»   » ಟ್ವಿಟ್ಟರ್ ನಲ್ಲಿ ಶಂಕರ್ ನಾಗ್ ಮಿಂಚಿನ ಓಟ.!

ಟ್ವಿಟ್ಟರ್ ನಲ್ಲಿ ಶಂಕರ್ ನಾಗ್ ಮಿಂಚಿನ ಓಟ.!

Posted By:
Subscribe to Filmibeat Kannada

ಶಂಕರ್ ನಾಗ್.... ಕನ್ನಡ ಸಿನಿಮಾ ರಂಗದ ವೇಗಧೂತ. ಹೊಸತನವನ್ನ ಸದಾ ಹುಡುಕುತ್ತಾ ಹೊರಟ ನಟ, ನಿರ್ದೇಶಕ, ಧೀಮಂತ ನಾಯಕನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ಶಂಕರ್ ನಾಗ್ ಎಲ್ಲರನ್ನ ಅಗಲಿ ಸಾಕಷ್ಟು ವರ್ಷಗಳೇ ಕಳೆದರೂ ಇಂದಿಗೂ ಅಜರಾಮರವಾಗಿ ಕನ್ನಡ ಸಿನಿಮಾರಂಗ ಹಾಗೂ ಚಿತ್ರ ಪ್ರೇಮಗಳ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ತನ್ನ ನೆಚ್ಚಿನ ನಟ, ಗುರು ಹೀಗೆ ತಮ್ಮದೇ ರೀತಿಯಲ್ಲಿ ಆರಾಧಿಸುವ ಶಂಕರ್ ನಾಗ್ ಅವರಿಗೆ ಟ್ಟಿಟ್ಟರ್ ಮೂಲಕ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ವರ್ಷದ ಪ್ರತಿ ದಿನವೂ ಅಭಿಮಾನಿಗಳ ನೆನಪಿನಲ್ಲಿ ಹಸಿರಾಗಿರುವ ಶಂಕರ್ ನಾಗ್ ಇಂದು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಮಣ್ಣಲ್ಲಿ ಮಣ್ಣಾದ ಮೇಲೆ ಕೆಲವೇ ಕೆಲವರ ಹೆಸರು ನೆನಪಿನಲ್ಲಿ ಉಳಿಯುತ್ತೆ. ಅಂಥವ್ರ ಸಾಲಿನಲ್ಲಿ ಶಂಕರ್ ನಾಗ್ ನಿಂತಿದ್ದಾರೆ. ಟ್ವಿಟ್ಟರ್ ಟ್ರೆಂಡಿಂಗ್ ನ ಎರಡನೇ ಸ್ಥಾನದಲ್ಲಿ ಇಂದು ಶಂಕರ್ ನಾಗ್ ಹೆಸರು ರಾರಾಜಿಸುತ್ತಿದೆ. ಮುಂದೆ ಓದಿರಿ....

ದಶಕಗಳೇ ಕಳೆದರೂ ಮಾಸದ ಶಂಕರ್ ನೆನಪು

ಶಂಕರ್ ನಾಗ್ ಅವ್ರಿಗೆ ಇಂದಿಗೂ ಅಭಿಮಾನಿಗಳ ಬಳಗವಿದೆ, ಅವರನ್ನ ಆರಾಧಿಸುವ ಅದೆಷ್ಟೋ ಜನರು ಇದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲಿಯೂ ಅವರ ಫೋಟೋ ಇಟ್ಟು ಇಂದು ಸಿಹಿ ಹಂಚಿ ಹುಟ್ಟುಹಬ್ಬವನ್ನ ಫ್ಯಾನ್ಸ್ ಆಚರಣೆ ಮಾಡಿದ್ದಾರೆ. ಟ್ವಿಟ್ಟರ್ ಮೂಲಕ ಸಾವಿರಾರು ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ

ಶಂಕರ್ ನಾಗ್ ನೆನಪಿನಲ್ಲಿ ಸುಮಲತಾ

ಶಂಕರ್ ನಾಗ್ ಹುಟ್ಟುಹಬ್ಬಕ್ಕೆ ಶುಭಕೋರಿರುವ ನಟಿ ಸುಮಲತಾ ಅಂಬರೀಶ್, ಶಂಕರ್ ನಾಗ್ ಹಾಗೂ ಅಂಬರೀಶ್ ಒಟ್ಟಿಗೆ ಇರುವ ಫೋಟೋ ಶೇರ್ ಮಾಡಿ ''ಲಕ್ಷಾಂತರ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದುಕೊಂಡಿರುವ ನಟ ಶಂಕರ್ ನಾಗ್'' ಎಂದಿದ್ದಾರೆ.

ಯುವ ನಿರ್ದೇಶಕರಿಗೆ ದ್ರೋಣಾಚಾರ್ಯ

ಶಂಕರ್ ನಾಗ್ ಪ್ರತಿಯೊಬ್ಬರಿಗೂ ಸ್ಫೂರ್ತಿಯ ಚಿಲುಮೆ. ಅನೇಕ ಯುವ ನಿರ್ದೇಶಕರು ಶಂಕರ್ ನಾಗ್ ಅವ್ರನ್ನ ಗುರುಗಳಾಗಿ ಸ್ವೀಕರಿಸಿದ್ದಾರೆ. ನಟ, ನಿರ್ದೇಶಕ ಪವನ್ ಒಡೆಯರ್ ಶಂಕ್ರಣ್ಣನಿಗೆ ವಿಶ್ ಮಾಡುವುದರ ಜೊತೆಗೆ ಅವ್ರ ವಿಭಿನ್ನ ರೀತಿಯ ಸಿನಿಮಾಗಳು ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತಿದ್ವು ಅನ್ನೋದನ್ನ ಟ್ವೀಟ್ ಮಾಡಿದ್ದಾರೆ.

ಶಂಕರ್ ಅಂದ್ರೆ ಎಲ್ಲರಿಗೂ ಪ್ರೀತಿ

ಶಂಕರ್ ನಾಗ್ ಸಿನಿಮಾ ಕ್ಷೇತ್ರವನ್ನೂ ಹೊರತುಪಡಿಸಿ ಆಲೋಚಿಸುತ್ತಿದ್ರು. ಅದಕ್ಕಾಗಿಯೇ ರಾಜಕೀಯ ಗಣ್ಯರು ಅವರ ನೆನಪು ಮಾಡಿಕೊಳ್ತಾರೆ. ಟ್ವಿಟ್ಟರ್ ನಲ್ಲಿ ಬಿ.ಎಸ್.ಯಡಿಯೂರಪ್ಪ ಅವ್ರ ಪೇಜ್ ನಿಂದ ಶಂಕರ್ ನಾಗ್ ಅವ್ರಿಗೆ ಹುಟ್ಟುಹಬ್ಬದ ಶುಭಾಶಯ ಕೋರಲಾಗಿದೆ. ಹೀಗೆ ಲಕ್ಷಾಂತರ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಶಂಕರ್ ನಾಗ್ ಅವ್ರಿಗೆ ಹುಟ್ಟುಹಬ್ಬದ ಶುಭಾಷಯ ಕೋರಿದ್ದಾರೆ.

English summary
#ShankarNag is trending on Twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X