twitter
    For Quick Alerts
    ALLOW NOTIFICATIONS  
    For Daily Alerts

    ಶಕೀಲಾ ಆತ್ಮಕಥೆಯ ಕೆಲವು ಕಣ್ಣೀರ ಪುಟಗಳು

    By ಉದಯರವಿ
    |
    <ul id="pagination-digg"><li class="next"><a href="/news/audience-misunderstood-shakeela-sleeping-scenes-081869.html">Next »</a></li></ul>

    ತೊಂಬತ್ತರ ದಶಕದಲ್ಲಿ ತಮ್ಮ ಸೊಂಟದ ಸುತ್ತಳತೆಯಿಂದಲೇ ಪಡ್ಡೆಗಳನ್ನು ಹಳ್ಳಕ್ಕೆ ಕೆಡವಿದ ಹಾಟ್ ಬಾಂಬ್ ಶಕೀಲಾ ಆತ್ಮಕಥೆ ಈಗ ಮಲಯಾಳಂನಲ್ಲಿ ಬಿಸಿಬಿಸಿ ಪಪ್ಪಡಂ ತರಹ ಸೇಲ್ ಆಗುತ್ತಿದೆ. ತಾನು ಆತ್ಮಕಥೆ ಬರೆಯುತ್ತೇನೆ, ನಡೆದಂತಹ ಕಹಿ ಘಟನೆಗಳಿಗೆ ಅಕ್ಷರ ರೂಪ ನೀಡುತ್ತೇನೆ ಎಂದಾಗ ಚಿತ್ರೋದ್ಯಮದ ಕೆಲವರು ಹಾವು ತುಳಿದಂತಾದರು. ತನ್ನ ಕಥೆ ಎಲ್ಲಿ ಬಯಲಾಗುತ್ತದೋ ಎಂದು ಒಳಗೊಳಗೇ ಒದ್ದಾಡಿದರು.

    ಅಂದುಕೊಂಡಂತೆ ಶಕೀಲಾ ಆತ್ಮಕಥೆ (Athmakadha) ಬಿಡುಗಡೆಯಾಗಿದೆ. ಈ 'ಕಲಾ'ಕೃತಿಯಲ್ಲಿ ಶಕೀಲಾ ತನಗೆ ಎದುರಾದ ಕಹಿ ಘಟನೆಗಳಿಗೆ ಹೆಚ್ಚಿನ ಪುಟಗಳನ್ನು ಮೀಸಲಿಟ್ಟಿದ್ದಾರೆ. ಒಂದು ಕಾಲದಲ್ಲಿ ಹೀರೋಯಿನ್ ಗಳಿಗಿಂತಲೂ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದವರು ಶಕೀಲಾ.

    Shakeela Athmakadha narrates various anecdotes of her life

    ಆ ರೀತಿಯ ಶಕೀಲಾ ಗತಕಾಲ ಗಮನಿಸಿದಾಗ ಅವರ ಹಾದಿ ಹೂವಿನ ಹಾದಿಯೇನು ಆಗಿರಲಿಲ್ಲ. ಅವರ ಬಾಳಿನಲ್ಲಿ ಎಲ್ಲವೂ ವಿಷಾದಮಯ ಸಂಗತಿಗಳೇ. ಚಿಕ್ಕಂದಿನಲ್ಲಿ ಸೂಳ್ಳೂರುಪೇಟ ಬಳಿಯ ಕೋಟೆಯಲ್ಲಿ ಬೆಳೆದ ಶಕೀಲಾ ಮಲಯಾಳಂ ಚಿತ್ರರಂಗಕ್ಕೆ ಅಡಿಯಿಟ್ಟ ಹಿಂದೆ ಸಾಕಷ್ಟು ಚಕಿತಗೊಳಿಸಿ ಹಾಗೆಯೇ ನೋವುಂಟು ಮಾಡುವ ಸಂಗತಿಗಳಿವೆ.

    ಕೋಟ್ಯಾಂಟರ ಪುರುಷರ ಕನಸಿನರಾಣಿಯಾಗಿದ್ದ ಶಕೀಲಾ ತನ್ನ ಜೀವನದಲ್ಲಿ ಎಂದಿಗೂ ಸುಖ ಅನುಭವಿಸಲೇ ಇಲ್ಲ ಎಂದಿದ್ದಾರೆ. "ನನ್ನಲ್ಲಿ ಅಪರಾಧಿ ಮನೋಭಾವವಿಲ್ಲ...ಆದರೆ ನೋವು ಮಾತ್ರ ದಂಡಿಯಾಗಿದೆ" ಎಂಬ ಅಡಿಬರಹದೊಂದಿಗೆ ಮಲಯಾಳಂನಲ್ಲಿ ಬಿಡುಗಡೆಯಾಗಿರುವ ಈ ಆತ್ಮಕಥೆ ಈಗ ಅಲ್ಲಿ ಸಂಚಲನ ಮೂಡಿಸುತ್ತಿದೆ.

    ಈಗ ಶಕೀಲಾ ಪ್ರಾಯ ನಲವತ್ತರ ಹರಯ. ಈ ವಯಸ್ಸಲ್ಲಿ ಅವರಿಗೆ ಪಡ್ಡೆಗಳನ್ನು ಕೆರಳಿಸುವ ವಯಸ್ಸೂ ಇಲ್ಲ, ಉತ್ಸಾಹವೂ ಇದ್ದಂಗಿಲ್ಲ. ಸೊಂಟ ಏಳು ಸುತ್ತಿನ ಕೋಟೆಯಂತಾಗಿದೆ. ಆದರೆ ಮನೆಮಂದಿಯಲ್ಲಾ ನೋಡುವಂತಹ ಒಂದು ಉತ್ತಮ ಚಿತ್ರವನ್ನಂತೂ ಖಂಡಿತ ನೀಡುತ್ತೇನೆ ಎಂಬ ವಿಶ್ವಾಸದಲ್ಲಿ ಅವರಿದ್ದಾರೆ.

    ಶಕೀಲಾ ಆತ್ಮಕಥೆಯ ಕೆಲವು ಪುಟಗಳು ನಮ್ಮ ಒನ್ಇಂಡಿಯಾ ಓದುಗರಿಗಾಗಿ. ಏಕೆಂದರೆ ಶಕೀಲಾ ಇತ್ತೀಚೆಗೆ ಕನ್ನಡದಲ್ಲೂ ಒಳ್ಳೆಯ ಪಾತ್ರಗಳನ್ನು ಪೋಷಿಸುತ್ತಿದ್ದಾರೆ. ಸದ್ಯಕ್ಕೆ 'ಪಾತರಗಿತ್ತಿ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಓವರ್ ಟು ಶಕೀಲಾ...

    <ul id="pagination-digg"><li class="next"><a href="/news/audience-misunderstood-shakeela-sleeping-scenes-081869.html">Next »</a></li></ul>

    English summary
    Shakeela mostly acted in film industries of Malayalam, Tamil, Telugu, Punjabi, and Kannada languages. She had acted more than 110 movies, mostly in B grade movies. This autobiography (Shakeela Athmakadha) is supposed to include all her acquaintances with notable film personalities, politicians and childhood friends. She explains how she entered the film industry, her relationship with Silk Smitha and much else. She also narrates various anecdotes from her life.
    Thursday, February 20, 2014, 10:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X