For Quick Alerts
  ALLOW NOTIFICATIONS  
  For Daily Alerts

  ಶಕೀಲಾ ಅಭಿನಯದ 250ನೇ ಚಿತ್ರಕ್ಕೆ ಸೆನ್ಸಾರ್ ಮಾಡ್ತಿಲ್ಲ.! ಕಾರಣ.?

  By Bharath Kumar
  |

  ಬಹುಭಾಷಾ ನಟಿ ಶಕೀಲಾ ಅಭಿನಯದ 250ನೇ ಸಿನಿಮಾ ಶೀಲವತಿ ಬಿಡುಗಡೆಗೆ ಸಜ್ಗಾಗಿದೆ. ಆದ್ರೆ, ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ವಿಘ್ನ ಎದುರುರಾಗಿದೆ. ಶೂಟಿಂಗ್ ಮುಗಿಸಿ ಸೆನ್ಸಾರ್ ಬಾಗಿಲಿಗೆ ಹೋಗಿರುವ ಈ ಚಿತ್ರಕ್ಕೆ ಸೆನ್ಸಾರ್ ಮಾಡುತ್ತಿಲ್ಲ. ಯಾಕಂದ್ರೆ, ಚಿತ್ರದ ಟೈಟಲ್ ಬದಲಾಯಿಸಬೇಕಂತೆ.

  ಈ ಬಗ್ಗೆ ಅಸಮಾಧಾನಗೊಂಡಿರುವ ನಟಿ ಶಕೀಲಾ ಟ್ವಿಟ್ಟರ್ ನಲ್ಲಿ ಸೆನ್ಸಾರ್ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ. ''ನನ್ನ ಸಿನಿಮಾ ಈ ತಿಂಗಳು ಸೆನ್ಸಾರ್ ಆಗಿ ರಿಲೀಸ್ ಮಾಡಬೇಕೆಂದುಕೊಂಡಿದ್ದೇವೆ. ಆದ್ರೆ, ಸೆನ್ಸಾರ್ ಮಂಡಳಿಯವರು ಸಿನಿಮಾವನ್ನೇ ನೋಡದಯೇ ಈ ಚಿತ್ರಕ್ಕೆ 'ಶೀಲವತಿ' ಟೈಟಲ್ ನೀಡುವುದಿಲ್ಲ ಎನ್ನುತ್ತಿದ್ದಾರೆ'' ಎಂದು ಆಕ್ರೋಶ ಹೊರಹಾಕಿದ್ದಾರೆ.

  ಶಕೀಲಾ ಬಯೋಪಿಕ್ ನಲ್ಲಿ ನಟಿಸಲು ಒಪ್ಪಿಕೊಂಡ 'ಸ್ಟಾರ್' ನಟಿ.!ಶಕೀಲಾ ಬಯೋಪಿಕ್ ನಲ್ಲಿ ನಟಿಸಲು ಒಪ್ಪಿಕೊಂಡ 'ಸ್ಟಾರ್' ನಟಿ.!

  ''ಕೀಲಾ ಚಿತ್ರಕ್ಕೆ ಈ ಟೈಟಲ್ ಕೊಡುವುದಿಲ್ಲ ಎನ್ನುವುದು ಯಾಕೆ.? ಸಿನಿಮಾ ನೋಡಲಿ, ಆಮೇಲೆ ಆ ಟೈಟಲ್ ಬಗ್ಗೆ ಅವರಿಗೆ ಗೊತ್ತಾಗುತ್ತೆ. ಈಗಾಗಲೇ 250ನೇ ಸಿನಿಮಾ ಅಂತ ಪ್ರಚಾರ ಮಾಡಾಗಿದೆ. ಹೀಗೆ ಮಾಡುವುದು ಸರಿಯಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ಹೀಗಾಗಿ, ಸೆನ್ಸಾರ್ ಮಂಡಳಿಯವರು ಮತ್ತೊಮ್ಮೆ ಈ ಬಗ್ಗೆ ಮರುಪರಿಶೀಲನೆ ಮಾಡಬೇಕಾಗಿ ಮನವಿ ಮಾಡಿಕೊಳ್ಳುತ್ತುದ್ದೇನೆ ಎಂದು ನಟಿ ಶಕೀಲಾ ಕೋರಿದ್ದಾರೆ.

  ಶಕೀಲಾ ಜೀವನಚರಿತ್ರೆ ಬಾಲಿವುಡ್ ಬೆಳ್ಳಿ ಪರದೆ ಮೇಲೆ.! ಶಕೀಲಾ ಜೀವನಚರಿತ್ರೆ ಬಾಲಿವುಡ್ ಬೆಳ್ಳಿ ಪರದೆ ಮೇಲೆ.!

  ಅಂದ್ಹಾಗೆ, ಸುಮಾರು 10 ವರ್ಷಗಳ ನಂತರ ಶಕೀಲಾ ಅಭಿನಯಿಸುತ್ತಿರುವ ಚಿತ್ರ ಇದಾಗಿದ್ದು, ತೆಲುಗು, ತಮಿಳಿನಲ್ಲಿ ಬಿಡುಗಡೆಯಾಗಲಿದೆ. ಸಾಯಿ ರಾಮ್ ದಾಸರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

  English summary
  Actress Shakeela 250th film titled Sheelavathi, has allegedly been refused certification by Central Board of Film Certification (CBFC). Reason? It’s title, ‘Sheelavathi’.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X