ದಶಕಗಳು ಕಳೆದರೂ ಶಂಕ್ರಣ್ಣನ ಬಿಡದ ಆಟೋ ನಂಟು

By Rajendra
<ul id="pagination-digg"><li class="previous"><a href="/news/when-shankar-nag-comes-asking-by-sushma-veerappa-075132.html">« Previous</a>

ಈ ಸಾಕ್ಷ್ಯಚಿತ್ರ ಇಂದಿನ ಬೆಂಗಳೂರು ಬದುಕಿನೊಳಗೊಂದು ಇಣುಕು ನೋಟ ಬೀರುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಹಾಸುಹೊಕ್ಕಾಗಿರುವ ಜಾಗತೀಕರಣವು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಹೊಸಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಇದರ ಜೊತೆಗೆ ಲೆಕ್ಕವಿಲ್ಲದಷ್ಟು ಸಮಸ್ಯೆಗಳನ್ನು ಹುಟ್ಟುಹಾಕಿದೆ. ಈ ಸಾಕ್ಷ್ಯಚಿತ್ರ ಇಂತಹ ಅನೇಕ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತದೆ.

ಬಸವೇಶ್ವರನಗರದ ಶಂಕರ್ ನಾಗ್ ಆಟೋ ಸ್ಟ್ಯಾಂಡ್ ನ ಆಟೋ ಚಾಲಕರ ಸುತ್ತ ಸುತ್ತುವ ಕಥೆ ಇದು. ತಮ್ಮ ಬದುಕು ಬವಣೆ, ಏಳುಬೀಳುಗಳ ಬಗ್ಗೆ ಕಥೆ ಸಾಗುತ್ತದೆ. ಗ್ಯಾಸ್ ಸಬ್ಸಿಡಿ ಸಮಸ್ಯೆ, ಅತಿಹೆಚ್ಚು ಬಡ್ಡಿಗೆ ಸಾಲ, ಸೂಕ್ತ ಸೌಲಭ್ಯಗಳಿಲ್ಲದೇ ಇರುವುದು, ತಮ್ಮ ಗೋಳು ಕಿವಿಗೆ ಹಾಕಿಕೊಳ್ಳದ ಸಂಘ ಸಂಸ್ಥೆಗಳ ಬಗ್ಗೆ ಬಿಚ್ಚಿಕೊಳ್ಳುತ್ತದೆ.

Shankar Nag
ದಶಕಗಳು ಕಳೆದರೂ ಶಂಕರ್ ನಾಗ್ ಅವರು ಇವರ ಬದುಕಿನೊಂದಿಗೆ ತಳುಕು ಹಾಕಿಕೊಂಡಿರುವ ಪರಿಯನ್ನು ಬಿಂಬಿಸುತ್ತದೆ. ಈಗಾಗಲೆ ಹಲವಾರು ಪ್ರದರ್ಶನಗಳನ್ನು ಕಂಡಿರುವ 'ಶಂಕರ್ ನಾಗ್ ಕೇಳ್ಕೊಂಡ್ ಬಂದಾಗ' ಡಿವಿಡಿ ಬೆಂಗಳೂರಿನ ಸಪ್ನ ಪುಸ್ತಕ ಮಳಿಗೆ, ಸ್ನೇಹಾ ಬುಕ್ ಹೌಸ್ ಹಾಗೂ ಟೋಟಲ್ ಕನ್ನಡ ಮಳಿಗೆಗಳಲ್ಲಿ ಲಭ್ಯ.

ಸುಷ್ಮಾ ವೀರಪ್ಪ ಅವರ ನಿರ್ದೇಶನ. ಕ್ಯಾಮೆರಾ: ವಿನೋದ್ ರಾಜ್. ಧ್ವನಿಗ್ರಹಣ: ಅರುಣ್ ರಾಮ ವರ್ಮ. ಸಂಕಲನ: ಸುಷ್ಮಾ ವೀರಪ್ಪ ಮತ್ತು ವಸಂತ್ ಕುಮಾರ್. ಅನಿಮೇಷನ್: ಅರ್ಚನಾ ಹಂದೆ. ನಿರ್ಮಾಣ: ಕೌದಿ.

ಸುಷ್ಮಾ ವೀರಪ್ಪ ಕುರಿತು: ಮುಂಬೈನ ಸೋಫಿಯಾ ಪಾಲಿಟೆಕ್ನಿಕ್ ನಲ್ಲಿ ಸೋಷಿಯಲ್ ಕಮ್ಯುನಿಕೇಷನ್ಸ್ ಮೀಡಿಯಾದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದಿರುವ ಇವರು ಬಳಿಕ ಬೆಂಗಳೂರು ಫಿಲಂ ಸೊಸೈಟಿ ಸೇರಿದರು.

ಶಾಲಾ ಮಕ್ಕಳಿಗೆ ಶಿಕ್ಷಣ ಕಾರ್ಯಕ್ರಮ ಕುರಿತಾದ ಚಿತ್ರಗಳನ್ನು ಮಾಡಿದ್ದಾರೆ. 1998ರಿಂದ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ. ಮಹಿಳೆ ಮತ್ತು ದೌರ್ಜನ್ಯ, ಮಳೆ ನೀರಿನ ಸಂಗ್ರಹ, ನಾಯಕತ್ವ ಸಮಸ್ಯೆಗಳು ಹೀಗೆ ಅವರು ಅನೇಕ ಕೋನಗಳಲ್ಲಿ ತಮ್ಮ ದೃಷ್ಟಿ ಬೀರಿದ್ದಾರೆ. ಬದಲಾಗುತ್ತಿರುವ ನಗರ ಜೀವನದ ಬಗ್ಗೆ ಈಗವರ ಆಸಕ್ತಿ. ಅದರ ಪರಿಣಾಮವೇ 'ಶಂಕರ್ ನಾಗ್ ಕೇಳ್ಕೊಂಡ್ ಬಂದಾಗ'.

<ul id="pagination-digg"><li class="previous"><a href="/news/when-shankar-nag-comes-asking-by-sushma-veerappa-075132.html">« Previous</a>

More from Filmibeat

English summary
“When Shankar Nag Comes Asking” (The original version is in Kannada called ‘SHANKAR NAG KELKOND BANDAAGA’ with English subtitles), is a documentary by film maker Sushma Veerappa. The film revolves around the auto drivers of the Shankar Nag auto stand in Basaveshwarnagar, who narrate their survival stories: woes of repaying loans with high interest, no gas subsidies, lack of welfare schemes. &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X