twitter
    For Quick Alerts
    ALLOW NOTIFICATIONS  
    For Daily Alerts

    ಶಂಕರ್ ನಾಗ್ ನಿರ್ದೇಶನದ ಈ 7 ಚಿತ್ರಗಳನ್ನ ನೋಡಲೇಬೇಕು

    |

    ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ನಟರ ಪೈಕಿ ಶಂಕರ್ ನಾಗ್ ಕೂಡ ಪ್ರಮುಖರು. ಶಂಕರ್ ನಾಗ್ ಓರ್ವ ಅದ್ಭುತ ನಟ ಎನ್ನುವುದಕ್ಕಿಂತ ಅವರೊಬ್ಬ ಅದ್ಭುತ ತಂತ್ರಜ್ಞ ಎನ್ನುವುದನ್ನ ಕನ್ನಡ ಚಿತ್ರರಂಗ ನಂಬಿತ್ತು.

    ಅದಕ್ಕೆ ಅವರು ನಿರ್ದೇಶನದ ಚಿತ್ರಗಳೇ ಸಾಕ್ಷಿ. ಶಂಕರ್ ನಾಗ್ ನಟನೆಯ ಜೊತೆ ಹಲವು ಚಿತ್ರಗಳನ್ನ ನಿರ್ದೇಶಿಸಿದ್ದಾರೆ. ಕರಾಟೆ ಕಿಂಗ್ ನಿರ್ದೇಶನದ ಚಿತ್ರಗಳ ಮೇಲೆ ಅಭಿಮಾನಿಗಳಿಗೂ ವಿಶೇಷ ಒಲವಿತ್ತು.

    ಶಂಕರ್ ನಾಗ್ ಗೆ 'ಕೋತಿ' ಎಂದಿದ್ದ ಆ ಬಜಾರಿ ನಟಿ ಯಾರು.?ಶಂಕರ್ ನಾಗ್ ಗೆ 'ಕೋತಿ' ಎಂದಿದ್ದ ಆ ಬಜಾರಿ ನಟಿ ಯಾರು.?

    ಹಾಗಿದ್ರೆ, ಶಂಕರ್ ನಾಗ್ ನಿರ್ದೇಶನದ ಚಿತ್ರಗಳ ಪೈಕಿ ಕೆಲವು ಚಿತ್ರಗಳನ್ನ ನೋಡಲೇಬೇಕು. ನೀವು ನೋಡದೆ ಇದ್ದರೆ, ಈಗಲೇ ಆ ಸಿನಿಮಾಗಳನ್ನ ನೋಡುವ ಪ್ರಯತ್ನ ಮಾಡಿ. ಶಂಕ್ರಣ್ಣನ ನಿರ್ದೇಶನದ ಟಾಪ್ 7 ಚಿತ್ರಗಳು ಯಾವುದು?

    ಮಿಂಚಿನ ಓಟ....

    ಮಿಂಚಿನ ಓಟ....

    ಗಿರೀಶ್ ಕಾರ್ನಡ್ ಅವರ ಒಂದಾನೊಂದು ಕಾಲದಲ್ಲಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಶಂಕರ್ ನಾಗ್, ಕೆಲವು ಸಿನಿಮಾದಲ್ಲಿ ನಟಿಸಿದರು. 1980ರಲ್ಲಿ 'ಮಿಂಚಿನ ಓಟ' ಚಿತ್ರ ನಿರ್ದೇಶನ ಮಾಡುವ ಮೂಲಕ ಶಂಕರ್ ನಾಗ್ ಡೈರೆಕ್ಟರ್ ಕ್ಯಾಪ್ ತೊಟ್ಟರು. ಅನಂತ್ ನಾಗ್, ಶಂಕರ್ ನಾಗ್, ಲೋಕನಾಥ್, ಪ್ರಿಯಾ ತೆಂಡೂಲ್ಕರ್, ರಮೇಶ್ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

    ಜನ್ಮ ಜನ್ಮದ ಅನುಬಂಧ

    ಜನ್ಮ ಜನ್ಮದ ಅನುಬಂಧ

    ಮೊದಲ ಸಿನಿಮಾದಲ್ಲಿ ತಮ್ಮ ನಿರ್ದೇಶನದ ಛಾಪು ಎಂತಹದ್ದು ಎಂದು ಸಾಬೀತು ಮಾಡಿದ ಶಂಕರ್ ನಾಗ್, ನಂತರ ಮತ್ತಷ್ಟು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದರು. ಶಂಕರ್ ನಾಗ್ ನಿರ್ದೇಶನದಲ್ಲಿ ಬಂದ ಮತ್ತೊಂದು ಸಿನಿಮಾ 'ಜನ್ಮ ಜನ್ಮದ ಅನುಬಂಧ'. ಪೂರ್ವ ಜನ್ಮದ ಕಥೆ ಹೊಂದಿದ್ದ ಈ ಚಿತ್ರದಲ್ಲಿ ಅನಂತ್ ನಾಗ್, ಶಂಕರ್ ನಾಗ್, ಜಯಂತಿ ನಟಿಸಿದ್ದರು.

