70th Filmfare Awards South: ಕನ್ನಡದಲ್ಲಿ ಯಾರಿಗೆಲ್ಲಾ ಒಲಿಯಿತು ಫಿಲ್ಮ್‌ಫೇರ್ ಪ್ರಶಸ್ತಿ? ಇಲ್ಲಿದೆ ಲಿಸ್ಟ್

70ನೇ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆ(ಫೆಬ್ರವರಿ 21) ಸಂಜೆ ಕೇರಳದ ಕೊಚ್ಚಿಯಲ್ಲಿ ನೆರವೇರಿದೆ. ಕೊಚ್ಚಿ ಅಡ್ಲಕ್ಸ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ತಾರಾಲೋಕವೇ ಧರೆಗಿಳಿದಿತ್ತು. 2024ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಟಿಯರಾದ ಅಕ್ಷತಾ ಪಾಂಡವಪುರ, ಅಂಕಿತಾ ಅಮರ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸೇರಿ ಕನ್ನಡದ ತಾರೆಯರು ಕಾರ್ಯಕ್ರಮದಲ್ಲಿ ಭಾಗಿ ಆಗಿ ಸಂಭ್ರಮಿಸಿದ್ದಾರೆ.

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳ ಸಿನಿಮಾಗಳಿಗೆ ಆಯಾ ಭಾಷೆ ಚಿತ್ರಗಳ ಜೊತೆ ಹೋಲಿಸಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಕನ್ನಡದಲ್ಲಿ 'ಶಾಖಾಹಾರಿ' ಚಿತ್ರಕ್ಕೆ 2024ನೇ ಸಾಲಿನ ಅತ್ಯುತ್ತಮ ಸಿನಿಮಾ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಸಿಕ್ಕಿದೆ. 'ಬಘೀರ' ಚಿತ್ರದ ನಟನೆಗಾಗಿ ಶ್ರೀಮುರಳಿ ಅತ್ಯುತ್ತಮ ನಟ ಹಾಗೂ 'ಕೋಳಿಎಸ್ರು' ಚಿತ್ರದ ನಟನೆಗೆ ಅಕ್ಷತಾ ಪಾಂಡವಪುರ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

Shakhahaari Shines at 70th Filmfare South Awards Srimurali Akshata Among Big Kannada Winners

ಗೋಪಾಲಕೃಷ್ಣ ದೇಶಪಾಂಡೆ ಅತ್ಯುತ್ತಮ ಪೋಷಕ ನಟ(ಬ್ಲಿಂಕ್), ಪ್ರಿಯಾ ಶಠಮರ್ಷಣ ಅತ್ಯುತ್ತಮ ಪೋಷಕ ನಟಿ(ಭೀಮ) ಪ್ರಶಸ್ತಿಗೆ ಭಾಜನರಾಗಿದ್ದಾರೆ. 'ಕೃಷ್ಣಂಪ್ರಣಯ ಸಖಿ' ಚಿತ್ರದ 'ದ್ವಾಪರ' ಹಾಡಿನ ಗಾಯನಕ್ಕಾಗಿ ಜಸ್ಕರನ್ ಸಿಂಗ್ ಅತ್ಯುತ್ತಮ ಗಾಯಕ ಪ್ರಶಸ್ತಿ ಪಡೆದಿದ್ದಾರೆ. 'ಕರಟಕ ದಮನಕ' ಚಿತ್ರದ 'ಹಿತ್ತಲಕ ಕರಿಬೇಡ ಮಾವ' ಹಾಡಿಗಾಗಿ ಶ್ರುತಿ ಪ್ರಹ್ಲಾದ್ ಅತ್ಯುತ್ತಮ ಗಾಯಕಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಕನ್ನಡದಲ್ಲಿ ಬೇರೆ ಯಾರೆಲ್ಲಾ 70ನೇ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಲಿಸ್ಟ್ ಮುಂದೆ ಓದಿ.

ಅತ್ಯುತ್ತಮ ನಟ ಕ್ರಿಟಿಕ್ಸ್ - ಗೌರಿಶಂಕರ್(ಕೆರೆಬೇಟೆ)

ಅತ್ಯುತ್ತಮ ನಟಿ ಕ್ರಿಟಿಕ್ಸ್ - ಅಂಕಿತಾ ಅಮರ್(ಇಬ್ಬನಿ ತಬ್ಬಿದ ಇಳೆಯಲಿ)

ಅತ್ಯುತ್ತಮ ಚಿತ್ರ ಕ್ರಿಟಿಕ್ಸ್ - ಬ್ಲಿಂಕ್

ಅತ್ಯುತ್ತಮ ಸಂಗೀತ ನಿರ್ದೇಶಕ - ಅರ್ಜುನ್ ಜನ್ಯಾ (ಕೃಷ್ಣಂಪ್ರಣಯ ಸಖಿ)

