ಅಂದು ರಾಜಣ್ಣ - ಅಶ್ವಥ್, ಇಂದು ಪುನೀತ್ - ಶಂಕರ್ ಅಶ್ವಥ್

ನಟ ಶಂಕರ್ ಅಶ್ವಥ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಳೆಯ ನೆನೆಪುಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಾ ಇರುತ್ತಾರೆ. ಅದೇ ರೀತಿ ಇದೀಗ ಪುನೀತ್ ಜೊತೆಗಿನ ಹಳೆಯ ಫೋಟೋವನ್ನು ಶೇರ್ ಮಾಡಿದ್ದಾರೆ.

''ಅಂದು ರಾಜ್ ರ ರತ್ನ ಇಂದು 'ಯುವರತ್ನ'ರಾಗಿ ಅವರೊಂದಿಗೆ ಚಿತ್ರೀಕರಣದ ಸಮಯದಲ್ಲಿ'' ಎಂದು ಬರೆಯುವ ಮೂಲಕ ಹಳೆಯ ನೆನೆಪನ್ನು ಹೇಳಿಕೊಂಡಿದ್ದಾರೆ. ಪುನೀತ್ ಜೊತೆಗೆ 'ಯುವರತ್ನ' ಸಿನಿಮಾದಲ್ಲಿ ಶಂಕರ್ ಅಶ್ವಥ್ ನಟಿಸುತ್ತಿದ್ದಾರೆ.

ರಾಜ್ ಕುಮಾರ್ ಹಾಗೂ ಅಶ್ವಥ್ ಜೋಡಿ ಅನೇಕ ಸಿನಿಮಾಗಳಲ್ಲಿ ಒಂದಾಗಿತ್ತು. 'ಕಸ್ತೂರಿ ನಿವಾಸ'ದಂತಹ ಎಷ್ಟೋ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿತ್ತು. ರಾಜ್ ಕುಮಾರ್ ಸಿನಿಮಾಗೆ ಅಶ್ವಥ್ ತಮ್ಮ ಪಾತ್ರದ ಮೂಲಕ ಶಕ್ತಿ ತುಂಬುತ್ತಿದ್ದರು.

shankar ashwath playing a role in yuvarathna movie

ಅಪ್ಪಂದಿರ ನಂತರ ಈಗ ಮಕ್ಕಳು ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಯುವರತ್ನ'ದಲ್ಲಿ ಒಂದು ಪಾತ್ರದಲ್ಲಿ ಶಂಕರ್ ಅಶ್ವಥ್ ನಟಿಸುತ್ತಿದ್ದಾರೆ.

ಈ ಹಿಂದೆ ಪುನೀತ್ ರಾಜ್ ಕುಮಾರ್ ಕೂಡ 'ಭಾಗ್ಯವಂತರು' ಸಿನಿಮಾದಲ್ಲಿ ಅಶ್ವಥ್ ಅವರ ಜೊತೆಗೆ ತೆರೆ ಹಂಚಿಕೊಂಡಿದ್ದರು. ಈ ಸಿನಿಮಾದ ಹಾಡು, ದೃಶ್ಯಗಳು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಹಾಗೆಯೆ ಇವೆ.

More from Filmibeat

English summary
Kannada actor Shankar Ashwath playing a role in Puneeth Rajkumar's 'Yuvarathna' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X