For Quick Alerts
  ALLOW NOTIFICATIONS  
  For Daily Alerts

  ಸಹೋದರನ ಕೊಲೆ ಆರೋಪ; ಸ್ಯಾಂಡಲ್‌ವುಡ್ ನಟಿ ಬಂಧನ

  By ಫಿಲ್ಮ್ ಡೆಸ್ಕ್
  |

  ತನ್ನ ಪ್ರೀತಿಗೆ ಅಡ್ಡ ಬಂದ ಸಹೋದರನನ್ನು ನಟಿ ಶನಾಯಾ ಅವರು ಬಾಯ್ ಫ್ರೆಂಡ್ ಜೊತೆ ಸೇರಿ ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಮಾಜಿ ಗಗನ ಸಖಿ, ಮಿಸ್ ಕರ್ನಾಟಕ ಕಿರೀಟ ಧರಿಸಿದ್ದ ನಟಿ ಶನಾಯಾ ಕಾಟವೆರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

  ನಟಿ ಶನಾಯಾ ಕಾಟವೇ, ಸೆಲೆಬ್ರಿಟಿ ಮ್ಯಾನೇಜರ್ ಆಗಿದ್ದ ನಿಯಾಜ್ ಅಹ್ಮದ್ ಎಂಬಾತನ ಜೊತೆ ಪ್ರೀತಿಯಲ್ಲಿದ್ದರು. ಇಬ್ಬರೂ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ತನ್ನ ಪ್ರೀತಿಗೆ ಅಡ್ಡಿಯಾಗಿದ್ದ ಸಹೋದರ ರಾಕೇಶ್‌ನನ್ನು ಪ್ರಿಯತಮ ನಿಯಾಜ್ ಮತ್ತು ಸಹಚರರು ಕೊಲೆ ಮಾಡಿದ್ದಾರೆ. ನಟಿ ಶನಾಯಾ ಕೂಡ ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

  ಬಂಧಿತ ಯೂಟ್ಯೂಬರ್‌ ಭಾರ್ಗವ್‌ನ ನಿಜ ರೂಪ ಬಹಿರಂಗಪಡಿಸಿ ಪೊಲೀಸರುಬಂಧಿತ ಯೂಟ್ಯೂಬರ್‌ ಭಾರ್ಗವ್‌ನ ನಿಜ ರೂಪ ಬಹಿರಂಗಪಡಿಸಿ ಪೊಲೀಸರು

  ನಿಯಾಜ್ ಮತ್ತು ಸಹಚರರು ರಾಕೇಶ್‌ನನ್ನು ಕೊಲೆ ಮಾಡಿ ಶವವನ್ನು ಕಾರಿನಲ್ಲಿ ಬಚ್ಚಿಟ್ಟಿದ್ದರು. ಬಳಿಕ ವಾಸನೆ ಬರಲು ಪ್ರಾರಂಭವಾದಾಗ ರುಂಡ, ಮುಂಡ, ಕೈ ಕಾಲುಗಳನ್ನು ಕತ್ತರಿಸಿ ಬೇರೆ ಬೇರೆ ಕಡೆ ಎಸೆದಿದ್ದಾರೆ. ಯಾವುದೇ ಸುಳಿವು ಸಿಗದಂತೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

  ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತನಿಖೆ ಆರಂಭಿಸಿದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ನಯಾಜ್ ಅಹ್ಮದ್ ಸೇರಿದಂತೆ 4 ಜನರನ್ನು ಅರೆಸ್ಟ್ ಮಾಡಿದ್ರು. ಬಳಿಕ ಮತ್ತಷ್ಟು ತನಿಖೆ ನಡೆದ ಪೊಲೀಸರು ನಟಿ ಶನಾಯಾ ಸೇರಿದಂತೆ ಇನ್ನೂ ನಾಲ್ವರನ್ನು ಬಂಧಿಸಿದ್ದಾರೆ. ಸದ್ಯ ಎಂಟು ಜನರನ್ನು ಅರೆಸ್ಟ್ ಮಾಡಿದ್ದು ಪೋಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  KGF 2 ರಿಲೀಸ್ ಡೇಟ್ ಪೋಸ್ಟ್ ಪೋನ್ ಮಾಡಿದ ಚಿತ್ರತಂಡ | Filmibeat Kannada

  ನಟಿ ಶನಾಯಾ ತೆಲುಗಿನ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಜೊತೆಗೆ ಕನ್ನಡದಲ್ಲಿ ಒಂದು ಗಂಟೆಯ ಕತೆ ಮತ್ತು ಅಂಡರ್ ವರ್ಲ್ಡ್ ಕತೆ ಒಳಗೊಂಡ ಛೋಟಾ ಬಾಂಬೆ ಚಿತ್ರದಲ್ಲೂ ನಾಯಕಿಯಾಗಿ ಮಿಂಚಿದ್ದಾರೆ.

  English summary
  Sandalwood Actress Shanaya Katwe arrested in her brother Rakesh murder case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X