twitter
    For Quick Alerts
    ALLOW NOTIFICATIONS  
    For Daily Alerts

    ಆಟೋರಾಜನ ಅಭಿಮಾನಿಗಳಿಗೆ ಸಿಹಿ ಸುದ್ದಿ: ಶಂಕ್ರಣ್ಣನ ಚಿತ್ರಮಂದಿರಕ್ಕೆ ಮತ್ತೆ ಜೀವ

    |

    Recommended Video

    ಸದ್ಯದಲ್ಲೇ ಶಂಕರ್ ನಾಗ್ ಚಿತ್ರಮಂದಿರ ಮತ್ತೆ ಶುರುವಾಗಲಿದೆ | FILMIBEAT KANNADA

    ಶಂಕರ್ ನಾಗ್ ಚಿತ್ರಮಂದಿರ ಪುನರಾರಂಭ ಅಂದ್ರೆ ಅನೇಕರಿಗೆ ಖುಷಿ. ಹಲವರಿಗೆ ಕುತೂಹಲ. ಶಂಕರ್ ನಾಗ್ ಚಿತ್ರಮಂದಿರನಾ? ಅದು ಎಲ್ಲಿದೆ ಎಂಬ ಪ್ರಶ್ನೆ. ಸದಾ ಪಿ.ವಿ.ಆರ್, ಐನಾಕ್ಸ್, ಮೆಜಿಸ್ಟಿಕ್ ನಲ್ಲಿರುವ ಕೆಲವು ಚಿತ್ರಮಂದಿರಗಳಲ್ಲೇ ಕಾಲ ಕಳೆಯುವ ಇಂದಿನ ಯುವ ಜನಾಂಗಕ್ಕೆ ಶಂಕರ್ ನಾಗ್ ಚಿತ್ರಮಂದಿರದ ಬಗ್ಗೆ ಗೊತ್ತಿರಲ್ಲ.

    ಗೊತ್ತಿದ್ದರೂ ಅಲ್ಲಿ, ಇಲ್ಲಿ ಪತ್ರಿಕೆ ಅಥವಾ ಟಿವಿಯಲ್ಲಿ ನೋಡಿರಬಹುದು ಅಥವಾ ಕೇಳಿರಬಹುದು. ಎರಡು ವರ್ಷದ ಹಿಂದೆ ಥಿಯೇಟರ್ ಕ್ಲೋಸ್ ಆಗಿತ್ತು. ಇದೀಗ ಮತ್ತೆ ಈ ಚಿತ್ರಮಂದಿರ ರೀ-ಓಪನ್ ಆಗ್ತಿದ್ದು, ಶಂಕರ್ ನಾಗ್ ಅವರ ಹೆಸರಿಗೆ ಜೀವ ಬಂದಿದೆ.

    ಹಳೇ ಚಿತ್ರಮಂದಿರಕ್ಕೆ ಹೊಸ ರೂಪ ನೀಡಿ, ಹೊಸ ತಂತ್ರಜ್ಞಾನವನ್ನ ಅಳವಡಿಸಿ ಇಂದಿನ ಸಮಯದಕ್ಕೆ ಜನರೇಷನ್ ಗೆ ತಕ್ಕಂತೆ ಸಿದ್ಧಮಾಡಲಾಗುತ್ತಿದೆ. ಈ ಮೂಲಕ ದಶಕಗಳ ಇತಿಹಾಸ ಹೊಂದಿರುವ ಶಂಕರ್ ನಾಗ್ ಸಿನಿಮಾಸ್ ಮತ್ತೆ ಆರಂಭವಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.....

    ಶಂಕರ್ ನಾಗ್ ಸ್ವಾಗತ ಓನಿಕ್ಸ್

    ಶಂಕರ್ ನಾಗ್ ಸ್ವಾಗತ ಓನಿಕ್ಸ್

    'ಶಂಕರ್ ನಾಗ್ ಚಿತ್ರಮಂದಿರ' ಎಂದು ಗುರುತಿಸಲಾಗುತ್ತಿದ್ದ ಚಿತ್ರಮಂದಿರ ಇನ್ನು ಮುಂದೆ 'ಶಂಕರ್ ನಾಗ್ ಸ್ವಾಗತ ಓನಿಕ್ಸ್' ಎಂದು ಮರುನಾಮಕರಣವಾಗಿದೆ. ಎಲ್ಇಡಿ ಮೂಲಕ ಈ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಮಾಡಲಾಗುತ್ತಿದ್ದು, ಜಗತ್ತಿನ ಅತಿ ದೊಡ್ಡ ಎಲ್ಇಡಿ ಪರದೆ ಎಂದು ಹೇಳಲಾಗ್ತಿದೆ.

    ಸಮಸ್ಯೆಯಲ್ಲಿ ಸಿಲುಕಿದ್ದ ರವಿಚಂದ್ರನ್ ಗೆ ಧೈರ್ಯ ತುಂಬಿದ್ದು ಶಂಕರ್ ನಾಗ್.!ಸಮಸ್ಯೆಯಲ್ಲಿ ಸಿಲುಕಿದ್ದ ರವಿಚಂದ್ರನ್ ಗೆ ಧೈರ್ಯ ತುಂಬಿದ್ದು ಶಂಕರ್ ನಾಗ್.!

