ಯಶ್ ಗೆ 'ಗುಡ್ ಲಕ್' ಹೇಳಿದ ಶಾರೂಖ್ ಕೆಜಿಎಫ್ ಬಗ್ಗೆ ಏನಂದ್ರು?
Recommended Video

'ಕೆಜಿಎಫ್' ಸಿನಿಮಾ ಹಿಂದಿಯಲ್ಲಿ ಬಿಡುಗಡೆಯಾಗ್ತಿರುವುದು ಬಾಲಿವುಡ್ ನಲ್ಲಿ ತೀರಾ ಕುತೂಹಲ ಮೂಡಿಸಿದೆ. ಕೆಜಿಎಫ್ ಬಿಡುಗಡೆ ದಿನವೇ ಶಾರೂಖ್ ಖಾನ್ ಅಭಿನಯದ 'ಜೀರೋ' ಸಿನಿಮಾ ಬರ್ತಿರುವುದು ಬಾಲಿವುಡ್ ಮಂದಿಯ ಕೆಂಗಣ್ಣಿಗೆ ಗುರಿಯಾಗಿದೆ.
ಈ ಮಧ್ಯೆ ಶಾರೂಖ್ ಸಿನಿಮಾದ ಎದುರು ಕನ್ನಡ ಸಿನಿಮಾ ಬರ್ತಿದೆ ಎಂದು ಕಾಲೆಳೆದವರು ಇದ್ದಾರೆ. ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಯಶ್, ಬಾಲಿವುಡ್ ಸಂದರ್ಶನಗಳಲ್ಲಿ ಶಾರೂಖ್ ಬಗ್ಗೆ ಮೆಚ್ಚುಗೆ ಮಾತುಗಳನ್ನೇ ಹೇಳುತ್ತಿದ್ದಾರೆ.
''ನಾನು ಕೂಡ ಶಾರೂಖ್ ಖಾನ್ ಅವರ ಫ್ಯಾನ್, ಅವರ ಸಿನಿಮಾಗಳನ್ನ ನೋಡಿ ಸ್ಫೂರ್ತಿಯಾಗಿದ್ದೇನೆ. ನಮಗೆ ಅವರು ಸ್ಫೂರ್ತಿ'' ಎಂದು ಹೆಮ್ಮೆಯಿಂದ ಹೇಳ್ತಿದ್ದಾರೆ. ಆದ್ರೆ, ಕೆಜಿಎಫ್ ಬಗ್ಗೆ ಎಲ್ಲಿಯೂ ಕಿಂಗ್ ಖಾನ್ ಮಾತನಾಡಲೇ ಇಲ್ಲ. ಇದೀಗ, ಕನ್ನಡ ಸುದ್ದಿಪತ್ರಿಕೆಯೊಂದಕ್ಕೆ ಶಾರೂಖ್ ಸಂದರ್ಶನ ನೀಡಿದ್ದು, ಕೆಜಿಎಫ್ ಚಿತ್ರಕ್ಕೆ ಗುಡ್ ಲಕ್ ಹೇಳಿದ್ದಾರೆ. ಮುಂದೆ ಓದಿ.....

