ಏನೋ ಹೇಳಲು ಬಂದ ಶಂಕರ್ ಅಶ್ವಥ್ ಗೆ 'ಬೇಡ' ಎಂದು ತಡೆದ ದರ್ಶನ್

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗಿಯಾಗಿದ್ದಾಗ ನೀವು ಗಮನಿಸಿರಬಹುದು. ದರ್ಶನ್ ಅವರ ಅಂದಿನ ಮ್ಯಾನೇಜರ್ ಮಲ್ಲಿಕಾರ್ಜುನ್, ದರ್ಶನ್ ಬಗ್ಗೆ ಏನೋ ಹೇಳಲು ಮುಂದಾಗ್ತಾರೆ. ದರ್ಶನ್ ಮಾಡಿದ ಸಹಾಯದ ಕುರಿತು ಟಿವಿ ಕಾರ್ಯಕ್ರಮದಲ್ಲಿ ಹೇಳಲು ಬಯಸಿದಾಗ, ಸ್ವತಃ ದರ್ಶನ್ ಅವರೇ ಮಲ್ಲಿಕಾರ್ಜುನ ಅವರನ್ನ ತಡೆಯುತ್ತಾರೆ. ''ನಿಲ್ಲಿಸಿ, ಅಲ್ಲೇ ನಿಲ್ಲಿಸು'' ಎಂದು ಹೇಳಲು ಬಿಡುವುದಿಲ್ಲ.

ಈ ಸನ್ನಿವೇಶವೊಂದು ಸಾಕು. ದರ್ಶನ್ ಅವರ ವ್ಯಕ್ತಿತ್ವದ ಬಗ್ಗೆ ಹೇಳಲು. ಒಂದು ಕೈಗೆ ಮಾಡಿದ ಸಹಾಯವನ್ನ ಮತ್ತೊಂದು ಕೈಗೆ ಗೊತ್ತಾಗದ ರೀತಿ ನೋಡಿಕೊಳ್ಳುವ ದಾಸ, ತನ್ನ ಆಪ್ತರು, ಸುತ್ತಮುತ್ತಲಿನ ಸ್ನೇಹಿತರ ಕಷ್ಟಗಳಿಗೆ ಸ್ಪಂದಿಸಿರುವ ಉದಾಹರಣೆಗಳಿವೆ. ಆದ್ರೆ, ಅದ್ಯಾವುದು ಹೊರ ಜಗತ್ತಿಗೆ ಗೊತ್ತಾಗಲ್ಲ.

ಇದೀಗ, ಇಂತಹದ್ದೇ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ. ನಿನ್ನೆಯಷ್ಟೇ ಮೈಸೂರಿನಲ್ಲಿ ಯಜಮಾನ ಚಿತ್ರದ ಸಕ್ಸಸ್ ಮೀಟ್ ಹಮ್ಮಿಕೊಂಡಿದ್ದರು. ಈ ಸುದ್ದಿಗೋಷ್ಠಿಯಲ್ಲಿ ಹಿರಿಯ ನಟ ಶಂಕರ್ ಅಶ್ವಥ್ ಕೂಡ ಭಾಗವಹಿಸಿದ್ದರು. ಮುಂದೆ ಓದಿ....

ಏನೋ ಹೇಳಲು ಬಂದ ಶಂಕರ್ ಅಶ್ವಥ್

ಏನೋ ಹೇಳಲು ಬಂದ ಶಂಕರ್ ಅಶ್ವಥ್

ಯಜಮಾನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಂಕರ್ ಅಶ್ವಥ್, ''ನಾನು ದರ್ಶನ್ ಅವರ ಬಗ್ಗೆ ಒಂದು ವಿಷ್ಯ ಹೇಳಲೇಬೇಕು, ಅದನ್ನ ಯಾರಿಗೂ ಹೇಳಬಾರದು ಎಂದು ಹೇಳಿದ್ದಾರೆ. ಆದ್ರೂ ನನಗೆ ಹೇಳದೇ ಇರಲು ಸಾಧ್ಯವಾಗುತ್ತಿಲ್ಲ. ದರ್ಶನ್ ಅವರ ಅನುಮತಿ ಪಡೆದು ನಾನು ಹೇಳಲು ಬಯಸುತ್ತೇನೆ'' ಎಂದರು.

