13 ವರ್ಷದ ಹಳೆಯ ಫೋಟೋ ಹಿಂದಿನ ಕಥೆ ಹೇಳಿದ ಶಂಕರ್ ಅಶ್ವಥ್

ನಟ ಶಂಕರ್ ಅಶ್ವಥ್ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಚಿತ್ರರಂಗದ ಹಳೆಯ ಅನೇಕ ನೆನೆಪುಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. 'ಯಜಮಾನ' ಸಿನಿಮಾದ ನಂತರ ಅವರು 'ಪೊಗರು' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ.

ಇದೀಗ ನಟ ಅರ್ಜುನ್ ಸರ್ಜಾ ಅವರ ಗುಣದ ಬಗ್ಗೆ ಶಂಕರ್ ಅಶ್ವತ್ ಬರೆದುಕೊಂಡಿದ್ದಾರೆ. 'ಪೊಗರು' ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಜೊತೆಗೆ ನಟಿಸುತ್ತಿರುವ ಶಂಕರ್ ಅಶ್ವಥ್, ಅರ್ಜುನ್ ಸರ್ಜಾ ಅವರ ಒಂದು ಫೋಟೋ ಹಿಂದಿನ ಘಟನೆಯನ್ನು ಹಂಚಿಕೊಂಡಿದ್ದಾರೆ.

ಹದಿಮೂರು ವರ್ಷಗಳ ಹಿಂದೆ ತಮ್ಮ ಮನೆಗೆ ಅರ್ಜುನ್ ಸರ್ಜಾ ಹಾಗೂ ಧ್ರುವ ಸರ್ಜಾ ಬಂದಿದ್ದರಂತೆ. ಈ ವೇಳೆ ಎಲ್ಲರೂ ಸೇರಿ ಒಂದು ಫೋಟೋ ತೆಗೆಸಿಕೊಂಡಿದ್ದರು. ಆ ಫೋಟೋ ಈಗ ಮತ್ತೆ ಶಂಕರ್ ಅಶ್ವಥ್ ಕೈ ಸೇರಿದೆ.

ಅಪರೂಪದ ಫೋಟೋ ನೋಡಿದ ಶಂಕರ್ ಅಶ್ವಥ್, ಸರ್ಜಾ ಕುಟುಂಬದ ಪ್ರೀತಿಯನ್ನು ಈ ರೀತಿಯಾಗಿ ನೆನೆದಿದ್ದಾರೆ. ಮುಂದೆ ಓದಿ...

ಇದು ನೈಜ ಸಂಗತಿ

ಇದು ನೈಜ ಸಂಗತಿ

''ಗ್ರೇಟ್ ಅರ್ಜುನ್ ಸರ್ಜಾ ಅವರ ಈ ಗುಣಕ್ಕೆ ಏನೆಂದು ನಾ ಹೇಳಲಿ. ಇದು ಸತ್ಯ ನಾನು ಹೈದರಾಬಾದ್ ನಲ್ಲಿ 'ಪೊಗರು' ಚಿತ್ರೀಕರಣಕ್ಕೆ ಹೋದ ಸಂದರ್ಭದಲ್ಲಿ ನಡೆದ ನೈಜ ಸಂಗತಿ ಇದರಲ್ಲಿ ಯಾವ ಉಪ್ಪು ಸೊಪ್ಪು ಬೆರತಿಲ್ಲ. ನಾಯಕ ನಟರಾದ ಧ್ರುವ ಸರ್ಜಾ "ನಾನು ಚಿಕ್ಕವನಿದ್ದಾಗ ನಿಮ್ಮ ಮನೆಗೆ ಮಾಮ ಅರ್ಜುನ್ ಸರ್ಜಾ ಜೊತೆಯಲ್ಲಿ ಬಂದಿದ್ದೆ" ಅಂದಾಗ ನನಗೆ ಜ್ಞಾಪಕ ಬರಲಿಲ್ಲ. - ಶಂಕರ್ ಅಶ್ವಥ್, ನಟ

ಫೋಟೋ ಕಳುಹಿಸಿದ ಅರ್ಜುನ್ ಸರ್ಜಾ

"ನಾಳೆ ನೀವು ಇರ್ತೀರಾ ಮಾಮನೂ ಇಲ್ಲಿ ಬೇರೆ ಚಿತ್ರೀಕರಣ ಕ್ಕೆ ಬಂದಿದ್ದಾರೆ ಅವರ ಹತ್ತಿರ ಆ ಫೋಟೋ ಇದೆ ತೋರಿಸ್ತೇನೆ ಎಂದು ಧ್ರುವ ಹೇಳಿದಾಗ, ಇಲ್ಲಾ ನಾನು ಬೇರೆ ಚಿತ್ರೀಕರಣಕ್ಕೆ ಕೋಲಾರಕ್ಕೆ ಹೋಗಬೇಕೆಂದೆ. ಆಗ ತಕ್ಷಣವೇ ಅರ್ಜುನ್ ಸರ್ಜಾಗೆ ಫೋನ್ ಮಾಡಿ ಅವರ ಮೊಬೈಲ್ ನಲ್ಲಿದ್ದ ಈ ಫೋಟೋ ತರಿಸಿಕೊಂಡು ನನಗೆ ಕಳುಹಿಸಿದರು. - ಶಂಕರ್ ಅಶ್ವಥ್, ನಟ

ಎಂತಹ ದೊಡ್ಡ ಮನುಷ್ಯ!

ಎಂತಹ ದೊಡ್ಡ ಮನುಷ್ಯ!

''ಇಲ್ಲಿ ಗಮನಿಸಬೇಕಾದ ವಿಷಯವೆಂದರೆ 2006 ನೇ ಇಸವಿಯಲ್ಲಿ ನಮ್ಮ ತಂದೆಯನ್ನು ನೋಡಲು ಬಂದಾಗ ತೆಗೆದ ಈ ಫೋಟೋ ಹದಿಮೂರು ವರ್ಷಗಳ ನಂತರವೂ ಅರ್ಜುನ್ ಸರ್ಜಾರ ಮೊಬೈಲ್ ನಲ್ಲಿದೆ ಎಂದರೆ ಆತ ನನ್ನ ತಂದೆಗೆ ಎಷ್ಟು ಗೌರವ ಕೊಡುತ್ತಾರೆ, ಎಂತಹ ದೊಡ್ಡ ಮನುಷ್ಯ!!'' - ಶಂಕರ್ ಅಶ್ವಥ್, ನಟ

'ಯಜಮಾನ' ನಂತರ 'ಪೊಗರು'

'ಯಜಮಾನ' ನಂತರ 'ಪೊಗರು'

ಅವಕಾಶಗಳು ಇಲ್ಲ ಎಂದು ದುಃಖದಲ್ಲಿ ಇದ್ದ ಶಂಕರ್ ಅಶ್ವಥ್ ರಿಗೆ ಈಗ ಒಂದರ ನಂತರ ಒಂದು ಅವಕಾಶಗಳು ಸಿಗುತ್ತಿವೆ. 'ಯಜಮಾನ' ಸಿನಿಮಾದಲ್ಲಿ ದರ್ಶನ್ ಜೊತೆಗೆ ನಟಿಸಿದ್ದ ಇವರು ಈಗ ಧ್ರುವ ಸರ್ಜಾ ಜೊತೆಗೆ 'ಪೊಗರು' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ನಂತರ ಮತ್ತೊಂದು ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

More from Filmibeat

English summary
Kannada actor Shankar Ashwath spoke about Arjun Sarja. After 'Yajamana' Shankar Ashwath now doing a movie with Dhruva Sarja.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X