ಶಂಕರ್ ನಾಗ್ - ಅಂಬರೀಶ್ ಭಲೇ ಜೋಡಿಯ ಚಿತ್ರಗಳು
ನಟ ಅಂಬರೀಶ್ ರನ್ನು ಕಳೆದುಕೊಂಡ ಕನ್ನಡ ನಾಡಿನ ಜನ ಕಂಗಾಲಾಗಿದ್ದಾರೆ. ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಹಾಗೂ ಅಂಬರೀಶ್ ಈ ನಾಲ್ಕು ಮೇರು ನಟರು ಅಭಿಮಾನಿಗಳಿಂದ ದೈಹಿಕವಾಗಿ ದೂರವಾಗಿದ್ದಾರೆ.

ಅಂಬರೀಶ್ ಎಲ್ಲರ ಜೊತೆಗೆ ಸ್ನೇಹದಿಂದ ಇದ್ದ ವ್ಯಕ್ತಿ. ರಾಜ್ ರನ್ನು ಅಣ್ಣನೆಂದು ಭಾವಿಸಿದ್ದ ಇವರು, ತಮ್ಮ ಸಹ ಕಲಾವಿದರಾದ ವಿಷ್ಣುವರ್ಧನ್ ಹಾಗೂ ಶಂಕರ್ ನಾಗ್ ರನ್ನು ಸ್ನೇಹಿತರಂತೆ ನೋಡುತ್ತಿದ್ದರು. ರಾಜ್ ಕುಮಾರ್, ವಿಷ್ಣುವರ್ಧನ್ ಹಾಗೂ ಶಂಕರ್ ನಾಗ್ ಮೂರು ನಟರ ಜೊತೆಗೆ ನಟಿಸಿರುವ ಖ್ಯಾತಿ ಅಂಬರೀಶ್ ಅವರಿಗೆ ಇದೆ. ಅದರಲ್ಲಿಯೂ ಶಂಕರ್ ನಾಗ್ ಮತ್ತು ಅಂಬರೀಶ್ ಕಾಂಬಿನೇಶನ್ ನಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ.
ಇಬ್ಬರೂ ದೊಡ್ಡ ಸ್ಟಾರ್ ಗಳಾದರೂ, ಅಂಬರೀಶ್ ಮತ್ತು ಶಂಕರ್ ನಾಗ್ ಒಟ್ಟಿಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಭಾರಿ ಭರ್ಜರಿ ಭೇಟಿ', 'ಒಂದು ಹೆಣ್ಣು ಆರು ಕಣ್ಣು', 'ಸಾಂಗ್ಲಿಯಾನ', 'ಮಹಾ ಪ್ರಚಂಡರು', 'ದಿಗ್ವಿಜಯ', 'ಕಾಳಿಂಗ ಸರ್ಪ', ಅಂತಿಂಥ ಗಂಡು ನಾನಲ್ಲ'' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಇವರು ತೆರೆ ಹಂಚಿಕೊಂಡಿದ್ದಾರೆ.
ಶಂಕರ್ ನಾಗ್ ರವರು ಸಪ್ಟೆಂಬರ್ 30 ರಂದು ಕಾರು ಅಪಘಾತದಲ್ಲಿ ವಿಧಿವಶರಾದರು. ಅಂಬರೀಶ್ ನವೆಂಬರ್ 24 ರಂದು ನಿಧನರಾಗಿದ್ದಾರೆ.


Click it and Unblock the Notifications











