಂಬ ನಿರೀಕ್ಷೆ ಹುಸಿಯಾಗಿದೆ. ಮೂರು ದಿನದಲ್ಲಿ ಜೀರೋ ಗಳಿಸಿದ್ದು ಕೇವಲ 59.07 ಕೋಟಿ ಮಾತ್ರ. ಸದ್ಯಕ್ಕೆ ಇದು ಭಾರತದ ಒಟ್ಟಾರೆ ಗಳಿಕೆ ಎನ್ನಲಾಗಿದೆ. ಇನ್ನುಳಿದಂತೆ ಹೊರದೇಶದಲ್ಲಿ ಸೇರಿ, ಒಟ್ಟಾರೆ ಕಲೆಕ್ಷನ್ ಎಷ್ಟು ಎಂಬುದು ಕುತೂಹಲ ಮೂಡಿಸಿದೆ. ಒಟ್ನಲ್ಲಿ, ಜೀರೋ ಚಿತ್ರಕ್ಕೆ ಸೋಲು ಎಂಬುದು ಒಪ್ಪಲೇಬೇಕು. ಈ ಕಡೆ ಕೆಜಿಎಫ್ ಯಶಸ್ಸು ಕಂಡಿದೆ ಎಂದು ನಂಬಲೇಬೇಕು.

    ಕೆಜಿಎಫ್ 'ಕನ್ನಡದ ಗೋಲ್ಡನ್ ಫಿಲಂ' ಎನ್ನುತ್ತಿದ್ದಾರೆ ಪ್ರೇಕ್ಷಕ ಪ್ರಭುಗಳು.!ಕೆಜಿಎಫ್ 'ಕನ್ನಡದ ಗೋಲ್ಡನ್ ಫಿಲಂ' ಎನ್ನುತ್ತಿದ್ದಾರೆ ಪ್ರೇಕ್ಷಕ ಪ್ರಭುಗಳು.!

    English summary
    Zero box office collection Day 3: Aanand L Rai directorial, starring Shah Rukh Khan, Anushka Sharma and Katrina Kaif, is struggling really hard to work its magic at the box office.
    Monday, December 24, 2018, 13:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X