»   » ಅರ್ಜುನ್ ರೆಡ್ಡಿಯ ನಾಯಕಿಗೆ ಬಾರಿ ಡಿಮ್ಯಾಂಡ್

ಅರ್ಜುನ್ ರೆಡ್ಡಿಯ ನಾಯಕಿಗೆ ಬಾರಿ ಡಿಮ್ಯಾಂಡ್

Posted By:
Subscribe to Filmibeat Kannada
Prince Mahesh babu with shalini pandey | Filmibeat Kannada

ಟಾಲಿವುಡ್ ನಲ್ಲಿ ಕಳೆದ ವರ್ಷ ಸೂಪರ್ ಹಿಟ್ ಸಿನಿಮಾಗಳ ಲಿಸ್ಟ್ ನಲ್ಲಿ ಇರುವ ಚಿತ್ರಗಳ ಪೈಕಿ 'ಅರ್ಜುನ್ ರೆಡ್ಡಿ' ಕೂಡ ಒಂದು. ಯಂಗ್ ಜನರೇಷನ್ ಅವರಿಗಂತು ಅರ್ಜುನ್ ರೆಡ್ಡಿ ಚಿತ್ರ ಸಖತ್ ಇಷ್ಟವಾಗಿತ್ತು. ಅರ್ಜುನ್ ರೆಡ್ಡಿಯ ಹವಾ ನೋಡಿ ಕನ್ನಡ ಸಿನಿಮಾ ನಿರ್ಮಾಪಕರು ಕೂಡ ಚಿತ್ರದ ರಿಮೇಕ್ ಹಕ್ಕನ್ನು ಖರೀದಿ ಮಾಡಿ ಕನ್ನಡಕ್ಕೆ ತೆಗೆದುಕೊಂಡು ಬಂದಿದ್ದಾರೆ.

ಈ ಸಿನಿಮಾದಲ್ಲಿ ನಾಯಕ ವಿಜಯ್ ದೇವರಕೊಂಡಾ ಸಾಕಷ್ಟು ಅಭಿಮಾನಿಗಳನ್ನ ಪಡೆದುಕೊಂಡರೆ ನಾಯಕಿ ಶಾಲಿನಿ ಪಾಂಡೆ ಕೂಡ ಅಪಾರ ಅಭಿಮಾನಿಗಳನ್ನ ಗಿಟ್ಟಿಸಿಕೊಂಡರು. ಶಾಲಿನಿ ಅವರ ಅಭಿನಯ ಹಾಗೂ ಮುಗ್ಧತೆ ನೋಡುಗರನ್ನ ಸಖತ್ ಇಂಪ್ರೆಸ್ ಮಾಡಿತ್ತು. ಸದ್ಯ ಶಾಲಿನಿ ಪಾಂಡೆ ತೆಲುಗಿನಲ್ಲಿ ಭಾರಿ ಬೇಡಿಕೆಯ ನಟಿಯಾಗಿದ್ದಾರೆ. ಅಷ್ಟೇ ಅಲ್ಲದೆ ಟಾಲಿವುಡ್ ಸೂಪರ್ ಸ್ಟಾರ್ ಜೊತೆಯಲ್ಲಿ ಅಭಿನಯಿಸುವ ಅವಕಾಶವನ್ನೂ ಪಡೆದುಕೊಂಡಿದ್ದಾರೆ ಶಾಲಿನಿ.

Shalini Pandey got the opportunity to act with superstar Mahesh Babu

ಶಾಲಿನಿ ಪಾಂಡೆ ಈಗಾಗಲೇ '100% ಲವ್‌' ಹಾಗೂ 'ಮಹಾನಟಿ' ಸಿನಿಮಾದಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಅಭಿನಯಿಸುವ ಅವಕಾಶ ಹುಡುಕಿಕೊಂಡು ಬಂದಿದ್ಯಂತೆ. ಮಹೇಶ್‌ ಬಾಬು ಅಭಿನಯದ 25 ನೇ ಚಿತ್ರದಲ್ಲಿ ನಟಿಸಲು ಶಾಲಿನಿ ಪಾಂಡೆ ಅವರಿಗೆ ಬುಲಾವ್ ಬಂದಿದೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

Shalini Pandey got the opportunity to act with superstar Mahesh Babu

ಮಹೇಶ್ ಬಾಬು ಅವರ 25 ನೇ ಚಿತ್ರವನ್ನು ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಲಿದ್ದು, ದಿಲ್ ರಾಜು ಹಾಗೂ ಅಶ್ವಿನ್ ದತ್ ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ. ಅಭಿನಯಿಸಿದ ಒಂದೇ ಚಿತ್ರದಲ್ಲೇ ತೆಲುಗಿನ ಪ್ರೇಕ್ಷಕರನ್ನ ಮಾತ್ರವಲ್ಲದೆ ಕನ್ನಡ, ಹಿಂದಿ, ತಮಿಳು ಅಭಿಮಾನಿಗಳನ್ನು ಆಕರ್ಷಣೆ ಮಾಡಿದ ಶಾಲಿನಿ ಈಗ ಸೂಪರ್ ಸ್ಟಾರ್ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

'ರಾಜಮೌಳಿ' ಮುಂದಿನ ಸಿನಿಮಾ ಘೋಷಣೆ.! ನಾಯಕ ಯಾರು?

English summary
Telugu actress Shalini Pandey got the opportunity to act with superstar Mahesh Babu. Shalini Pandey has previously appeared as a heroine in Vijay Devarakonda starrer Arjun Reddy movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X