ದರ್ಶನ್ ವಿಚಾರಕ್ಕೆ ರಜನಿಕಾಂತ್ ಅವರನ್ನ ನೆನಪಿಸಿಕೊಂಡ ನಟ

By Bharath Kumar

Recommended Video

ದರ್ಶನ್ ರಜನಿಕಾಂತ್ ತರಹ ಅಂತೆ...!! | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ 'ಈ ಯುಗದ ಬಂಗಾರದ ಮನುಷ್ಯ' ಎಂದು ಅವರ ಅಭಿಮಾನಿಗಳು ಕರೆಯುತ್ತಾರೆ. ಆ ಮಾತಿಗೆ ಹಿರಿಯ ನಟರೊಬ್ಬರು ಆಗಾಗ ದನಿಗೂಡಿಸುತ್ತಾರೆ.

ದರ್ಶನ್ ಅಭಿನಯಿಸುತ್ತಿರುವ 51ನೇ ಸಿನಿಮಾ 'ಯಜಮಾನ'ದಲ್ಲಿ ಪೋಷಕ ಮಾತ್ರ ನಿರ್ವಹಿಸಿರುವ ಶಂಕರ್ ಅಶ್ವಥ್ ಅವರು ದಾಸನ ಬಗ್ಗೆ ಮತ್ತೆ ಗುಣಗಾನ ಮಾಡಿದ್ದಾರೆ.

ಈ ಹಿಂದೆ ಹಲವರು ಸಲ ದರ್ಶನ್ ಅವರ ವ್ಯಕ್ತಿತ್ವದ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ಶಂಕರ್ ಅಶ್ವಥ್ ಅವರು, ಈಗ ದರ್ಶನ್ ವಿಚಾರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನ ನೆನಪಿಸಿಕೊಂಡಿದ್ದಾರೆ. ಅಷ್ಟಕ್ಕೂ, ಚಾಲೆಂಜಿಂಗ್ ಸ್ಟಾರ್ ಬಗ್ಗೆ ಈ ಹಿರಿಯ ನಟ ಹೇಳಿದ್ದೇನು, ರಜನಿಕಾಂತ್ ಅವರ ಬಗ್ಗೆ ನೆನಪಿಸಿಕೊಂಡ ಆ ಘಟನೆ ಯಾವುದು.? ಮುಂದೆ ಓದಿ....

ಅಂದು ರಜನಿಕಾಂತ್ ಹೀಗೆ ಮಾಡಿದ್ದರಂತೆ

ಅಂದು ರಜನಿಕಾಂತ್ ಹೀಗೆ ಮಾಡಿದ್ದರಂತೆ

''ಹಿಂದೆ ರಜನೀಕಾಂತ್ ಅವರನ್ನು ಭೇಟಿ ಮಾಡಿದಾಗ ನನ್ನ ಪರಿಚಯ ಇಲ್ಲದಿದ್ದರೂ ಮ್ಯಾನೇಜರ್ ನನ್ನ ತಂದೆಯ ಹೆಸರು ಹೇಳಿದ್ದಕ್ಕೆ ಎದ್ದು ನಿಂತು ಗೌರವಿಸಿದರು'' ಎಂದು ಹೇಳಿಕೊಂಡಿರುವ ಶಂಕರ್ ಅಶ್ವಥ್ ಈಗ ಅವರಂತೆ ದರ್ಶನ್ ಕೂಡ ದೊಡ್ಡ ಗುಣ ಹೊಂದಿದ್ದಾರೆ ಎಂದಿದ್ದಾರೆ.

ದರ್ಶನ್ ಒಳ್ಳೆಯ ಸಂಸ್ಕಾರ

ದರ್ಶನ್ ಒಳ್ಳೆಯ ಸಂಸ್ಕಾರ

''ಸರಿ, ನಮ್ಮ ತಂದೆ ಏನೋ ಹಿರಿಯ ಕಲಾವಿದರು, ಆದ್ದರಿಂದ ಅದು ಶೋಭಿಸುತ್ತದೆ. ಆದರೆ ನಾನೊಬ್ಬ ಸಾಮಾನ್ಯ ಕಲಾವಿದ ಅಂತಹದ್ರಲ್ಲಿ ಇಂದು ದರ್ಶನ್ ರವರು ನನ್ನನ್ನು ನೋಡಿದ ತಕ್ಷಣ ಅಭಿನಂದಿಸುವುದಕ್ಕೆ ಸ್ವತಃ ತಾನೇ ಕೂತ ಸ್ಥಳದಿಂದ ಎದ್ದು ಬಂದರು. ಇದೆಂತಹ ಒಳ್ಳೆಯ ಸಂಸ್ಕಾರ, ಅವರ ಕುಟುಂಬಕ್ಕೆ ಪರಮಾತ್ಮ ಸದಾಕಾಲ ಒಳ್ಳೆಯದನ್ನು ಮಾಡಲಿ'' ಎಂದು ಮೆಚ್ಚಿಕೊಂಡಿದ್ದಾರೆ.

