ಒಂದೇ ಸಾಲಿನಲ್ಲಿ ದರ್ಶನ್ ಗುಣ ಹೇಳಿಬಿಟ್ಟರು ಶಂಕರ್ ಅಶ್ವತ್
Recommended Video

ಕನ್ನಡದ ಹಿರಿಯ ನಟ ಅಶ್ವಥ್ ಪುತ್ರ ಶಂಕರ್ ಅಶ್ವಥ್ ಸಿನಿಮಾ ಅವಕಾಶ ಇಲ್ಲದೆ ಕ್ಯಾಬ್ ಓಡಿಸುತ್ತಿದ್ದರು. ಇವರ ಈ ಪರಿಸ್ಥಿತಿ ತಿಳಿದ ಮೇಲೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ತಮ್ಮ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದ್ದರು. ಅದೇ ರೀತಿ ಈಗ ಶಂಕರ್ ಅಶ್ವತ್ 'ಯಜಮಾನ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಸಿನಿಮಾದ ಚಿತ್ರೀಕರಣ ವೇಳೆ ದರ್ಶನ್ ಜೊತೆಗೆ ಕಾಲಕಳೆದಿರುವ ಶಂಕರ್ ಅಶ್ವತ್ ಈಗ ಡಿ ಬಾಸ್ ಗುಣವನ್ನು ಕೊಂಡಾಡಿದ್ದಾರೆ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ದರ್ಶನ್ ಬಗ್ಗೆ ಬರೆದುಕೊಂಡಿರುವ ಶಂಕರ್ ಅಶ್ವತ್ ''ಒಬ್ಬ ಮೇರು ನಟ ಅತ್ಯಂತ ಉನ್ನತ ಮಟ್ಟಕ್ಕೆ ಬೆಳೆದರೂ ನಾನು ಎಲ್ಲರಂತೆ ಸಾಮಾನ್ಯನು ಎಂದು ನಿರೂಪಿಸಿ ಇನ್ನೂ ಎತ್ತರಕ್ಕೆ ಬೆಳೆದ ವ್ಯಕ್ತಿ ಶ್ರೀಯುತ ದರ್ಶನ್ ಅವರು'' ಎಂದು ಒಂದೇ ಸಾಲಿನಲ್ಲಿ ದರ್ಶನ್ ರನ್ನು ವರ್ಣಿಸಿದ್ದಾರೆ.
ಖುಷಿಯ ವಿಚಾರ ಏನೆಂದರೆ ಈ ಸಿನಿಮಾದ ನಂತರ ಶಂಕರ್ ಅಶ್ವತ್ ಅವರಿಗೆ ಬೇರೆ ಬೇರೆ ಸಿನಿಮಾದ ಅವಕಾಶ ಸಿಕ್ಕಿದೆ. ಈ ಕಾರಣದಿಂದ ದರ್ಶನ್ ಅವರಿಗೆ ಶಂಕರ್ ಅಶ್ವತ್ ಕೃತಜ್ಞತೆ ಹೇಳಿದ್ದಾರೆ. ಜೊತೆಗೆ ''ನಿಜಕ್ಕೂ ನಾನು ಊಬರ್ ಕ್ಯಾಬ್ ಚಾಲಕನಾಗಿದ್ದು ಬಹಳ ಹೆಮ್ಮೆಯನ್ನು ತಂದಿದೆ. ಕಾರಣ ನೀವೆಲ್ಲಾ ಸ್ಪಂದಿಸಿದ್ದು, ಜನ ನನ್ನನ್ನು ಈಗ ಕಾಣುವ ರೀತಿ, ಗೌರವಿಸುತ್ತಿರುವುದನ್ನು ಕಂಡರೆ ಯಾವ ಜನ್ಮದ ಪುಣ್ಯವೋ? ಎಂದು ಶಂಕರ್ ಅಶ್ವತ್ ಎಲ್ಲರಿಗೆ ಧನ್ಯವಾದಗಳು ತಿಳಿಸಿದ್ದಾರೆ.
ಅಂದಹಾಗೆ, ದರ್ಶನ್ ಅವರ 'ಯಜಮಾನ' ಸಿನಿಮಾದ ಶೂಟಿಂಗ್ ಸದ್ಯ ನಡೆಯುತ್ತಿದೆ. ಈ ಸಿನಿಮಾದಲ್ಲಿ ದರ್ಶನ್ ಜೊತೆಗೆ ರಶ್ಮಿಕಾ ಮಂದಣ್ಣ ನಾಯಕಿ ಆಗಿದ್ದಾರೆ. ಬಿ ಸುರೇಶ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. 'ವಿಷ್ಣುವರ್ಧನ' ಸಿನಿಮಾದ ಖ್ಯಾತಿಯ ಪಿ.ಕುಮಾರ್


Click it and Unblock the Notifications