ಅತ್ಯುತ್ತಮ ಡೆಬ್ಯೂ ನಟ - ಸಮರ್ಜಿತ್ ಲಂಕೇಶ್(ಗೌರಿ)

ಅತ್ಯುತ್ತಮ ಡೆಬ್ಯೂ ನಟಿ - ಬಿಂದು ಶಿವರಾಂ(ಕೆರೆಬೇಟೆ)

ಅತ್ಯುತ್ತಮ ಗೀತರಚನೆ - ವಿ. ನಾಗೇಂದ್ರಪ್ರಸಾದ್(ದ್ವಾಪರ ಹಾಡು)

'ಶಾಖಾಹಾರಿ' ಚಿತ್ರದ ನಿರ್ಮಾಪಕ ರಾಜೇಶ್ ಕಿಳಂಬಿ ವೇದಿಕೆ ಏರಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಸ್ವೀಕರಿಸಿದರು. ಅಕ್ಷತಾ ಪಾಂಡವಪುರ ಅವರಿಗೆ ನಿರ್ಮಾಪಕ ಕೆ. ಮಂಜು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಅತ್ಯುತ್ತಮ ನಟ ಕ್ರಿಟಿಕ್ಸ್ ಪ್ರಶಸ್ತಿ ಪಡೆದ ನಟ ಗೌರಿಶಂಕರ್, ಅತ್ಯುತ್ತಮ ನಟಿ ಕ್ರಿಟಿಕ್ಸ್ ಪ್ರಶಸ್ತಿ ಪಡೆದ ನಟಿ ಅಂಕಿತಾ ಅಮರ್ ವೇದಿಕೆ ಏರಿ ಸಂಭ್ರಮಿಸಿದ್ದಾರೆ.

ಅತ್ಯುತ್ತಮ ಡೆಬ್ಯೂ ನಟಿ ಪ್ರಶಸ್ತಿಯನ್ನು ಬಿಂದು ಶಿವರಾಂ ವೇದಿಕೆ ಏರಿ ಸ್ವೀಕರಿಸಿದರು. ಕಲರ್‌ಫುಲ್ ಡ್ಯಾನ್ಸ್ ಪರ್ಫಾರ್ಮನ್ಸ್‌ಗಳು ಕಾರ್ಯಕ್ರಮ ರಂಗೇರುವಂತೆ ಮಾಡಿತ್ತು. ಇದೇ ರೀತಿ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ವಿಜೇತರನ್ನು ವೇದಿಕೆ ಕರೆದು ಪ್ರಶಸ್ತಿ ಪ್ರದಾನ ಮಾಡಲಾಯಿತು.

ತೆಲುಗಿನಲ್ಲಿ 'ಪುಷ್ಪ- 2' ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. ಅದೇ ಚಿತ್ರಕ್ಕಾಗಿ ಸುಕುಮಾರನ್ ಅತ್ಯುತ್ತಮ ನಿರ್ದೇಶಕ, ಅಲ್ಲು ಅರ್ಜುನ್ ಅತ್ಯುತ್ತಮ ನಟ, ದೇವಿಶ್ರೀ ಪ್ರಸಾದ್ ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ ಪ್ರಶಸ್ತಿ ಲಭಿಸಿದೆ. '35 ಚಿನ್ನ ಕತಕಾದು' ಚಿತ್ರದ ನಟನೆಗಾಗಿ ನಿವೇತಾ ಥಾಮಸ್ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

ತಮಿಳಿನಲ್ಲಿ ಅಮರನ್ ಚಿತ್ರದ ನಟನೆಯಾಗಿ ಶಿವಕಾರ್ತಿಕೇಯನ್ ಅತ್ಯುತ್ತಮ ನಟ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅದೇ ಚಿತ್ರದ ನಟನೆಗಾಗಿ ಸಾಯಿ ಪಲ್ಲವಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದು ಹಿಗ್ಗಿದ್ದಾರೆ. 'ಮೇಯಳಗನ್' ಚಿತ್ರದ ನಟನೆಗಾಗಿ ಕಾರ್ತಿ ಅತ್ಯತ್ತಮ ಪೋಷಕ ನಟ ಪ್ರಶಸ್ತಿ ಪಡೆದರು.

ಮಲಯಾಳಂನಲ್ಲಿ 'ಮಂಜುಮೇಲ್ ಬಾಯ್ಸ್' ಅತ್ಯುತ್ತಮ ಸಿನಿಮಾ, ಮಮ್ಮುಟಿ ಅತ್ಯುತ್ತಮ ನಟ(ಭ್ರಮಯುಗಂ), ಊರ್ವಶಿ ಅತ್ಯುತ್ತಮ ನಟಿ (ಉಲ್ಲೋಳುಕ್ಕು) ಸೇರಿ ಹಲವರು ಪ್ರಶಸ್ತಿ ಸ್ವೀಕರಿಸಿದ್ದಾರೆ.

More from Filmibeat

Read more about: filmfare awards award sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X