»   » ಶಿವಣ್ಣ ಲಕ್ಷ್ಮಿ ಚಿತ್ರದಲ್ಲಿ ಡಿಂಗ್ ಚಾಕ್ ಬೆಡಗಿ ಶಾಲಿನಿ

ಶಿವಣ್ಣ ಲಕ್ಷ್ಮಿ ಚಿತ್ರದಲ್ಲಿ ಡಿಂಗ್ ಚಾಕ್ ಬೆಡಗಿ ಶಾಲಿನಿ

Posted By:
Subscribe to Filmibeat Kannada

ಪಡ್ಡೆಗಳ ನಿದ್ದೆಗೆಡಿಸಲು ಗಾಂಧಿನಗರಕ್ಕೆ ಮತ್ತೊಬ್ಬ ಡಿಂಗ್ ಚಾಕ್ ಬೆಡಗಿಯ ಆಮದಾಗಿದೆ. ಈಕೆ ಬೇರಾರು ಅಲ್ಲ ಈಗಾಗಲೆ ತೆಲುಗು, ತಮಿಳು ಚಿತ್ರಗಳಲ್ಲಿ ತಮ್ಮ ಮಾದಕ ಮೈಮಾಟದಿಂದ ಪಡ್ಡೆಗಳ ಹೃದಯಕ್ಕೆ ಕನ್ನ ಹಾಕಿರುವ ಶಾಲಿನಿ ನಾಯ್ಡು.

ಈಕೆ ಈಗ ಗಾಂಧಿನಗರಕ್ಕೆ ಬಂದಿರುವುದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ 'ಲಕ್ಷ್ಮಿ' ಚಿತ್ರಕ್ಕಾಗಿ. ಇದೆ ಐಟಂ ಹಾಡಿಗಾಗಿ ಹಲವರ ಹೆಸರುಗಳು ಕೇಳಿಬಂದಿದ್ದವು. ಅವುಗಳಲ್ಲಿ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಕೂಡ ಒಬ್ಬರು.


ರಾಗಿಣಿ ಈ ಐಟಂ ಹಾಡನ್ನು ಒಲ್ಲೆ ಎಂದ ಮೇಲೆ ಸಾಕ್ಷಿ ಪ್ರಧಾನ್ ಸೊಂಟ ಬಳುಕಿಸುವುದು ಗ್ಯಾರಂಟಿ ಎನ್ನಲಾಗಿತ್ತು. ಕಡೆಗೆ ಶಾಲಿನಿ ನಾಯ್ಡು ಸದ್ದಿಲ್ಲದಂತೆ ಕುಣಿದುಹೋಗಿದ್ದಾರೆ. "ಪುಸ್ಸಿ ಕ್ಯಾಟ್ ಪುಸ್ಸಿ ಕ್ಯಾಟ್ ಕಳೆದೋಯ್ತು ನನ್ನ ಪುಸ್ಸಿ ಕ್ಯಾಟ್..." ಎಂಬ ಹಾಡು ಈಗ ಸಿಕ್ಕಾಪಟ್ಟೆ ಫೇಮಸ್ಸಾಗಿದೆ.

ಈ ಹಾಡಿನ ಚಿತ್ರೀಕರಣ ರಾಕ್ ಲೈನ್ ಸ್ಟುಡಿಯೋದಲ್ಲಿ ನಡೆಯಿತು. ಪ್ರದೀಪ್ ಆಂಥೋನಿ ಅವರ ನೃತ್ಯ ನಿರ್ದೇಶನದಲ್ಲಿ ಈ ಸೆಕ್ಸಿ ಬೆಡಗಿ ಶಾಲಿನಿ ಹೆಜ್ಜೆ ಮೇಲೆ ಹೆಜ್ಜೆ ಹಾಕಿದ್ದಾರೆ. ಗುರುಕಿರಣ್ ಅವರ ಸಂಗೀತ ಕವಿರಾಜ್ ಅವರ ಸಾಹಿತ್ಯಕ್ಕೆ ತಕ್ಕಂತೆ ಶಾಲಿನಿ ತಮ್ಮ ಮೈಮಾಟ ತೋರಿದ್ದಾರೆ.

'ಲಕ್ಷ್ಮಿ' ಚಿತ್ರದಲ್ಲಿ ಶಿವಣ್ಣನಿಗೆ ಪ್ರಿಯಾಮಣಿ ನಾಯಕಿ. ರಾಘವಲೋಕಿ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. ಡಬ್ಬಿಂಗ್, ರೀರೆಕಾರ್ಡಿಂಗ್, ಗ್ರಾಫಿಕ್ಸ್, ಡಿಐ ಅಳವಡಿಕೆ ಎಲ್ಲ ಕೆಲಸಗಳು ಮುಗಿದಿದ್ದು ಈ ಐಟಂ ಹಾಡನ್ನು ಸೇರಿಸುವುದೊಂದು ಬಾಕಿ ಇದೆ. (ಏಜೆನ್ಸೀಸ್)

English summary
Recently item song for Hat Trick Hero Shivarajkumar and Priyamani lead Kannada film Lakshmi picturised in Rockline studios. Hyderabad based hot actress Shalini Naidu has done this item number. Kaviraj has penned this song and Gurukiran scores music.
Please Wait while comments are loading...