ಆರು ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಬಂದ ಶಕೀಲಾ

80-90 ರ ದಶಕದ ಅತಿ ದೊಡ್ಡ ನೀಲಿ ಚಿತ್ರ ತಾರೆ ಶಕೀಲಾ ಈಗ ಸಿನಿಮಾಗಳಲ್ಲಿ ನಟನೆ, ಅರೆ ಗ್ಲಾಮರಸ್ ಸಿನಿಮಾಗಳ ನಿರ್ಮಾಣಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ.

Recommended Video

ಶಕೀಲಾ ಬಾಳಲ್ಲಿ 15 ಜನ ಪುರುಷರು ಬಂದು ಹೋದರು,ಆದ್ರೆ... | Filmibeat Kannada

ನೀಲಿ ಚಿತ್ರಗಳ ನಟನೆಯಿಂದ ದೂರ ಉಳಿದಿರುವ ನಟಿ ಶಕೀಲಾ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ ಬೇಡಿಕೆಯ ಹಾಸ್ಯ ನಟಿಯಾಗಿ ಗುರುತಿಸಿಕೊಂಡಿರುವ ಶಕೀಲಾ, ಕನ್ನಡದ ಸಿನಿಮಾದಲ್ಲಿಯೂ ನಟಿಸಿದ್ದಾರೆ.

ಆರು ವರ್ಷದ ಹಿಂದೆ 'ಲವ್ ಯೂ ಆಲಿಯಾ' ಸಿನಿಮಾದಲ್ಲಿ ನಟಿಸಿದ್ದ ಶಕೀಲಾ ಆ ನಂತರ ಕನ್ನಡದ ಇನ್ನಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಇದೀಗ ಮತ್ತೆ ಕನ್ನಡಕ್ಕೆ ವಾಪಸ್ಸಾಗಿರುವ ಶಕೀಲಾ, 'ಡವ್ ಮಾಸ್ಟರ್' ಹೆಸರಿನ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 2015 ರಲ್ಲಿ ತೆರೆ ಕಂಡಿದ್ದ 'ಲವ್ ಯು ಆಲಿಯಾ' ಸಿನಿಮಾದ ಬಳಿಕ ಶಕೀಲ ಇನ್ನಾವ ಕನ್ನಡ ಸಿನಿಮಾದಲ್ಲಿಯೂ ನಟಿಸಿರಲಿಲ್ಲ.

Shakeela Acting In A Kannada Movie After Six Years

ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟಿ ಶಕೀಲಾ, ''ಬಹಳ ವರ್ಷಗಳ ಬಳಿಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದೇನೆ. ಈ ಬಗ್ಗೆ ಖುಷಿ ಇದೆ. ಈ ಸಿನಿಮಾದಲ್ಲಿ ನನ್ನ ಪಾತ್ರ ಬಹಳ ಭಿನ್ನವಾಗಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು, ಶೀಘ್ರವಾಗಿ ಬಿಡುಗಡೆ ಆಗಲಿದೆ'' ಎಂದರು.

ನಾಯಿ ಒಂದಕ್ಕೆ ಮದುವೆ ಮಾಡಿಸುವ ಕತೆಯನ್ನು ಸಿನಿಮಾ ಹೊಂದಿದೆ. ಸಿನಿಮಾದ ಕತೆಯ ಬಗ್ಗೆ ಮಾತನಾಡಿದ ನಟ ನಾಣಿ, ''ಸಿನಿಮಾದ ನಾಯಕ ಕತೆ. ಎರಡನೇ ನಾಯಕ ನಾಯಿ ರಾಖಿ. ಸಿನಿಮಾದಲ್ಲಿ ನಾನು ನಾಯಿಯನ್ನು ಸಾಕಿರುತ್ತೇನೆ. ನಾಯಿ ಬಗ್ಗೆ ನನಗೆ ಅಪಾರ ಪ್ರೀತಿ. ಆದರೆ ಆ ನಾಯಿಯಿಂದಲೇ ನನಗೆ ಕೇಡಾಗುವ ಸನ್ನಿವೇಶ ಬರುತ್ತದೆ ಆಗ ನಾನು ಏನೇನು ಮಾಡುತ್ತೇನೆ. ಅದಕ್ಕೆ ನಾಯಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಕತೆ'' ಎಂದು ಕತೆಯ ಎಳೆ ಬಿಟ್ಟುಕೊಟ್ಟರು ನಾಣಿ.

Shakeela Acting In A Kannada Movie After Six Years

'ಟಗರು', 'ಸಲಗ' ಖ್ಯಾತಿಯ ಕಾಕ್ರೂಚ್ ಸುಧಿ ಅವರು ಈ ಸಿನಿಮಾದಲ್ಲಿ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಸುಧಿ, ''ನನಗೆ ಡ್ಯಾನ್ಸ್ ಎಲ್ಲ ಬರುವುದಿಲ್ಲ. ಆದರೆ ನಿರ್ದೇಶಕರು ನಾನು ಡ್ಯಾನ್ಸ್ ಮಾಡಲೇ ಬೇಕು ಎಂದು ಹೇಳಿದ್ದಾರೆ. ಹಾಗಾಗಿ ನಾನು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ನಿರ್ದೇಶಕ ಆರ್ಯ ನನ್ನ ಹಳೆಯ ಗೆಳೆಯ ಹಾಗಾಗಿ ಆತನ ಸಿನಿಮಾದಲ್ಲಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದೇನೆ'' ಎಂದರು.

ಕಳೆದ ಹತ್ತು ವರ್ಷದಿಂದ ಚಿತ್ರರಂಗದಲ್ಲಿ ಹಲವು ವಿಭಾಗಗಳಲ್ಲಿ ಕೆಲಸ ಮಾಡಿರುವ ಆರ್ಯ 'ಡವ್ ಮಾಸ್ಟರ್' ಸಿನಿಮಾದ ಮೂಲಕ ಇದೇ ಮೊದಲ ಬಾರಿಗೆ ನಿರ್ದೇಶಕನ ಟೋಪಿ ತೊಡುತ್ತಿದ್ದಾರೆ. ಸಿನಿಮಾದಲ್ಲಿ ತಬಲಾ ನಾಣಿ, ಸುಂದರ್ ವೀಣಾ, ನವೀನ್ ಪಡೀಲ್ ಇನ್ನೂ ಕೆಲವರು ನಟಿಸುತ್ತಿದ್ದು, ಇದೊಂದು ಹಾಸ್ಯ ಲೇಪಿತ ಸಾಮಾಜಿಕ ಸಂದೇಶವುಳ್ಳ ಸಿನಿಮಾ ಆಗಿರಲಿದೆ.

ಸಿನಿಮಾಕ್ಕೆ ರೋಷನ್ ಪಾಷಾ ಬಂಡವಾಳ ಹೂಡಿದ್ದು, ಶಕೀಲ್ ಅಹ್ಮದ್ ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ಮಾಡಿರುವುದು ಕಿರಣ್.

More from Filmibeat

English summary
Shakeela acting in a Kannada movie after six years. She is a part of new movie 'Dove Master'. Movie directed by Arya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X