ಸರ್ಜಾ ಕುಟುಂಬಕ್ಕೆ ಇದು ಮೂರನೆ ಆಘಾತ: ಈ ಹಿಂದೆಯೂ ಆಟವಾಡಿತ್ತು ವಿಧಿ
ಕನ್ನಡ ಚಿತ್ರರಂಗಕ್ಕೆ ಇದು ಕರಾಳದಿನ. ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯುವ ಕನಸು ಕಾಣುತ್ತ ಸುಂದರ ಕುಟುಂಬದ ಜೊತೆ ಸಂತೋಷದಿಂದ ಜೀವನ ನಡೆಸುತ್ತಿದ್ದ ಸದಾ ಹಸನ್ಮುಖಿ ಚಿರಂಜೀವಿ ಸರ್ಜಾ ಇನ್ಮುಂದೆ ಇಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳು ಸಾಧ್ಯವಿಲ್ಲ.
Recommended Video
ಇದು ನಿಜನಾ..ಈ ಸುದ್ದಿ ಸುಳ್ಳಾಗಿರಲಿ ಎಂದು ಅದೆಷ್ಟೋ ಜನ ಪ್ರಾರ್ಥನೆ ಮಾಡಿದ್ದಾರೆ. ಆದರೆ ಯಾರ ಪ್ರಾರ್ಥನೆಯೂ ಫಲಿಸಲಿಲ್ಲ. ಆಗಲೆ ಚಿರು ಎಲ್ಲರನ್ನು ಬಿಟ್ಟು ದೂರದ ಲೋಕಕ್ಕೆ ಪಯಣ ಬೆಳೆಸಿದ್ದರು. ಚಿರುಗೆ ಇನ್ನೂ 39 ವರ್ಷ. ಮದುವೆಯಾಗಿ 2 ವರ್ಷವಾಗಿದೆಯಷ್ಟೆ. ಇನ್ನು ಕೆಲವೇ ದಿನಗಳಲ್ಲಿ ತಂದೆಯಾಗುವ ಖುಷಿಯಲ್ಲಿದ್ದರು. ಆದರೆ ಎಲ್ಲಾ ಸಂತೋಷ, ಸಂಭ್ರಮವನ್ನು ಅನುಭವಿಸುವ ಮೊದಲೆ ಚಿರನಿದ್ರೆಗೆ ಜಾರಿದ್ದಾರೆ. ಸರ್ಜಾ ಕುಟುಂಬಕ್ಕೆ ಇದು ಮೊದಲನೇ ಆಘಾತವಲ್ಲ. ಈ ಮೊದಲು ಇಬ್ಬರು ಚಿಕ್ಕ ವಯಸ್ಸಿನಲ್ಲಿಯೇ ನಿಧನರಾಗಿದ್ದಾರೆ. ಮುಂದೆ ಓದಿ..

57ನೇ ವಯಸ್ಸಿಗೆ ನಿಧನರಾಗಿದ್ರು ಶಕ್ತಿ ಪ್ರಸಾದ್
ಚಿಕ್ಕ ವಯಸ್ಸಿನಲ್ಲೇ ಈ ಕುಟುಂಬದಲ್ಲಿ ಇಬ್ಬರು ಇಹಲೋಕ ತ್ಯಜಿಸಿದ್ದಾರೆ. ಚಿರಂಜೀವಿ ಸರ್ಜಾ ತಾತ ಅಂದ್ರೆ ನಟ ಶಕ್ತಿ ಪ್ರಸಾದ್ ಸಹ 57ನೇ ವಯಸ್ಸಿನಲ್ಲಿಯೇ ನಿಧನರಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಟರಾಗಿ ಗುರುಸಿಕೊಂಡಿದ್ದ ಶಕ್ತಿ ಪ್ರಸಾದ್ ನಿಧನ, ಸರ್ಜಾ ಕುಟುಂಬಕ್ಕೆ ದೊಡ್ಡ ಆಘಾತವುಂಟು ಮಾಡಿತ್ತು.