    ಮ್ಯೂಸಿಕಲ್ ಹಿಟ್ ಗೀತಾ

    ಮ್ಯೂಸಿಕಲ್ ಹಿಟ್ ಗೀತಾ

    ಶಂಕರ್ ನಾಗ್ ವೃತ್ತಿ ಜೀವನದಲ್ಲಿ ಬಹುದೊಡ್ಡ ಹೆಸರು ತಂದುಕೊಟ್ಟ ಸಿನಿಮಾ ಗೀತಾ. ಮ್ಯೂಸಿಕಲ್ ಆಗಿ ಸೂಪರ್ ಸಕ್ಸಸ್ ತಂದ ಗೀತಾ, ಕನ್ನಡ ಚಿತ್ರರಂಗದ ಎವರ್ ಗ್ರೀನ್ ಚಿತ್ರಗಳಲ್ಲಿ ಒಂದು. ಶಂಕರ್ ನಾಗ್, ಪದ್ಮಾವತಿ ರಾವ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.

    ಶಂಕರ್ ನಾಗ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಮಾಹಿತಿ ಬಾಯ್ಬಿಟ್ಟ ಜೈಜಗದೀಶ್.!ಶಂಕರ್ ನಾಗ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಮಾಹಿತಿ ಬಾಯ್ಬಿಟ್ಟ ಜೈಜಗದೀಶ್.!

    ಹೊಸ ತೀರ್ಪು

    ಹೊಸ ತೀರ್ಪು

    ಶಂಕರ್ ನಾಗ್ ನಿರ್ದೇಶನದಲ್ಲಿ ಮೂಡಿಬಂದ ಇನ್ನೊಂದು ಚಿತ್ರ ಹೊಸತೀರ್ಪು. ರೆಬೆಲ್ ಸ್ಟಾರ್ ಅಂಬರೀಶ್, ಮಂಜುಳ, ಜಯಂತಿ, ಜಯಮಾಲ, ಅನಂತ್ ನಾಗ್ ಈ ಚಿತ್ರದಲ್ಲಿ ನಟಿಸಿದ್ದರು.

    ನೋಡಿಸ್ವಾಮಿ ನಾವಿರೋದು ಹೀಗೆ

    ನೋಡಿಸ್ವಾಮಿ ನಾವಿರೋದು ಹೀಗೆ

    ಶಂಕರ್ ನಾಗ್ ನಿರ್ದೇಶನದ ಸೂಪರ್ ಹಿಟ್ ಚಿತ್ರಗಳ ಪೈಕಿ ಥಟ್ ಅಂತ ನೆನಪಾಗುವುದು 'ನೋಡಿಸ್ವಾಮಿ ನಾವಿರೋದು ಹೀಗೆ'. ಸಾಂಸಾರಿಕ ಹಾಸ್ಯ ಪ್ರದಾನ ಚಿತ್ರ ಬಹಳ ಮೆಚ್ಚುಗೆ ಗಳಿಸಿತ್ತು.

    ಆಕ್ಸಿಡೆಂಟ್

    ಆಕ್ಸಿಡೆಂಟ್

    ಶಂಕರ್ ನಾಗ್ ನಿರ್ದೇಶನದಲ್ಲಿ ಬಂದ ಕ್ರೈಂ ಥ್ರಿಲ್ಲರ್ ಚಿತ್ರ ಆಕ್ಸಿಡೆಂಟ್. ಹಿಟ್ ರನ್ ಪ್ರಕರಣದ ಕುರಿತು ಮೂಡಿಬಂದಿದ್ದ ಆಕ್ಸಿಡೆಂಟ್ ಚಿತ್ರದಲ್ಲಿ ರಮೇಶ್ ಭಟ್, ಅನಂತ್ ನಾಗ್ ಹಾಗೂ ಶಂಕರ್ ನಾಗ್ ನಟಿಸಿದ್ದರು.

    ಕೊನೆಯ ಚಿತ್ರ ಒಂದು ಮುತ್ತಿನ ಕಥೆ

    ಕೊನೆಯ ಚಿತ್ರ ಒಂದು ಮುತ್ತಿನ ಕಥೆ

    ಶಂಕರ್ ನಾಗ್ ಕೊನೆಯದಾಗಿ ನಿರ್ದೇಶಿಸಿದ ಚಿತ್ರ ಒಂದು ಮುತ್ತಿನ ಕಥೆ. ಈ ಚಿತ್ರದಲ್ಲಿ ಡಾ ರಾಜ್ ಕುಮಾರ್ ನಾಯಕನಾಗಿದ್ದರು. ಅಣ್ಣಾವ್ರಿಗೆ ಆಕ್ಷನ್ ಕಟ್ ಹೇಳಿದ ಖ್ಯಾತಿಯೂ ಶಂಕರ್ ನಾಗ್ ಅವರಿಗಿದೆ.

    English summary
    Kannada actor, director Shankar Nag directorial movies that you should not miss.
    Sunday, October 27, 2019, 9:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X