'ಶನಿ' ಧಾರಾವಾಹಿಯ ಸೂರ್ಯದೇವನಿಗೆ ಸಿಕ್ತು ದೊಡ್ಡ ಅವಕಾಶ

By Pavithra

'ಶನಿ'... ಕಲರ್ಸ್ ಕನ್ನಡ ವಾಹಿನಿಯಲ್ಲಿ ಲಕ್ಷಾಂತರ ಅಭಿಮಾನಿಗಳ ಮನಸ್ಸು ಗೆದ್ದಿರುವ ಧಾರಾವಾಹಿ. ಪ್ರತಿಯೊಬ್ಬರ ಮನೆಯಲ್ಲಿಯೂ ಯಾರು ತಪ್ಪಿಸದೇ ನೋಡುವ ಸೀರಿಯಲ್ ಇದು. ಈ ಧಾರಾವಾಹಿಯ ಸೂರ್ಯ ದೇವಾ ಇನ್ನು ಮುಂದೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ಶನಿ' ಧಾರಾವಾಹಿಯಲ್ಲಿ ಸೂರ್ಯನ ಪಾತ್ರ ನಿರ್ವಹಿಸುತ್ತಿರುವ ರಂಜಿತ್ ಅವರಿಗೆ ದೊಡ್ಡ ಸಿನಿಮಾದಲ್ಲಿ ಅಭಿನಯ ಮಾಡುವ ಅವಕಾಶ ಸಿಕ್ಕಿದೆ. ಹೌದು ರಂಜಿತ್, ನಿಖಿಲ್ ಕುಮಾರ್ ಅಭಿನಯ ಮಾಡುತ್ತಿರುವ 'ಸೀತಾ ರಾಮ ಕಲ್ಯಾಣ' ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಪಡೆದುಕೊಂಡಿದ್ದಾರೆ.

'ಸೀತಾ ರಾಮ ಕಲ್ಯಾಣ' ಚಿತ್ರದಲ್ಲಿ ಖಳನಾಯಕನಾಗಿ ರಂಜಿತ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸಾಕಷ್ಟು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಅಭಿನಯ ಮಾಡಿರುವ ರಂಜಿತ್ 'ಶನಿ' ಧಾರಾವಾಹಿ ಒಪ್ಪಿಕೊಂಡ ನಂತರ ಯಾವುದೇ ಚಿತ್ರದಲ್ಲಿಯೂ ಅಭಿನಯ ಮಾಡಿರಲಿಲ್ಲ. ಸಣ್ಣ ಗ್ಯಾಪ್ ನಂತರ ಈಗ ಮತ್ತೆ ಚಿತ್ರಗಳಲ್ಲಿ ಬ್ಯುಸಿ ಆಗಲಿದ್ದಾರೆ.

Shani serial artist Ranjit Kumar is acting in the movie

ಸದ್ಯ 'ಶನಿ' ಧಾರಾವಾಹಿಗೆ ಸಣ್ಣ ಬ್ರೇಕ್ ಸಿಕ್ಕಿರುವುದರಿಂದ ಒಪ್ಪಿಕೊಂಡಿರುವ ಸಿನಿಮಾಗಳ ಶೂಟಿಂಗ್ ಮುಗಿಸುತ್ತಿದ್ದಾರೆ ರಂಜಿತ್. ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದು ಅವುಗಳಲ್ಲಿ ಸೂಕ್ತವಾದುದ್ದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

More from Filmibeat

English summary
Kannada Shani serial artist Ranjit Kumar is acting in the movie. Ranjit is seen as a villain in the film Seetha Rama Kalyana, starring Nikhil Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X