'ಕೆಜಿಎಫ್' ಬಗ್ಗೆ ಕೇಳಿ ತಿಳಿದುಕೊಂಡಿದ್ದಾರೆ
ಕೆಜಿಎಫ್ ಚಿತ್ರದ ಬಗ್ಗೆ ಶಾರೂಖ್ ಖಾನ್ ಮಾತನಾಡಿದ್ದು, ಟ್ರೈಲರ್ ನೋಡಿ ಮೆಚ್ಚಿಕೊಂಡಿದ್ದಾರೆ. ''ಕೆಜಿಎಫ್ ಟ್ರೈಲರ್ ನೋಡಿದ್ದೇನೆ, ತುಂಬಾ ಚೆನ್ನಾಗಿದೆ. ಬಾಕ್ಸ್ ಆಫೀಸ್ ನಲ್ಲು ಯಶಸ್ಸು ಕಾಣಲಿದೆ ಎಂದು ನನಗೆ ಅನಿಸುತ್ತಿದೆ. ಈ ಚಿತ್ರದ ಬಗ್ಗೆ ನಾನು ಕೆಲವರ ಬಳಿ ಕೇಳಿ ತಿಳಿದುಕೊಂಡೆ. ಮೇಕಿಂಗ್ ಗೆ ಮೂರು ವರ್ಷ ಶ್ರಮ ಹಾಕಿದ್ದಾರೆ ಎಂಬುದು ಗೊತ್ತಾಯಿತು. ಹೀರೋ ಯಶ್ ಮತ್ತು ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳುತ್ತೇನೆ'' ಎಂದು ಶಾರೂಖ್ ಖಾನ್ ತಿಳಿಸಿದ್ದಾರೆ.

ಯಶ್ ಭೇಟಿ ಮಾಡುತ್ತೇನೆ
ನಟ ಯಶ್ ಹಾಗೂ ಶಾರೂಖ್ ಖಾನ್ ಮುಖಾಮುಖಿಯಾಗಿಲ್ಲ. ಸ್ವತಃ ಯಶ್ ಅವರೇ ಹೇಳಿರುವ ಪ್ರಕಾರ, ಅವರು ಶಾರೂಖ್ ಗೆ ಫ್ಯಾನ್. ಈಗ ಶಾರೂಖ್ ಕೂಡ ಯಶ್ ಅವರನ್ನ ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮುಂದಿನ ಸಲ ಮುಂಬೈಗೆ ಬಂದಾಗ ಯಶ್ ಅವರನ್ನ ಭೇಟಿ ಮಾಡುತ್ತೇನೆ'' ಎಂದು ಕಿಂಗ್ ಖಾನ್ ಹೇಳಿದ್ದಾರೆ.

ಚಿತ್ರಗಳಲ್ಲಿ ಭೇದ ಬೇಡ
ದಕ್ಷಿಣ ಭಾರತದ ಸಿನಿಮಾ ಹಾಗೂ ಉತ್ತರ ಸಿನಿಮಾ ಎಂದು ಭೇದ ಮಾಡುವುದು ಬೇಡ. ಜೀರೋ ರೀತಿ ಕೆಜಿಎಫ್ ಕೂಡ ಭಾರತೀಯ ಚಿತ್ರ. ಪಂಷಭಾಷೆಯಲ್ಲಿ ಕೆಜಿಎಫ್ ಡಬ್ ಆಗಿರುವುದು ಉತ್ತಮ ಬೆಳವಣಿಗೆ'' ಎಂದು ಶಾರೂಖ್ ಶ್ಲಾಘಿಸಿದ್ದಾರೆ.

'ಜೀರೋ' ನೋಡ್ತಾರೆ ಯಶ್.!
ಇನ್ನು ಈಗಾಗಲೇ ಬಾಲಿವುಡ್ ಸಂದರ್ಶನಗಳಲ್ಲಿ ಹೇಳಿರುವ ಪ್ರಕಾರ, ನಟ ಯಶ್ ಜೀರೋ ಸಿನಿಮಾವನ್ನ ನೋಡಲಿದ್ದಾರೆ. ಮೊದಲಿನಿಂದಲೂ ಹಿಂದಿ ಚಿತ್ರಗಳನ್ನ ನೋಡುವ ಯಶ್, ಶಾರೂಖ್ ಖಾನ್ ಬಗ್ಗೆ ವಿಶೇಷವಾದ ಅಭಿಮಾನ ಹೊಂದಿದ್ದಾರೆ. ಕೆಜಿಎಫ್ ಬಿಡುಗಡೆಯಾದ್ಮೇಲೆ ಶಾರೂಖ್ ಕೂಡ ಕೆಜಿಎಫ್ ನೋಡಬಹುದು.


Click it and Unblock the Notifications











