For Quick Alerts
  ALLOW NOTIFICATIONS  
  For Daily Alerts

  ಸ್ವಲ್ಪ ಸ್ವಲ್ಪ ಸರ್..: ಶಮಿತಾ ಮಲ್ನಾಡ್ ಪುತ್ರನ ಪ್ರಶ್ನೆಗೆ ವಿರಾಟ್ ಕೊಹ್ಲಿ ಉತ್ತರ

  |

  ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಪುತ್ರ ಅದ್ವೈತ್ ಹೆಗಡೆಯ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಪ್ರಶ್ನೆ ಎಸೆದಿದ್ದ ಅದ್ವೈತ್ ಗೆ ನೆಚ್ಚಿನ ಕ್ರಿಕೆಟಿಗನ ಕಡೆಯಿಂದ ಉತ್ತರ ಸಿಕ್ಕಿದೆ. ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೋಡಿ ಅದ್ವೈತ್ ಫುಲ್ ಖುಷ್ ಆಗಿದ್ದಾರೆ.

  ಶಮಿತಾ ಮಲ್ನಾಡ್ ಪುತ್ರನಿಗೆ ಕನ್ನಡದಲ್ಲಿ ಉತ್ತರಿಸಿದ ವಿರಾಟ್ ಕೊಹ್ಲಿ | Filmibeat Kannada

  ಅದರಲ್ಲೂ ವಿರಾಟ್ ಕನ್ನಡ ಪದ ಬಳಸಿದ್ದು ಕನ್ನಡ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದೆ. ಪುತ್ರನ ಸಂಸತವನ್ನು ಶಮಿತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ವಿರಾಟ್ ಕೊಹ್ಲಿ ಆಗಾಗ ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಿರುತ್ತಾರೆ. ಏನಾದರು ಪ್ರಶ್ನೆಗಳನ್ನು ಕೇಳಿ ಎಂದು ಹೇಳಿ ಅಭಿಮಾನಿಗಳಿಂದ ಬರುವ ಪ್ರಶ್ನೆಗೆ ಉತ್ತರ ನೀಡುತ್ತಾರೆ.

  ವಿರಾಟ್ ಹಾಗೆ ಹೇಳುತ್ತಿದ್ದ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆಯೇ ಹರಿದುಬರುತ್ತಿರುತ್ತೆ. ಅದರಲ್ಲಿ ಆಯ್ದ ಒಂದಿಷ್ಟು ಪ್ರಶ್ನೆಗಳಿಗೆ ವಿರಾಟ್ ಉತ್ತರ ನೀಡುವ ಮೂಲಕ ಅಭಿಮಾನಿಗಳನ್ನು ಸಂತಸ ಪಡಿಸುತ್ತಾರೆ. ಇತ್ತೀಚಿಗೆ ವಿರಾಟ್ ನಡೆಸಿದ್ದ ಸಂವಾದದಲ್ಲಿ ಅದ್ವೈತ್ ಪ್ರಶ್ನೆ ಕೇಳಿದ್ದಾರೆ.

  ಅಷ್ಟಕ್ಕೂ ಅದ್ವೈತ್ ಕೇಳಿದ ಪ್ರಶ್ನೆ ಏನು? ಎಂದು ಯೋಚಿಸುತ್ತಿದ್ದೀರಾ. ಅದ್ವೈತ್, ಆರ್ ಸಿ ಬಿ ನಾಯಕ ವಿರಾಟ್ ಗೆ, 'ನೀವು ಕನ್ನಡ ಮಾತನಾಡುತ್ತೀರಾ ಮತ್ತು ಅರ್ಥಮಾಡಿಕೊಳ್ಳುತ್ತೀರಾ?' ಎಂದು ಪ್ರಶ್ನೆ ಮಾಡಿದ್ದಾರೆ.

  ಇದಕ್ಕೆ ಉತ್ತರ ನೀಡಿದ ವಿರಾಟ್, 'ಸ್ವಲ್ಪ ಸ್ವಲ್ಪ ಸರ್, ಆದರೆ ಎಲ್ಲನೂ ಅರ್ಥ ಆಗಲ್ಲ' ಎಂದು ವಿರಾಟ್ ಹೇಳಿದ್ದಾರೆ. ಇದರ ಸ್ಕ್ರೀನ್ ಶಾಟ್ ತೆಗೆದು ಶಮಿತಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  'ಅದ್ವೈತ್ ಹೆಗಡೆ ಪ್ರಶ್ನೆಗೆ ವಿರಾಟ್ ಕೊಹ್ಲಿ ಉತ್ತರ. ಮಗನಿಗೆ ಫುಲ್ ಖುಷಿಯೋ ಖುಷಿ. ಕ್ಯಾಪ್ಟನ್ ವಿರಾಟ್ ಕೊಹ್ಲಿಯಿಂದ ಇನ್ಸ್ಟಾಗ್ರಾಮ್ ನಲ್ಲಿ ಮೆಸೇಜ್ ಬಂದಿದೆ. ಸ್ವಲ್ಪ ಸ್ವಲ್ಪ ಅಲ್ಲ ಜಾಸ್ತಿ ಕನ್ನಡ ಕಲೀರಿ.. ಆರ್ ಸಿ ಬಿ ಕ್ಯಾಪ್ಟನ್ ಅಲ್ವಾ?' ಎಂದು ಶಮಿತಾ ತನ್ನ ಮಗನ ಸಂತಸವನ್ನು ಹಂಚಿಕೊಂಡಿದ್ದಾರೆ.

  English summary
  Singer Shamitha Malnad son asks questions to Virat Kohli on Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X