ಅರ್ಜುನ್ ಸರ್ಜಾ ಸಹೋದರ ಕಿಶೋರ್ ಸರ್ಜಾ ನಿಧನ
ಶಕ್ತಿ ಪ್ರಸಾದ್ ಹಿರಿಯ ಪುತ್ರ, ಅರ್ಜುನ್ ಸರ್ಜಾ ಅವರ ಸಹೋದರ ಸಹ ಹೃದಯಾಘಾತದಿಂದ ನಿಧನರಾಗಿದ್ದರು. ಕೇವಲ 50ನೇ ವಯಸ್ಸಿನಲ್ಲಿಯೆ ಕಿಶೋರ್ ಸರ್ಜಾ ಇಹಲೋಕ ತ್ಯಜಿಸಿದ್ದರು. ಈ ಘಟನೆ ಮಾಸುವ ಮುನ್ನವೆ ಚಿರಂಜೀವಿ ಸರ್ಜಾ ಸಾವು ಮತ್ತಷ್ಟು ಆಘಾತವುಂಟು ಮಾಡಿದೆ.

ಉತ್ತಮ ನಿರ್ದೇಶಕ ಕಿಶೋರ್ ಸರ್ಜಾ
ಅಳಿಮಯ್ಯ ಸಿನಿಮಾ ಮೂಲಕ ನಿರ್ದೇಶಕರಾಗಿ ಎಂಟ್ರಿಕೊಟ್ಟ ಕಿಶೋರ್ ಸರ್ಜಾ ಬಾವ ಬಾಮೈದಾ, ತುತ್ತಾಮುತ್ತಾ, ಜೋಡಿ, ವಾಯುಪುತ್ರ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಖ್ಯಾತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಕಿಶೋರ್ ಸರ್ಜಾ, ಚಿತ್ರರಂಗಕ್ಕೆ ಇನ್ನಷ್ಟು ಉತ್ತಮ ಸಿನಿಮಾಗಳನ್ನು ನೀಡುವ ಕನಸು ಕಂಡಿದ್ದರು. ಆದರೆ ವಿಧಿಯಾಟವೆ ಬೇರೆಯಾಗಿತ್ತು. ಚಿಕ್ಕವಯಸ್ಸಿನಲ್ಲಿಯೆ ಜೀವನ ನಿಲ್ಲಿಸಿ ಬಾರದ ಲೋಕಕ್ಕೆ ಹೊರಟುಬಿಟ್ಟಿದ್ದರು.

ಚಿರು ಮೊದಲ ಸಿನಿಮಾಗೆ ಕಿಶೋರ್ ಸರ್ಜಾ ನಿರ್ದೇಶನ
ವಿಶೇಷ ಅಂದರೆ ಚಿರುಸರ್ಜಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೆ ಕಿಶೋರ್ ಸರ್ಜಾ. ಚಿರು ಅಭಿನಯದ ಚೊಚ್ಚಲ ಸಿನಿಮಾ ವಾಯುಪುತ್ರ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಇದೆ ಕಿಶೋರ್ ಸರ್ಜಾ. ಚಿತ್ರಕ್ಕೆ ಅರ್ಜುನ್ ಸರ್ಜಾ ಬಂಡವಾಳ ಹೂಡಿದ್ದಾರೆ. ತನ್ನ ಕುಟುಂಬದ ಕುಡಿ ಚಿತ್ರರಂಗದಲ್ಲಿ ಬೆಳೆಯುತ್ತಿರುವುದನ್ನು ನೋಡುವ ಮೊದಲೆ ಕಿಶೋರ್ ಸರ್ಜಾ ಹೊರಟುಹೋಗಿದ್ದರು. ಈಗ ಅವರ ದಾರಿಯನ್ನೆ ಜಿರಂಜೀವಿ ಸರ್ಜಾ ಹಿಡಿದ್ದಾರೆ. ಸರ್ಜಾ ಕುಟುಂಬಕ್ಕೆ ಆಘಾತದ ಮೇಲೆ ಆಘಾತ ವುಂಟಾಗುತ್ತಿದೆ.


Click it and Unblock the Notifications











