ಬೆಳಗ್ಗೆ 6 ಗಂಟೆಗೆ ಪ್ರದರ್ಶನವಾಗಲಿದೆ ಶಾರುಖ್ ಖಾನ್ ಅವರ 'ಜವಾನ್'!: ಸೌತ್ ಟ್ರೆಂಡ್ ಪಾಲಿಸುತ್ತಿದ್ದಾರಾ ಎಸ್‌ಆರ್‌ಕೆ?

ಪಠಾಣ್‌ನ ಅದ್ಭುತ ಯಶಸ್ಸಿನಲ್ಲಿರುವ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ ಜವಾನ್ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಪಠಾಣ್ ಕೊಟ್ಟ ಭರ್ಜರಿ ಯಶಸ್ಸು 'ಜವಾನ್' ಸಿನಿಮಾದ ಸುತ್ತ ನಿರೀಕ್ಷೆಗಳನ್ನು ಹೆಚ್ಚಿಸಿವೆ. ಇದೇ ಕಾರಣಕ್ಕೆ ಚಿತ್ರತಂಡ ಭಾರಿ ಪ್ರಚಾರ ಮಾಡುತ್ತಿದೆ.

ಈಗಾಗಲೇ ಚಿತ್ರದ ಮುಂಗಡ ಬುಕ್ಕಿಂಗ್ ಅಮೆರಿಕಾದಲ್ಲಿ ಶುರುವಾಗಿದೆ. ಭಾರತದಲ್ಲಿ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಇನ್ನೂ ಪ್ರಾರಂಭವಾಗಿಲ್ಲ. ಚಿತ್ರವು ಸೆಪ್ಟೆಂಬರ್ 7 ರಂದು ಥಿಯೇಟರ್‌ಗಳಿಗೆ ಲಗ್ಗೆ ಇಡಲಿದೆ. ಈಗ, 'ಜವಾನ್' ಚಿತ್ರದ ಕ್ರೇಜ್ ಹೆಚ್ಚಾಗಿದ್ದು, ಇದರ ನಡುವೆ ಚಿತ್ರದ ನಿರ್ಮಾಪಕರು ಮತ್ತೊಂದು ಖುಷಿಯ ವಿಷಯ ಹಂಚಿಕೊಂಡಿದ್ದಾರೆ.

Shah Rukh Khans Jawan become the first Hindi movie to get a 6 am show at Mumbai theatre

ಬೆಳಗ್ಗೆ 6 ಗಂಟೆಗೆ ಜವಾನ್ ಪ್ರದರ್ಶನ!

ಅಟ್ಲಿ ನಿರ್ದೇಶನದ ಈ ವರ್ಷದ ಶಾರುಖ್ ಖಾನ್ ಅಭಿನಯದ ಸಿನಿಮಾವನ್ನು ಮುಂಬೈನಲ್ಲಿ ಬೆಳಗ್ಗೆ 6 ಗಂಟೆಗೆ ಪ್ರದರ್ಶಿಸಲು ನಿರ್ಮಾಪಕರು ಯೋಚಿಸುತ್ತಿದ್ದಾರೆ. ಮುಂಬೈನ ಐಕಾನಿಕ್ ಥಿಯೇಟರ್ ಗೈಟಿ ಗ್ಯಾಲಕ್ಸಿಯಲ್ಲಿ ಬೆಳಗ್ಗೆ 6 ಗಂಟೆಗೆ ಪ್ರದರ್ಶನ ನಟೆಯಲಿದೆ. ಇದು ನಡೆದರೆ ಇಷ್ಟು ಬೇಗ ಸಿನಿಮಾ ಮಂದಿರಗಳಲ್ಲಿ ತೆರೆಕಂಡ ಮೊದಲ ಹಿಂದಿ ಚಲನಚಿತ್ರ ಜವಾನ್ ಆಗಲಿದೆ. ಎಸ್‌ಆರ್‌ಕೆ ಅವರ ಅಭಿಮಾನಿಗಳ ಕ್ಲಬ್ ಹಂಚಿಕೊಂಡ ಟ್ವೀಟ್ ಈ ಮಾಹಿತಿ ನೀಡಿದೆ.