ಗುರುಗಳೇ ಆಮೇಲೆ ಮಾತಾಡೋಣ

ಗುರುಗಳೇ ಆಮೇಲೆ ಮಾತಾಡೋಣ

'ನನ್ನ ತಂದೆ ತೀರಿಕೊಂಡಾಗ....' ಎಂದು ಮಾತು ಆರಂಭಿಸಿದ ಶಂಕರ್ ಅಶ್ವಥ್ ಅವರಿಗೆ ''ಗುರುಗಳೇ ಆಮೇಲೆ ಮಾತಾಡೋಣ....ಬೇಡ ನಿಲ್ಲಿಸಿ'' ಎಂದು ತಾಕೀತು ಹಾಕಿದ್ರು. 'ಸರಿ ಅವರಿಗೆ ಬೇಜಾರು ಮಾಡುವುದು ಬೇಡ' ಅಂತ ಹೇಳಿ ಶಂಕರ್ ಅಶ್ವಥ್ ಕೂಡ ಸುಮ್ಮನಾದರು.

ಅಶ್ವಥ್ ಪುತ್ರನಿಗೆ ಅವಕಾಶ ಕೊಟ್ಟಿದ್ದ ದಾಸ

ಅಶ್ವಥ್ ಪುತ್ರನಿಗೆ ಅವಕಾಶ ಕೊಟ್ಟಿದ್ದ ದಾಸ

ಅಂದ್ಹಾಗೆ, ಸಿನಿಮಾಗಳಲ್ಲಿ ಅವಕಾಶ ಇಲ್ಲದೇ ಜೀವನಕ್ಕಾಗಿ ಓಲಾ ಕ್ಯಾಬ್ ಚಾಲನೆ ಮಾಡುತ್ತಿದ್ದ ಶಂಕರ್ ಅವರಿಗೆ, ಅದೇ ಸಮಯದಲ್ಲಿ ಸಹಾಯಕ್ಕೆ ಬಂದಿದ್ದು ಯಜಮಾನ ಚಿತ್ರತಂಡ. ತಮ್ಮ ಚಿತ್ರದಲ್ಲಿ ನಟಿಸಲು ಅವಕಾಶ ಕೊಟ್ಟು, ಹಿರಿಯ ನಟನ ಬೆಂಬಲಕ್ಕೆ ನಿಂತಿತ್ತು. ಅದಕ್ಕೆ ನಟ ದರ್ಶನ್ ಕಾರಣ ಎಂದು ಹೇಳಲಾಗಿತ್ತು.

ಅದನ್ನ ಮೀರಿದ ವಿಷ್ಯ ಏನೋ ಇದೆ

ಅದನ್ನ ಮೀರಿದ ವಿಷ್ಯ ಏನೋ ಇದೆ

ಬಟ್, ಈ ವಿಷ್ಯ ಎಲ್ಲರಿಗೂ ಗೊತ್ತಿರೋದೇ. ಆದ್ರೆ, ಹೊರಜಗತ್ತಿಗೆ ಗೊತ್ತಿಲ್ಲದೇ ಇರೋದು ಏನೋ ಇದೆ. ಅದನ್ನೇ ಶಂಕರ್ ಅಶ್ವಥ್ ಹೇಳಲು ಬಂದಿದ್ದು. ತಂದೆ ತೀರಿ ಕೊಂಡಾಗ ಎಂದು ಮಾತು ಆರಂಭಿಸುವ ಮುನ್ನವೇ ದರ್ಶನ್ ಬೇಡವೆಂದರು. ಬಹುಶಃ ಈ ಹಿಂದೆ ಯಾವುದೋ ಸಂದರ್ಭದಲ್ಲಿ ಅಶ್ವಥ್‌ ಕುಟುಂಬಕ್ಕೆ ಅಥವಾ ಶಂಕರ್ ಅಶ್ವಥ್‌ ಅವರಿಗೆ ದರ್ಶನ್ ನೆರವಾಗಿರಬಹುದು. ಅದನ್ನ ಹೇಳಲು ಬಂದಾಗ, ಬೇಡ ಎಂದು ನಿಲ್ಲಿಸರಬಹುದು ಎಂದು ಊಹಿಸಬಹುದು.

More from Filmibeat

English summary
Kannada senior actor shankar ashwath try tell something about darshan in yajamana success press meet. but, darshan stopped to him.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X