ಇದು ವಾಸ್ತವ ಎಂದ ನಟ

ಇದು ವಾಸ್ತವ ಎಂದ ನಟ

''ಇದು ನನ್ನ ಅನುಭವ ಯಾರನ್ನೂ ಹೊಗಳುವ ಅಥವಾ ನಿಂದಿಸುವುದಕ್ಕಲ್ಲಾ..... ನಗು ಮುಖ, ಸರಳತನ, ಸಾಮಾನ್ಯರನ್ನೂ ಗೌರವಿಸುವುದು ಇವೆಲ್ಲಾ ಈಗಿನ ಪ್ರಪಂಚದಲ್ಲಿ ಕಾಣುವುದು ಬಹಳ ಅಪರೂಪ. ಯಾಕೆಂದರೆ ಅದನ್ನು ಉಳಿಸಿಕೊಳ್ಳುವುದು ಅಷ್ಟೇ ಕಷ್ಟ. ಅದನ್ನು ಒಬ್ಬ ಮಾನವ ಪಡೆಯುವುದೆಂದರೆ ಅದಕ್ಕೆ ಮನೆತನದ ಸಂಸ್ಕಾರ ಇಲ್ಲವೇ ತಪಸ್ಸು ಅತ್ಯಗತ್ಯ. ಯಾರು ಇದನ್ನು ಸ್ವಂತಿಕೆ ಮಾಡಿಕೊಳ್ಳುತ್ತಾರೆ ಆತ ಪುರುಷೋತ್ತಮ ನಾಗುವುದರಲ್ಲಿ, ಏಳ್ಳಷ್ಟು ಸಂಶಯವಿಲ್ಲ. ಉದಾಹರಣೆಗೆ ನಮ್ಮ ಮಾಜಿ ರಾಷ್ಟ್ರಪತಿ ಕಲಾಂ, ಉದ್ಯಮಿ ಇನ್ಫೋಸಿಸ್- ನಾರಯಣಮೂರ್ತಿ,ವಿಪ್ರೋ ಪ್ರೇಮಜಿ, ಚಿತ್ರರಂಗದ ಡಾ.ರಾಜ್,ಡಾ.ವಿಷ್ಣು, ಸೂಪರ್ ಸ್ಟಾರ್ ರಜನೀಕಾಂತ್ '' ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಹಿಂದೆ ರಾಜ್-ವಿಷ್ಣುಗೆ ಹೋಲಿಸಿದ್ದ ನಟ

ಈ ಹಿಂದೆ ರಾಜ್-ವಿಷ್ಣುಗೆ ಹೋಲಿಸಿದ್ದ ನಟ

''ಇದು ಸತ್ಯಸಂಗತಿ: ಎಲ್ಲರಲ್ಲೂ ಪರಮಾತ್ಮನು ಇರುತ್ತಾನೆ ಅದನ್ನು ಮುಟ್ಟಲು ಸುಲಭವಾದ ಮಾರ್ಗ ಅಂದರೆ ತಿನ್ನಲು ಏನಾದರೂ ಕೊಟ್ಟು ಸಂತೃಪ್ತಿ ಪಡಿಸುವುದು, ಎಂದು ನನ್ನ ತಂದೆ ಹೇಳುತ್ತಿದ್ದರು.ಈಮೂರು ಮಹಾನ್ ವ್ಯಕ್ತಿಗಳಿಗೆ ನಮ್ಮಿಂದ ಸೇರಿದ ಅಲ್ಪ ತಿನಿಸಿನಿಂದ ಸಂತೃಪ್ತರಾದರೆಂದು ತಿಳಿಸಲು ಹರ್ಷಪಡುತ್ತೇನೆ.'' ಎಂದು ಈ ಹಿಂದೊಮ್ಮೆ ರಾಜ್-ವಿಷ್ಣು ಮತ್ತು ದರ್ಶನ್ ಫೋಟೋ ಹಂಚಿಕೊಂಡಿದ್ದರು.

ದರ್ಶನ್ ಒಬ್ಬ ರಜನಿಕಾಂತ್

ದರ್ಶನ್ ಒಬ್ಬ ರಜನಿಕಾಂತ್

''ದರ್ಶನ್ ಒಂದು ರೀತಿಯಲ್ಲಿ ನನ್ನ ಕ್ಯಾರೆಕ್ಟರ್. ನಾನಾದ್ರು ಸ್ವಲ್ಪ ನೇರ ನುಡಿ ಅಂದು ಬಿಡುತ್ತೇನೆ. ಆದ್ರೆ, ಅವನು ಯಾರಿಗೂ ಏನೂ ಅನ್ನಲ್ಲ. ಒಬ್ಬನೇ ನೋವು ತಿಂತಾನೆ ಒಳಗೆ ಇಟ್ಕೊಂಡು. ನನ್ನ ಪ್ರಕಾರ ಅವನು ಒಪನ್ ಅಪ್ ಆದ್ರೆ, ಅವನು ಕನ್ನಡದ ರಜನಿಕಾಂತ್'' ಎಂದು ಜಗ್ಗೇಶ್ ಅವರು ಈ ಹಿಂದೆ ಹೇಳಿದ್ದರು.

More from Filmibeat

English summary
Kannada senior actor K S Ashwath son Shankar has taken his facebook account to thank Darshan. Shankar Ashwath playing a small role in Darshan's 51th movie Yajamana. The movie is producing by Shailaja Nag and P.Kumar will be directing this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X