    614 ಆಸನಗಳ ಥಿಯೇಟರ್

    614 ಆಸನಗಳ ಥಿಯೇಟರ್

    14 ಮೀಟರ್ ಎಲ್ಇಡಿ ಪರದೆಯನ್ನ ಈ ಚಿತ್ರಮಂದಿರದಲ್ಲಿ ಅಳವಡಿಸಲಾಗುತ್ತಿದೆ. ಮಲೇಷ್ಯಾ ಮತ್ತು ಚೀನಾ ನಂತರ ಬೆಂಗಳೂರಿನಲ್ಲಿ ದೊಡ್ಡ ಎಲ್ಇಡಿ ಪರದೆಯಾಗಲಿದೆ. ದೆಹಲಿ ಮತ್ತು ಮುಂಬೈನಲ್ಲಿ ಇದಕ್ಕಿಂತ ಚಿಕ್ಕ ಪರದೆ ಇದೆ. 3ಡಿ ತಂತ್ರಜ್ಞಾನ ಹೊಂದಿರಲಿದೆ. ಇಂದಿನಿಂದ ಶೋ ಆರಂಭವಾಗಿದೆ.

    4000 ಸಿನಿಮಾಗಳನ್ನು ಪೂರೈಸಿದ ಕನ್ನಡ ಚಿತ್ರರಂಗದ ಪ್ರಮುಖಾಂಶಗಳು! 4000 ಸಿನಿಮಾಗಳನ್ನು ಪೂರೈಸಿದ ಕನ್ನಡ ಚಿತ್ರರಂಗದ ಪ್ರಮುಖಾಂಶಗಳು!

    ಹಳೇ ಥಿಯೇಟರ್ ಬಗ್ಗೆ ಮಾಹಿತಿ

    ಹಳೇ ಥಿಯೇಟರ್ ಬಗ್ಗೆ ಮಾಹಿತಿ

    560 ಸೀಟುಗಳ ಹೊಂದಿರುವ ಶಂಕರ್​ನಾಗ್ ಚಿತ್ರಮಂದಿರ ಶುರುವಾಗಿದ್ದು 1979ರಲ್ಲಿ. ಮೊದಲು ಇಲ್ಲಿ ಇಂಗ್ಲಿಷ್ ಚಿತ್ರಗಳು ಹೆಚ್ಚಾಗಿ ಪ್ರದರ್ಶನವಾಗುತ್ತಿತ್ತು. ನಂತರ ಅದು ಕನ್ನಡ ಚಿತ್ರಗಳ ಪ್ರದರ್ಶನಕ್ಕೇ ಮೀಸಲಾಯ್ತು. ಸುಮಾರು 38 ವರ್ಷಗಳ ಕಾಲ ಕನ್ನಡ ಸಿನಿಮಾ ಸೇರಿದಂತೆ ಚಿತ್ರ ಪ್ರೇಮಿಗಳಿಗೆ ಮನರಂಜನೆ ನೀಡುತ್ತಾ ಬಂದಿದೆ.

    ಶಿಷ್ಯನ ಸಾವಿನ ಸಮಯದಲ್ಲಿ ಶಂಕರ್ ತೆಗೆದುಕೊಂಡ ನಿರ್ಧಾರ ಕೇಳಿ!ಶಿಷ್ಯನ ಸಾವಿನ ಸಮಯದಲ್ಲಿ ಶಂಕರ್ ತೆಗೆದುಕೊಂಡ ನಿರ್ಧಾರ ಕೇಳಿ!

    ಮೊದಲ ಹೆಸರು ಸಿಂಪೋನಿ

    ಮೊದಲ ಹೆಸರು ಸಿಂಪೋನಿ

    ಅಂದ್ಹಾಗೆ, ಈ ಚಿತ್ರಮಂದಿರಕ್ಕೆ ಮೊದಲು 'ಸಿಂಫೋನಿ' ಎಂಬ ಹೆಸರಿತ್ತಂತೆ. 1991ರಲ್ಲಿ ಶಂಕರ್​ನಾಗ್ ಅವರ ನಿಧನದ ನಂತರ ಆ ಚಿತ್ರಮಂದಿರಕ್ಕೆ ಶಂಕರ್​ನಾಗ್ ಚಿತ್ರಮಂದಿರ ಎಂದು ಹೊಸದಾಗಿ ನಾಮಕರಣ ಮಾಡಲಾಗಿತ್ತು. ಎರಡ್ಮೂರು ಸಲ ಚಿತ್ರಮಂದಿರಕ್ಕೆ ಬಾಗಿಲು ಹಾಕಲಾಗಿತ್ತು. ಆದ್ರೆ, ಮತ್ತೆ ಮತ್ತೆ ಶೋ ಆರಂಭ ಮಾಡಿತ್ತು.

    English summary
    The iconic single-screen theater on MG Road, Shanka­rnag Chitram­andira, has once again re open with new technology.
    Saturday, April 27, 2019, 12:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X