"51 ವರ್ಷಗಳ ಐಕಾನಿಕ್ ಗೈಟಿ ಥಿಯೇಟರ್‌ನಲ್ಲಿ ಪಠಾಣ್ ಬಳಗ್ಗೆ 9 ಗಂಟೆಯ ಪ್ರದರ್ಶನ ನೀಡಿದ ಮೊದಲ ಚಲನಚಿತ್ರವಾಗಿ ನಾವು ಇತಿಹಾಸವನ್ನು ರಚಿಸಿದ್ದೇವೆ. ಈ 'ಜವಾನ್'‌ನೊಂದಿಗೆ ಇತಿಹಾಸವನ್ನು ಪುನಃ ಬರೆಯುತ್ತೇವೆ. ಏಕೆಂದರೆ ಐಕಾನಿಕ್ ಗೈಟಿ ಗ್ಯಾಲಕ್ಸಿಯಲ್ಲಿ ಜವಾನ್ ಬೆಳಗ್ಗೆ 6 ಗಂಟೆಗೆ ಪ್ರದರ್ಶನವಾಗಲಿದೆ" ಎಂದು ಟ್ವೀಟ್ ಮಾಡಿದೆ.

Shah Rukh Khans Jawan become the first Hindi movie to get a 6 am show at Mumbai theatre

ಸೌತ್ ಟ್ರೆಂಡ್ ಫಾಲೋ ಮಾಡ್ತಿದ್ದಾರಾ ಎಸ್‌ಆರ್‌ಕೆ?

ಇನ್ನು, ಎಲ್ಲರಿಗೂ ಗೊತ್ತಿರುವಂತೆ ಮಾರ್ನಿಂಗ್ ಶೋಗಳನ್ನು, ಅದರಲ್ಲೂ ಮುಂಜಾನೆಯ ವೇಳೆಯೇ ಶೋಗಳು ದಕ್ಷಿಣ ಭಾರತದಲ್ಲಿ ಸಾಮಾನ್ಯ. ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರಮುಖ ನಟರ ಸಿನಿಮಾಗಳಿಗೆ ಮುಂಜಾನೆ ಶೋಗಳು ಇರುತ್ತವೆ. ತಮಿಳುನಾಡಿನಲ್ಲಿ ಈ ವರ್ಷ ಕೆಲವು ಅವಘಡಗಳಿಂದಾಗಿ ಬೆಳಗಿನ ಜಾವದ ಶೋಗಳನ್ನು ರದ್ದುಗೊಳಿಸಲಾಗಿದೆ.

ಆದರೆ, ತೆಲುಗು ಮಾತನಾಡುವ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಈ ಟ್ರೆಂಡ್ ಇನ್ನೂ ಮುಂದುವರೆದಿದೆ. ಈಗ, 'ಜವಾನ್' ನಿರ್ಮಾಪಕರು ಕೂಡ ಬಾಲಿವುಡ್‌ಗೆ ಈ ಟ್ರೆಂಡ್ ತೆಗೆದುಕೊಂಡು ಹೋಗುತ್ತಿದ್ದು, ಶಾರುಖ್ ಖಾನ್ ಕೂಡ ಸೌತ್ ಟ್ರೆಂಡ್ ಫಾಲೋ ಮಾಡ್ತಿದ್ದಾರಾ ಎಂಬ ಗುಸುಗುಸು ಕೇಳಿಬರುತ್ತಿದೆ.

Shah Rukh Khans Jawan become the first Hindi movie to get a 6 am show at Mumbai theatre

'ಜವಾನ್' ಸಿನಿಮಾ

'ಜವಾನ್' ಚಿತ್ರವನ್ನು ತಮಿಳು ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ನಯನತಾರಾ ಮತ್ತು ವಿಜಯ್ ಸೇತುಪತಿ, ಪ್ರಿಯಾಮಣಿ ಮತ್ತು ಸಾನ್ಯಾ ಮಲೋತ್ರಾ, ರಿಧಿ ಡೋಗ್ರಾ ಇದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರ ವಿಶೇಷ ಪಾತ್ರವೂ ಇರಲಿದೆ.

ಚಿತ್ರವು ಜೂನ್ 2, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಸಿನಿಮಾ ತಯಾರಕರು ಸೆಪ್ಟೆಂಬರ್ 7 ಕ್ಕೆ ಬಿಡುಗಡೆ ಮುಂದೂಡಿದ್ದರು. ಆಗಸ್ಟ್ 31, 2023 ರಂದು ಶಾರುಖ್ ಖಾನ್ ದುಬೈನಲ್ಲಿ ಅಧಿಕೃತ ಟ್ರೇಲರ್ ಅನ್ನು ಬಿಡುಗಡೆ ಮಾಡಲಿದ್ದಾರೆ.

More from Filmibeat

English summary
Shah Rukh Khan's Jawan become the first Hindi movie to get a 6 am show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X